ಕಾಮಗಾರಿ ಹಣ ಮಂಜೂರಾತಿಗೆ ಗುತ್ತಿಗೆದಾರರಿಂದ ಲಂಚ ಇಬ್ಬರು ಇಂಜಿನಿಯರ್‌ಗಳು ಎಸಿಬಿ ಬಲೆಗೆ

ಮೈಸೂರು, ಮಾ.೫ (ಆರ್‌ಕೆ)- ಏರಿ ದುರಸ್ತಿ ಕಾಮಗಾರಿಯ ಬಿಲ್ಲಿನ ಹಣ ಮಂಜೂ ರಾತಿಗಾಗಿ ಗುತ್ತಿಗೆದಾರನಿಂದ ೧ ಲಕ್ಷ ರೂ. ಲಂಚ ಪಡೆಯುತ್ತಿದ್ದ ಚಾಮರಾಜನಗರ ಸಣ್ಣ ನೀರಾವರಿ ಇಲಾಖೆಯ ಇಬ್ಬರು ಇಂಜಿನಿಯರ್ ಗಳು ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ಅಸಿಸ್ಟೆಂಟ್ ಇಂಜಿನಿ ಯರ್‌ಗಳಾದ ರಾಜಶೇಖರ್ ಮತ್ತು ಅಸೆಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ ಶ್ಯಾಂ ಸುಂದರ ಎಂಬುವರೇ ಚಾಮರಾಜನಗರ ಎಸಿಬಿ ಪೊಲೀಸರ ಬಲೆಗೆ ಬಿದ್ದವರು. ಮೈಸೂರಿನ ಜೆಪಿನಗರದ ಮನೆಯಲ್ಲಿ ಶ್ಯಾಂಸುAದರ ಅವರನ್ನು ಬಂಧಿಸಿರುವ ಪೊಲೀಸರು ಲಲಿತ್ ಮಹಲ್ ರಸ್ತೆಯ ಸ್ವಾಗತ ಕಮಾನು ಗೇಟ್ ಬಳಿ ೧ ಲಕ್ಷ ರೂ. ಹಣದ ಸಮೇತ ರಾಜಶೇಖರ ಅವರನ್ನು ಇಂದು ಬೆಳಗ್ಗೆ ೧೦.೩೦ ಗಂಟೆ ವೇಳೆಗೆ ವಶಕ್ಕೆ ಪಡೆದರು.
ಚಾಮರಾಜನಗರ ತಾಲೂಕು ಬಂಡಿಗೆರೆ ಗ್ರಾಮದ ನಿವಾಸಿಯಾದ ೨ನೇ ದರ್ಜೆ ಸಿವಿಲ್ ಗುತ್ತಿಗೆದಾರ ಗಣೇಶ್ ಪ್ರಸಾದ್ ಅವರು ಅಲ್ಲಿನ ದೊಡ್ಡರಾಯ ಪೇಟೆ ಏರಿ ದುರಸ್ತಿ ಕಾಮಗಾರಿಯನ್ನು ಇ-ಟೆಂಡರ್ ಮೂಲಕ ಕಾರ್ಯಾದೇಶ ಪಡೆದು ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸಿದ್ದರು. ಆ ಕಾಮಗಾರಿ ಬಾಬ್ತು ೩,೦೫,೦೦೦ ರೂ. ಬಿಲ್ಲಿನ ಹಣ ಮಂಜೂರು ಮಾಡಿಸಿಕೊಡುವ ಸಂಬAಧ ಮಾರ್ಚ್ ೪ರಂದು ಕಾಮಗಾರಿ ನಡೆದಿದ್ದ ಸ್ಥಳ ಪರಿಶೀಲನೆ ನಡೆಸಿದ ಚಾಮರಾಜನಗರ ತಾಲೂಕು ಸಣ್ಣ ನೀರಾವರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಾಜಶೇಖರ್ ಮತ್ತು ಶ್ಯಾಂ ಸುಂದರ, ಹಣ ಮಂಜೂರು ಮಾಡಲು ೧ ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡುವಂತೆ ತೀವ್ರ ಒತ್ತಡ ಹೇರಿ ಗಣೇಶ್ ಪ್ರಸಾದ್‌ರಿಂದ ೧ ಲಕ್ಷ ರೂ. ಹಣ ಸ್ವೀಕರಿಸುತ್ತಿದ್ದಾಗ ಮೈಸೂರಿನ ಸಿದ್ಧಾರ್ಥ ಬಡಾವಣೆಯ ಲಲಿತ ಮಹಲ್ ರಸ್ತೆ ಸ್ವಾಗತ ಕಮಾನು ಗೇಟ್ ಸರ್ಕಲ್‌ನಲ್ಲಿ ರಾಜಶೇಖರ ಅವರನ್ನು ಚಾಮರಾಜನಗರ ಜಿಲ್ಲೆ ಎಸಿಬಿ ಠಾಣೆ ಪೊಲಿಸರು ಹಣದ ಸಮೇತ ಬಂಧಿಸುವಲ್ಲಿ ಯಶಸ್ವಿಯಾದರು. ಅದೇ ವೇಳೆೆ ಶ್ಯಾಮಸುಂದರ ಅವರನ್ನು ಮೈಸೂರಿನ ಜೆ.ಪಿ.ನಗರದ ಮನೆಯಲ್ಲಿ ವಶಕ್ಕೆ ಪಡೆದಿದ್ದು, ನಜರ್‌ಬಾದ್‌ನ ಸಣ್ಣ ನೀರಾವರಿ ಇಲಾಖೆ ಎಕ್ಸಿಕ್ಯುಟಿವ್ ಇಂಜಿನಿಯರ್ ಕಚೇರಿಗೆ ಕರೆತಂದು ವಿಚಾರಣೆ ನಡೆಸಿದ ನಂತರ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಚಾಮರಾಜನಗರ ಭ್ರಷ್ಟಾಚಾರ ನಿಗ್ರಹದಳದ ಪ್ರಭಾರ ಎಸ್ಪಿ ಜಯಪ್ರಕಾಶ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸದಾನಂದ ತಿಪ್ಪಣ್ಣನವರ ಅವರ ಸಲಹೆಯಂತೆ ನಡೆದ ಟ್ರಾಪ್ ಕಾರ್ಯಾಚರಣೆಯಲ್ಲಿ ಎಸಿಬಿ ಇನ್ಸ್ಪೆಕ್ಟರ್‌ಗಳಾದ ಸಿ.ಕಿರಣ್‌ಕುಮಾರ್, ಲಕ್ಷಿö್ಮÃದೇವಿ, ಸಿಬ್ಬಂದಿಗಳಾದ ಮಹದೇವ, ಸ್ವಾಮಿ, ಕೃಷ್ಣಕುಮಾರ, ಸತೀಶ್, ನಾಗಲಕ್ಷಿö್ಮÃ, ನಾಗೇಂದ್ರ ಹಾಗೂ ಇತರರು ಪಾಲ್ಗೊಂಡಿದ್ದರು.