ಮೈಸೂರಲ್ಲಿ ಸಿದ್ದರಾಮಯ್ಯರ ನೇತೃತ್ವದಲ್ಲಿಭಾರೀ ಪ್ರತಿಭಟನೆ

ಬೆಲೆ ಏರಿಕೆ, ೪೦ ಪರ್ಸೆಂಟ್ ಕಮಿಷನ್, ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಆಕ್ರೋಶ

ಸಿದ್ದು ಕಾಲ್ನಡಿಗೆ ಜೊತೆ ಸಾಗಿದ ಕಾರ್ಯಕರ್ತರು

ಬಿಜೆಪಿ ವಿರುದ್ಧ ಘೋಷಣೆ

ಮೈಸೂರು, ಏ.೨೦(ಎಂಟಿವೈ)- ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ, ರಾಜ್ಯ ಸರ್ಕಾರದ ಶೇ.೪೦ರಷ್ಟು ಕಮಿಷನ್ ದಂಧೆ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಪ್ರಚೋ ದನೆ ನೀಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿ ಸುವಂತೆ ಆಗ್ರಹಿಸಿ ಮೈಸೂರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಬೃಹತ್ ಪ್ರತಿಭಟನಾ ಮೆರವಣ ಗೆ ನಡೆಸಿದರು.

ಮೈಸೂರಿನ ಮಹಾತ್ಮಗಾಂಧಿ ವೃತ್ತದಿಂದ ಜಿಲ್ಲಾ ಗ್ರಾಮಾಂ ತರ ಮತ್ತು ನಗರ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರತಿಭಟನೆ ಯಲ್ಲಿ ಪಾಲ್ಗೊಂಡು ಡಿಸಿ ಕಚೇರಿವರೆಗೂ ಮೆರವಣ ಗೆ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಹಾತ್ಮಗಾಂಧಿ ವೃತ್ತದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನಗಾರಿ ಬಾರಿಸುವ ಮೂಲಕ ಪ್ರತಿಭಟನಾ ಮೆರವಣ ಗೆಗೆ ಚಾಲನೆ ನೀಡಿದರೆ, ಕೆ.ಎಸ್.ಈಶ್ವರಪ್ಪ ಮುಖವಾಡ ಧರಿಸಿದ್ದವ ರಿಗೆ ಶಾಸಕ ತನ್ವೀರ್ ಸೇಠ್ ಕೋಳ ತೊಡಿಸುವ ಮೂಲಕ ಬಂಧನದ ಅಣಕು ಪ್ರದರ್ಶನ ನಡೆಸಿ ಗಮನ ಸೆಳೆದರು. ಇದೇ ವೇಳೆ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ಬಿಜೆಪಿ ಸರ್ಕಾರವನ್ನು ಭ್ರಷ್ಟ ಸರ್ಕಾರ ವೆಂದು ಜರಿದು ಧಿಕ್ಕಾರ ಕೂಗಿದರು. ಶೇ.೪೦ ಕಮಿಷನ್ ಪಡೆಯುವ ಸರ್ಕಾರ ಎಂದು ಘೋಷಣೆಗಳನ್ನು ಕೂಗಿದರು. ಈಶ್ವರಪ್ಪ ಬಂಧಿಸುವAತೆ ಆಗ್ರಹಿಸುವ ಪ್ಲೇಕಾರ್ಡ್ಗಳನ್ನು ಪ್ರದರ್ಶಿಸಿ ದರು. ಮೆರವಣ ಗೆಯಲ್ಲಿ ಕಾಂಗ್ರೆಸ್ ಬಾವುಟ ರಾರಾಜಿಸಿತು.
ಗಾಂಧಿ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣ ಗೆ ಒಲಂಪಿಯಾ ವೃತ್ತ, ಚಿಕ್ಕಗಡಿಯಾರ ವೃತ್ತದ ಮಾರ್ಗವಾಗಿ ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ, ವಿನೋಬಾ ರಸ್ತೆ ಮೂಲಕ ಡಿಸಿ ಕಚೇರಿ ತಲುಪಿತು.ಮೆರವಣ ಗೆಯುದ್ದಕ್ಕೂ ಪಕ್ಷದ ಪರವಾಗಿ ಜೈಕಾರ ಮೊಳಗಿತು.

ಕಾಲ್ನಡಿಗೆಯಲ್ಲೇ ಬಂದ ಸಿದ್ದರಾಮಯ್ಯ: ಈ ಹಿಂದೆ ಹಲವಾರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಮದ್ಯಾಹ್ನ ಉರಿ ಬಿಸಿಲಿನಲ್ಲೂ ಪಾದಯಾತ್ರೆಯ ಮುಂಚೂಣ ಯಲ್ಲಿ ಹೆಜ್ಜೆ ಹಾಕಿದರು. ಮಹಾತ್ಮ ಗಾಂಧಿ ವೃತ್ತದಿಂದ ಆರಂಭವಾದ ಮೆರವಣ ಗೆಯಲ್ಲಿ ಸಾಗಿದ ಸಿದ್ದರಾಮಯ್ಯ ದಾರಿಯುದ್ದಕ್ಕೂ ಪಕ್ಷದ ಮುಖಂಡರು ಹಾಗೂ ಶಾಸಕರೊಂದಿಗೆ ಮಾತನಾಡುತ್ತಲೇ ಸಾಗಿದರು. ಎಲ್ಲಿಯೂ ಬಸವಳಿದಂತೆ ಕಾಣಲಿಲ್ಲ. ಸಿದ್ದರಾಮಯ್ಯ ಅವರ ಹುಮ್ಮಸ್ಸನ್ನು ಕಂಡ ಕಾರ್ಯಕರ್ತರು ಸಹ ಮೆರವಣ ಗೆ ಪೂರ್ಣಗೊಳ್ಳುವವರೆಗೂ ಪಾಲ್ಗೊಂಡಿದ್ದರು.

ಬಳಿಕ ಸಿದ್ದರಾಮಯ್ಯ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಹಾಗೂ ಮುಂಚೂಣ ಮುಖಂಡರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಕಾರ್ಯದರ್ಶಿ ಚಂದ್ರಮೌಳಿ, ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಡಿ.ತಿಮ್ಮಯ್ಯ, ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ, ಮಾಜಿ ಶಾಸಕರಾದ ವಾಸು, ಪಿ.ಎಂ.ನರೇAದ್ರಸ್ವಾಮಿ, ಕೆ.ವೆಂಕಟೇಶ್, ಕಳಲೆ ಕೇಶವಮೂರ್ತಿ, ಎಂ.ಕೆ.ಸೋಮಶೇಖರ್, ಆರ್.ಧರ್ಮಸೇನ, ಮುಖಂಡರಾದ ಎಂ.ಲಕ್ಷ÷್ಮಣ್, ಕೆ.ಹರೀಶ್ ಗೌಡ, ಡಿ.ರವಿಶಂಕರ್, ಮಂಜುಳಾ ಮಾನಸ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಜಿ.ಪಂ ಮಾಜಿ ಅಧ್ಯಕ್ಷ ಕೆ.ಮರಿಗೌಡ, ಮಾಜಿ ಮೇಯರ್‌ಗಳಾದ ಆರೀಫ್ ಹುಸೇನ್, ಅಯೂಬ್ ಖಾನ್, ಮುಖಂಡರಾದ ಎಂ.ಶಿವಣ್ಣ, ಪ್ರಶಾಂತ್ ಗೌಡ, ಸುನಿಲ್ ಬೋಸ್, ಪುಷ್ಪಾಲತಾ ಚಿಕ್ಕಣ್ಣ, ಲತಾ ಸಿದ್ದಶೆಟ್ಟಿ, ಕೆಪಿಸಿಸಿ ಲೀಗಲ್ ಸೆಲ್ ಕಾರ್ಯದರ್ಶಿ ಕವಿತಾ ಕಾಳೆ, ವೀಣಾ, ಎಂ.ಎ.ಕಮಲಾ ಅನಂತರಾಮು, ರಘು, ಮಂಜುಳಾ ರಾಜ್, ಮಂಜುಳಾ ಮಂಜುನಾಥ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.