ಬುದ್ಧ ವಿಹಾರ ವೇದಿಕೆ, ಪ್ರಗತಿಪರರ ಒಕ್ಕೂಟದಿಂದ ಪ್ರತಿಭಟನೆ

ಮೈಸೂರು, ಫೆ.22(ಆರ್‍ಕೆಬಿ)- ಸರ್ಕಾರವು ಪಠ್ಯ ಪುಸ್ತಕದಲ್ಲಿರುವ ಬೌದ್ಧ ಮತ್ತು ಜೈನ ಧರ್ಮದ ಕೆಲವು ಐತಿಹಾಸಿಕ ಅಂಶಗಳನ್ನು ಕೈಬಿಟ್ಟಿರುವುದನ್ನು ಖಂಡಿಸಿ ವಿಶ್ವ ಮೈತ್ರಿ ಬುದ್ಧ ವಿಹಾರ ವೇದಿಕೆ ಹಾಗೂ ಪ್ರಗತಿಪರರ ಒಕ್ಕೂಟದ ಸದಸ್ಯರು ಸೋಮವಾರ ಮೈಸೂರಿನ ಬಲ್ಲಾಳ್ ವೃತ್ತದ ಬಳಿಯಿರುವ ಬುದ್ಧ ವಿಹಾರದ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಸಂವಿಧಾನ ಉಳಿಸಿ, ದೇಶ ಉಳಿಸಿ ಎಂಬ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ಪಠ್ಯ ಪುಸ್ತಕದಿಂದ ಬೌದ್ಧ ಮತ್ತು ಜೈನ ಧರ್ಮದ ಅಂಶಗಳನ್ನು ತೆಗೆಯ ಬಾರದು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ್, ಚಿಂತಕ ಮಹೇಶ್ ಚಂದ್ರಗುರು, ರಾಜ್ಯ ಬಿಜೆಪಿ ಸರ್ಕಾರ ರಾಜ್ಯದ ಅಭಿವೃದ್ಧಿ ಕೆಲಸ ಗಳನ್ನು ಮಾಡುವುದನ್ನು ಬಿಟ್ಟು ಇತಿಹಾಸ ತಿರುಚುವ ಕೆಲಸಗಳಿಗೆ ಕೈ ಹಾಕಿದೆ. ಈ ಮೂಲಕ ಬಹು ಸಂಸ್ಕøತಿಯ ಜನರ ಆಕ್ರೋಶಕ್ಕೆ ತುತ್ತಾಗಿದೆ ಎಂದು ದೂರಿದರು.

ಬೌದ್ಧ ಹಾಗೂ ಜೈನ ಧರ್ಮಗಳೂ ದ್ರಾವಿಡ ಅಂಶ ಗಳನ್ನು ಮೈಗೂಡಿಸಿಕೊಂಡು ಬೆಳೆದಿವೆ. ಹಾಗಾಗಿ ಈ ಧರ್ಮಗಳನ್ನು ಶತ್ರುಗಳಂತೆ ವೈದಿಕ ಶಾಹಿ ಕಾಣು ತ್ತಿದೆ. ಮಾನವತೆ ಸಾರಿದ ಬುದ್ಧ ಮತ್ತು ಜೈನ ಧರ್ಮದ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ಖಂಡನೀಯ ಎಂದರು. ಬಹುಜನರ ಮೇಲೆ ಇತಿಹಾಸದ ಉದ್ದಕ್ಕೂ ದಾಳಿ ಮಾಡುತ್ತಾ ಬಂದಿರುವ ಮನುಸ್ಮøತಿ, ಭಗವದ್ಗೀತೆ ಮತ್ತು 18 ಪುರಾಣಗಳನ್ನು ಮೊದಲು ನಿಷೇದಿಸಿ, ಈ ಕೃತಿಗಳಿಂದ ಪ್ರೇರಣೆಗೊಂಡ ಕೆಲವು ಜನರು ಮತ್ತು ಸಂವಿಧಾನ ವಿರೋಧಿ ಸಂಘಟನೆಗಳು ಜಾತೀ ಯತೆ, ಅಸ್ಪøಶ್ಯತೆ, ಲೈಂಗಿಕ ದೌರ್ಜನ್ಯ, ಹಲ್ಲೆ, ಕೊಲೆ, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಿಕ್ಷಣ ಇಲಾಖೆಯು ಪಠ್ಯಪುಸ್ತಕ ದಲ್ಲಿ ಕತ್ತರಿ ಪ್ರಯೋಗ ಮಾಡಿರುವ ಅಂಶಗಳನ್ನು ಮತ್ತೇ ಸೇರಿಸುವಂತೆ ಇಲಾಖಾ ಮುಖ್ಯಸ್ಥರಿಗೆ ನಿರ್ದೇ ಶನ ನೀಡಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದಲ್ಲಿ ಪ್ರತಿಭಟನೆ ಇಷ್ಟಕ್ಕೆ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ವಿಜಯನಗರ ಬೌದ್ಧ ದಮ್ಮ ಸಮಿತಿ ಅಧ್ಯಕ್ಷ ಆರ್.ಮಹದೇವಪ್ಪ, ದಮ್ಮ ದೀಪದ ಕೆಎಸ್‍ಆರ್‍ಟಿಸಿ ರೇವಣ್ಣ, ದಸಂಸದ ಸೋಮಶೇಖರ್, ಮಣಿಯಯ್ಯ, ಪ್ರದೀಪ್‍ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.