ನಾಳೆ ಕಾವೇರಿ ತೀರ್ಥೋದ್ಭವ

ಮಡಿಕೇರಿ, ಅ.15- ತಲಕಾವೇರಿ ಯಲ್ಲಿ ಶನಿವಾರ (ಅ.17) ಬೆಳಿಗ್ಗೆ 7 ಗಂಟೆ 3 ನಿಮಿಷಕ್ಕೆ ಕಾವೇರಿ ತೀರ್ಥೋದ್ಭವ ವಾಗಲಿದೆ. ಈ ಪವಿತ್ರ ಘಳಿಗೆಯಲ್ಲಿ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಎಲ್ಲಾ ಸಿದ್ಧತೆ ಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಕೋವಿಡ್-19ರ ಹಿನ್ನೆಲೆಯಲ್ಲಿ ಅಂದು ತಲಕಾವೇರಿಗೆ ಬರುವ ಪ್ರತಿಯೊಬ್ಬರೂ ಅ.14ರ ನಂತರ ಮಾಡಿರುವ ಕೋವಿಡ್ ಟೆಸ್ಟ್ ನೆಗೆಟಿವ್ ವರದಿಯನ್ನು ಹೊಂದಿ ರಬೇಕು ಎಂಬುದನ್ನು ಕಡ್ಡಾಯಗೊಳಿಸ ಲಾಗಿದೆ. ಈ ಬಾರಿ ಕೊಳದಲ್ಲಿ ಪುಣ್ಯ ಸ್ನಾನ ಮಾಡಲು ಯಾರಿಗೂ ಅವಕಾಶವಿಲ್ಲ. ಅದೇ ರೀತಿ ಕೊಳದಲ್ಲಿ ತೀರ್ಥ ತೆಗೆದು ಕೊಳ್ಳುವುದನ್ನೂ ನಿಷೇಧಿಸಲಾಗಿದೆ. ಆದರೆ ತೀರ್ಥಸ್ನಾನಕ್ಕೆ ಬರಲು ತೀರ್ಥ ಪ್ರೋಕ್ಷಣೆ ಇರುತ್ತದೆ. ತೀರ್ಥವನ್ನು ದೇವ ಸ್ಥಾನದ ಆಡಳಿತ ಮಂಡಳಿ ವತಿಯಿಂ ದಲೇ ವಿತರಿಸಲು ವ್ಯವಸ್ಥೆ ಮಾಡಲಾಗಿದೆ.

ಭಾಗಮಂಡಲ ಮತ್ತು ತಲಕಾವೇರಿ ಸುತ್ತಮುತ್ತ ಎಡಬಿಡದೇ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆ ಯಾಗಿದೆ. ಇದರಿಂದಾಗಿ ಪ್ರವಾಹದ ಭೀತಿ ಎದುರಾಗಿದ್ದು, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ನೀರಿಗೆ ಇಳಿಯ ದಂತೆ ಮನವಿ ಮಾಡಿರುವ ದೇವಾಲಯ ಸಮಿತಿಯು ಪುಣ್ಯಸ್ನಾನಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿರುವುದಾಗಿ ಘೋಷಿಸಿದೆ.