ಪ್ರೊ.ಜೆ.ಎ.ಕೆ.ತರೀನ್‍ರ `ರೈಸ್ ಆಫ್ ಎ ಬೇರ್‍ಫುಟ್ ಬಾಯ್’ ಪುಸ್ತಕ ಬಿಡುಗಡೆ

ಮೈಸೂರಿನ ಸರಸ್ವತಿಪುರಂ ರೋಟರಿ ಮೈಸೂರು ಪಶ್ಚಿಮ ಸಭಾಂಗಣದಲ್ಲಿ ಕಾಶ್ವೀರದ ವಿಶ್ರಾಂತ ಕುಲಪತಿ ಪ್ರೊ.ಜೆ.ಎ.ಕೆ.ತರೀಣ್ ಅವರ `ರೈಸ್ ಆಫ್ ಎ ಬೇರ್‍ಫುಟ್ ಬಾಯ್: ಆನ್ ಆಟೋಬಯಾಗ್ರಫಿ’ ಪುಸ್ತಕವನ್ನು `ಸ್ಟಾರ್ ಆಫ್ ಮೈಸೂರ್’ ಮತ್ತು `ಮೈಸೂರು ಮಿತ್ರ’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಬಿಡುಗಡೆ ಮಾಡಿದರು. ಚಿತ್ರದಲ್ಲಿ ಡಾ.ಎಚ್.ಎಸ್.ಶಿವಣ್ಣ, ಪ್ರೊ.ಜೆ.ಎ.ಕೆ.ತರೀನ್, ಕೆ.ಬಿ.ಗಣಪತಿ ಮತ್ತು ಕೆ.ಸಿ.ಬೆಳ್ಳಿಯಪ್ಪ ಇದ್ದಾರೆ.

ಮೈಸೂರು: ಕಾಶ್ಮೀರ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಜೆ.ಎ.ಕೆ.ತರೀನ್ ಅವರ `ರೈಸ್ ಆಫ್ ಎ ಬೇರ್‍ಫುಟ್ ಬಾಯ್: ಆ್ಯನ್ ಆಟೋಬಯಾಗ್ರಫಿ’ ಪುಸ್ತಕವನ್ನು `ಸ್ಟಾರ್ ಆಫ್ ಮೈಸೂರ್’ ಮತ್ತು `ಮೈಸೂರು ಮಿತ್ರ’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಭಾನುವಾರ ಮೈಸೂರಿನ ಸರಸ್ವತಿಪುರಂ ರೋಟರಿ ಮೈಸೂರು ಪಶ್ಚಿಮ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.

ಮೈಸೂರು ಲಿಟರರಿ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಬಳಿಕ ಮಾತನಾಡಿದ ಅವರು, ತರೀನ್ ಅವರ `ರೈಸ್ ಆಫ್ ಎ ಬೇರ್‍ಫುಟ್ ಬಾಯ್: ಆ್ಯನ್ ಆಟೋಬಯಾಗ್ರಫಿ’ ಪುಸ್ತಕವು, ವಿಶ್ವವಿದ್ಯಾನಿಲಯದ ಬೋಧನಾ ವಿಭಾಗದ ಸದಸ್ಯರ ನಡುವಿನ ರಾಜಕೀಯ ಮತ್ತು ಕುಶಲತೆಯನ್ನು ಬಿಂಬಿಸುತ್ತದೆ. ಪ್ರೊ.ತರೀನ್ ಅವರ ಆತ್ಮಚರಿತ್ರೆ ಇಲಾಖೆಯ ಮುಖ್ಯಸ್ಥರ ಕುತಂತ್ರ, ಅಹಂಕಾರ ಮತ್ತು ಪೂರ್ವಾಗ್ರಹವನ್ನು ನಿರೂಪಿಸುತ್ತದೆ ಎಂದರು.

ವಿಶ್ವವಿದ್ಯಾನಿಲಯದೊಳಗಿನ ಸಮುದಾಯ ಮತ್ತು ಜಾತಿ ಅಂಶಗಳ ವಿರುದ್ಧ ಅಕ್ಷರಶಃ ಹೋರಾಡಿದ ಕುಲಪತಿ ಡಾ.ಪಿ.ರುದ್ರಪ್ಪ ಅವರನ್ನು ಗೌರವಿಸುವ ಅವರು ಪ್ರಾಧ್ಯಾಪಕರಾಗಲು ಸರಿಯಾದ ಅರ್ಹರಾಗುವಂತೆ ಮಾಡಿದರು ಎಂದು ಹೇಳಿದರು.
ಪುಸ್ತಕ ಕುರಿತು ಮಾತನಾಡಿದ ಮೈಸೂರು ಲಿಟರರಿ ಅಸೋಸಿಯೇಷನ್ ಉಪಾಧ್ಯಕ್ಷ ಡಾ.ಎಚ್.ಎಸ್.ಶಿವಣ್ಣ, ಮೈಸೂರಿನವರಾದ ಪ್ರೊ.ತರೀನ್ ಅವರದ್ದು ಬಹುಮುಖ ಪ್ರತಿಭೆ. ಮಾನಸಗಂಗೋತ್ರಿಯ ಭೂವಿಜ್ಞಾನ ವಿಭಾಗದಲ್ಲಿ ಶಿಕ್ಷಣ ಕ್ಷೇತ್ರದ ಅವರ ಸಾಧನೆ ಹಾಗೂ ಕಾಶ್ಮೀರ ಸೇರಿದಂತೆ ಮೂರು ವಿಶ್ವವಿದ್ಯಾನಿಲಯಗಳಲ್ಲಿ ಕುಲಪತಿಯಾಗಿ ಮಾಡಿದ ಸಾಧನೆ ಶ್ಲಾಘನೀಯವಾದದ್ದು ಎಂದು ತಿಳಿಸಿದರು. ಇವರ ಈ ಸಾಧನೆಯನ್ನು ಗೌರವಿಸುವಂತೆ ಮಾಡಿದ ಮನವಿಗೆ ಸಭಿಕರು ಎದ್ದು ನಿಂತು ಕರತಾಡನದ ಮೂಲಕ ಗೌರವಿಸಿದರು. ಮೈಸೂರು ಲಿಟರರಿ ಅಸೋಸಿಯೇಷನ್ ಅಧ್ಯಕ್ಷ ಕೆ.ಸಿ.ಬೆಳ್ಳಿಯಪ್ಪ ಎಲ್ಲರನ್ನೂ ಸ್ವಾಗತಿಸಿ, ವಂದಿಸಿದರು.