ಸಸಿಗಳನ್ನು ನೆಡುವ ಮೂಲಕ ಡಾ.ಶಿವರಾಮ ಕಾರಂತರ ನೆನಪಿನೋತ್ಸವ

ಮೈಸೂರು, ಡಿ.9(ಆರ್‍ಕೆಬಿ)- ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಡಾ.ಶಿವರಾಮ ಕಾರಂತರ ನೆನಪಿನೋತ್ಸವದ ಅಂಗವಾಗಿ ಮೈಸೂರಿನ ಬೇರು ಫೌಂಡೇಷನ್ ವತಿಯಿಂದ ಜಯಲಕ್ಷ್ಮಿಪುರಂನಲ್ಲಿರುವ ಮಹಾಜನ ಕಾಲೇಜಿನ ಬಳಿಯ ಉದ್ಯಾನವನದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಸಸಿಗಳಿಗೆ ನೀರೆರೆದು ಮಾತನಾಡಿ, ನೂರಾರು ಕಾದಂಬರಿಗಳನ್ನು ಬರೆದು ಕನ್ನಡ ಸಾಹಿತ್ಯ ಕ್ಷೇತ್ರದ ಮಹಾನ್ ಸಾಹಿತಿಗಳಲ್ಲಿ ಒಬ್ಬರೆನಿಸಿದ ಶಿವರಾಮ ಕಾರಂತರು ರಾಜ್ಯಾದ್ಯಂತ ಸಂಚರಿಸಿ ಸಾಹಿತ್ಯ, ನಾಟಕ, ಯಕ್ಷಗಾನ ಕುರಿತು ತಿಳಿಸಿಕೊಡುವ ಕೆಲಸ ಮಾಡಿದರು. 400ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದರು.

ಇಂದಿನ ವಿದ್ಯಾರ್ಥಿಗಳು ಶಿವರಾಮ ಕಾರಂತರ ಕಾವ್ಯ ಪುಸ್ತಕಗಳನ್ನು ಚೆನ್ನಾಗಿ ಓದಬೇಕು. ವಿದ್ಯಾರ್ಥಿಗಳಿಗೆ ಮಾದರಿಯಾಗಿ ನಿಲ್ಲುವಂತಹ ವ್ಯಕ್ತಿತ್ವವುಳ್ಳ ಶಿವರಾಮ ಕಾರಂತರು ಕಾಲೇಜು ಶಿಕ್ಷಣವನ್ನೇ ಪಡೆಯದೆ ಹಲವಾರು ಕೃತಿ, ಕಾದಂಬರಿಗಳನ್ನು ರಚಿಸಿ, ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಗೌರವ ಡಾಕ್ಟರೇಟ್ ಪಡೆದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೇರು ಫೌಂಡೇಷನ್ ಅಧ್ಯಕ್ಷ ಎನ್.ಮಧು, ಸದಸ್ಯರಾದ ಸೋಮಶೇಖರ್, ಚೇತನ್, ಸೂರಜ್, ಮೋಹನ್, ತೇಜಸ್, ಡಿ.ಕೆ.ಚೇತನ್, ಚಂದನ್, ಬಿಜೆಪಿ ಮುಖಂಡÀ ಶಿವಪ್ರಕಾಶ್, ಸುಚಿಂದ್ರ ಇತರರು ಇದ್ದರು.