ಬೈಕ್-ಟಿಪ್ಪರ್ ಡಿಕ್ಕಿ: ಸವಾರ ಸಾವು

ನಂಜನಗೂಡು, ಮಾ.4(ರವಿ)-ಬೈಕ್‍ಗೆ ಟಿಪ್ಪರ್ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿರುವ ಘಟನೆ ಮೈಸೂರು-ಊಟಿ ಹೆದ್ದಾರಿಯ ಎಲಚಗೆರೆಬೋರೆ ಬಳಿ ಬುಧವಾರ ನಡೆದಿದೆ.

ತಾಲೂಕಿನ ಹುಣಸನಾಳು ಗ್ರಾಮದ ನಿವಾಸಿ ರವೀಂದ್ರ ನಾಯರ್(42) ಮೃತರು. ಇವರು ಕಾರ್ಯ ನಿಮಿತ್ತ ಪಟ್ಟಣಕ್ಕೆ ಬಂದು, ಸ್ವಗ್ರಾಮಕ್ಕೆ ವಾಪಸಾಗುತ್ತಿ ದ್ದದ್ದಾಗ ಎಲಚಗೆರೆಬೋರೆ ಬಳಿ ಹಿಂಬದಿ ಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ರವೀಂದ್ರ ನಾಯರ್ ಅಸುನೀಗಿ ದ್ದಾರೆ. ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿ ಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.