ಅತ್ಯಾಚಾರ, ದರೋಡೆ ಎರಡೂ ಮೈಸೂರಿಗೆ ಕಪ್ಪುಚುಕ್ಕೆ

ಮೈಸೂರು,ಆ.೩೦(ಪಿಎಂ)-ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಅತ್ಯಾಚಾರ ಮತ್ತು ದರೋಡೆ ಪ್ರಕರಣಗಳು ಮೈಸೂರಿಗೆ ಕಳಂಕ. ಶಾಂತಿಯುತ ನಗರ ಎಂಬ ಕೀರ್ತಿ ಹೊಂದಿದ್ದ ಮೈಸೂರಿನಲ್ಲಿ ಈ ಎರಡು ಪ್ರಕರಣಗಳು ಕಪ್ಪುಚುಕ್ಕೆ ಎಂಬುದನ್ನು ಖಂಡಿತವಾಗಿ ಒಪ್ಪಿಕೊಳ್ಳಲೇಬೇಕು ಎಂದು ವಿಷಾದಿಸಿದ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್, ತಮ್ಮ ಕೆಆರ್ ಕ್ಷೇತ್ರ ವ್ಯಾಪ್ತಿಯಲ್ಲಿ ಅಪರಾಧ ಮುಕ್ತ ವಾತಾವರಣ ನೆಲೆಸಲು ಪಣ ತೊಟ್ಟಿರುವುದಾಗಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದ ಆವರಣದಲ್ಲಿ ಸೋಮವಾರ ಮಾಧ್ಯಮ ದವರಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಕ್ಷೇತ್ರ ವ್ಯಾಪ್ತಿಯ ೮ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್, ಸಬ್‌ಇನ್ಸ್ಪೆಕ್ಟರ್ ಸೇರಿದಂತೆ ಇಬ್ಬರು ಎಸಿಪಿಗಳ ಜೊತೆಗೆ ಸಭೆ ಮಾಡಿ ದ್ದೇನೆ. ಸೆ.೭ರ ನಂತರದಲ್ಲಿ ಮತ್ತೊಂದು ಸಭೆ ನಡೆಸಲಿದ್ದೇನೆ. ಆ ಮೂಲಕ ಕ್ಷೇತ್ರವನ್ನು ಅಪರಾಧ ಮುಕ್ತಗೊಳಿಸಲು ಅಗತ್ಯ ಕ್ರಮ ಗಳನ್ನು ವಹಿಸಲಾಗುವುದು ಎಂದು ಹೇಳಿದರು.
ಅತ್ಯಾಚಾರ ಘಟನೆಗೆ ಪೊಲೀಸರ ವೈಫಲ್ಯ ಕಾರಣ ಎಂಬುದನ್ನು ಒಪುö್ಪವು ದಿಲ್ಲ. ಆದರೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರೆ ತಪ್ಪಿಸಬಹುದಿತ್ತು. ಮಹಿಳೆ ಯರು ಸ್ವತಂತ್ರವಾಗಿ

ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಜನ ಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ಸೆಪ್ಟೆಂ ಬರ್‌ನಿಂದ ಕಾರ್ಯ ಕ್ರಮ ಹಾಕಿಕೊಳ್ಳಲಾಗುವುದು ಎಂದರು.

ಅತ್ಯಾಚಾರ ಮತ್ತು ದರೋಡೆ ಪ್ರಕರಣ ಸಂಬAಧ ಕಾಂಗ್ರೆಸ್ ಪ್ರತಿಭಟನೆ, ಟೀಕೆಗಳ ಕುರಿತಂತೆ ಪ್ರತಿಕ್ರಿಯಿಸಿ, ವಿರೋಧ ಪಕ್ಷ ಅಂತ ಇದ್ದಾಗ ಇದು ಸಹಜ. ಅವರ ಜಾಗ ದಲ್ಲಿ ನಾವಿದ್ದರೂ ಅದನ್ನೇ ಮಾಡುತ್ತಿದ್ದೆವು. ಪ್ರತಿಪಕ್ಷವಾಗಿ ಸರ್ಕಾರ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪಕ್ಷ ಸಂಘಟನೆಗಾಗಿ ಮೈಸೂರಿಗೆ ಬರುತ್ತಿದ್ದಾರೆ. ನಾನು ಅವರು ನಡೆಸುವ ಸಭೆಯಲ್ಲಿ ಭಾಗವಹಿಸುತ್ತೇನೆ. ಅವರು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಪಕ್ಷ ಸಂಘಟನೆ ಸಂಬಧ ಖುದ್ದು ಸ್ಥಳೀಯ ಮುಖಂಡರಿAದ ಅವರು ಮಾಹಿತಿ ಪಡೆಯ ಲಿದ್ದಾರೆ ಎಂದು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಮುನ್ನೆಚ್ಚರಿಕೆ ವಹಿಸಿ ೬ರಿಂದ ೮ನೇ ತರಗತಿವರೆಗೆ ಭೌತಿಕವಾಗಿ ಶಾಲೆ ಪ್ರಾರಂಭ ಮಾಡಬೇಕೆಂಬ ಚಿಂತನೆ ಇದೆ. ಶಾಲೆ ಯಿಂದ ಮಕ್ಕಳು ದೂರವಿದ್ದು, ಅವರ ಮಾನಸಿಕ ಹಿತದೃಷ್ಟಿಯಿಂದ ಭೌತಿಕ ತರಗತಿ ಆರಂಭಿಸುವುದು ಒಳ್ಳೆಯದು. ಶಾಲೆಗಳನ್ನು ತೆರೆಯುವಂತೆ ಬಹುತೇಕ ಪೋಷಕರ ಒತ್ತಾಯ ಕೂಡ ಇದೆ. ಗೌರಿ-ಗಣೇಶ ಹಬ್ಬದಲ್ಲಿ ಬಹುತೇಕರು ಮನೆಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಿ, ಜನದಟ್ಟಣೆ ಆಗದಂತೆ ಎಚ್ಚರ ವಹಿಸಬೇಕು. ಯಾವುದೇ ಸಮಸ್ಯೆ ಗಳು ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರಶ್ನೆಗಳಿಗೆ ಉತ್ತರಿಸಿದರು.