ಮುನಿರತ್ನಗೆ ಬಿಜೆಪಿ ಟಿಕೆಟ್ 

ಬೆಂಗಳೂರು, ಸೆ.29- ಪಕ್ಷದ ಭರವಸೆಯಂತೆ ಮುನಿರತ್ನ ಅವರಿಗೇ ಟಿಕೆಟ್ ಸಿಗುವ ವಿಶ್ವಾಸವಿದ್ದು, ಯಾವುದೇ ಪ್ರತಿರೋಧ ವಿಲ್ಲದೇ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಿ ದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾ ಕರ್ ಹೇಳಿದರು. ಅಧಿಕೃತ ನಿವಾಸದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಮುನಿರತ್ನ ಅವರು ಶಾಸಕ ಸ್ಥಾನ ತ್ಯಜಿಸಿ ಸರಕಾರ ರಚನೆಗಾಗಿ ಕೊಡುಗೆ ನೀಡಿದ್ದಾರೆ. ಆ ವೇಳೆ ನೀಡಿದ ಭರವಸೆಯಂತೆ ಹಿರಿಯ ನಾಯಕರು ಖಂಡಿತ ನ್ಯಾಯಯುತವಾದ ತೀರ್ಮಾನ ಕೊq ತ್ತಾರೆ ಎಂಬ ವಿಶ್ವಾಸವಿದೆ. ಉಪಚುನಾವಣೆಯಲ್ಲಿ ಗೆದ್ದ ನಮ್ಮೆಲ್ಲರಿಗೂ ಭರವಸೆಯಂತೆ ನಡೆದು ಕೊಂಡಿದ್ದಾರೆ. ಹೀಗಾಗಿ ಮುನಿರತ್ನ ಅವರಿಗೂ ಸಹ ಈ ಬಾರಿ ಯಾವುದೇ ಅನ್ಯಾಯವಾಗುವುದಿಲ್ಲ. ಯಾರಿಗೆ ಆದ್ಯತೆ ನೀಡಬೇಕು ಎಂಬುದು ಪಕ್ಷದ ನಾಯಕರಿಗೆ ತಿಳಿದಿದೆ ಎಂದು ಹೇಳಿದರು. ಉಪಚುನಾವಣೆಗಿಂತ ಕೊರೊನಾ ನಿಯಂತ್ರಣ ಅವಶ್ಯವಾದ್ದರಿಂದ ಉಪ ಚುನಾವಣೆ ಪ್ರಚಾರದ ವೇಳೆ ಎಲ್ಲಾ ಪಕ್ಷಗಳು ಜಾಗೃತಿ ವಹಿಸಿ, ಡಿಜಿಟಲ್ ಮೂಲಕ ಪ್ರಚಾರ ನಡೆಸಿದರೆ ಉತ್ತಮ ಎಂದು ಸಲಹೆ ನೀಡಿದರು.