ಕನ್ನಡದಲ್ಲೇ ಉದ್ದಿಮೆಗಳ ನಾಮಫಲಕ ತಪ್ಪಿದಲ್ಲಿ ಲೈಸೆನ್ಸ್ ರದ್ದು: ಮೇಯರ್ ಎಚ್ಚರಿಕೆ

ಮೈಸೂರು, ಅ.೨೧- ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಕನ್ನಡ ಭಾಷೆಯನ್ನು ಹೊರತುಪಡಿಸಿ ಇತರೆ ಭಾಷೆಗಳಲ್ಲಿ ಉದ್ದಿಮೆಯ ನಾಮಫಲಕಗಳನ್ನು ಅಳವಡಿಸುತ್ತಿರುವುದರಿಂದ ಕನ್ನಡ ಭಾಷೆಗೆ ಇರುವ ಪ್ರಾಮುಖ್ಯತೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಶೇ.೬೦ರಷ್ಟು ಕನ್ನಡ ಭಾಷೆಯನ್ನು ಹಾಗೂ ಶೇ.೪೦ರಷ್ಟು ದ್ವಿತೀಯ ಭಾಷೆಯಾದ ಆಂಗ್ಲಭಾಷೆಯಲ್ಲಿ ನಾಮಫಲಕಗಳನ್ನು ಅಳವಡಿಸುವಂತೆ ಮೇಯರ್ ಸುನಂದಾ ಪಾಲನೇತ್ರ ಸೂಚಿಸಿದ್ದಾರೆ.
ಮೈಸೂರು ನಗರವು ರಾಜವಂಶಸ್ಥರು ಆಳಿದ ನಗರವಾಗಿದ್ದು, ಸಾಂಸ್ಕೃತಿಕ ನಗರಿ ಎಂಬ ಹೆಗ್ಗಳಿಕೆ ಇರುವ ನಗರದಲ್ಲಿ ಕನ್ನಡಕ್ಕೆ ಮೊದಲನೆಯ ಪ್ರಾಧಾನ್ಯತೆ ನೀಡು ವುದು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ. ಅಲ್ಲದೆ ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಕಡ್ಡಾಯವಾಗಿ ಉಪಯೋಗಿಸಬೇಕೆಂದು ಆದೇಶ ಹೊರಡಿಸಿದ್ದು, ಅದೇಶವು ಉಲ್ಲಂಘನೆ ಮಾಡಿರುವುದು ಕಂಡು ಬಂದಿರುತ್ತದೆ ಎಂದು ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೨೦೨೦-೨೧ ಸಾಲಿನ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮೈಸೂರು ನಗರದ ಎಲ್ಲಾ ವಾಣ ಜ್ಯ ಉದ್ಯಮಗಳಲ್ಲಿ ಇತರ ಭಾಷೆಗಳಲ್ಲಿ ಅಳವಡಿಸಲಾಗಿರುವ ನಾಮ ಫಲಕಗಳನ್ನು ತೆರವುಗೊಳಿಸಿ ಕನ್ನಡಕ್ಕೆ ಮೊದಲನೇ ಪ್ರಾಮುಖ್ಯತೆ ಕೊಟ್ಟು ಕನ್ನಡ ನಾಮಫಲಕವನ್ನು ಅಳವಡಿಸಲು ಸೂಚಿಸಿದ್ದಾರೆ. ಇಲ್ಲವಾದಲ್ಲಿ ಮಹಾನಗರ ಪಾಲಿಕೆಯಿಂದ ಅಂತಹ ವಾಣ ಜ್ಯ ಮಳಿಗೆಗಳ ನಾಮಫಲಕಗಳನ್ನು ತೆರವುಗೊಳಿಸು ವುದರ ಜೊತೆಗೆ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.