ಮೈಸೂರು, ಮೇ 15(ಎಸ್‍ಬಿಡಿ)- ಸದ್ಯಕ್ಕೆ ಮೈಸೂರು ಕೊರೊನಾ ಮುಕ್ತವಾಗಿದೆ ಎಂದು ಸಂಭ್ರಮಿಸುವುದರ ಜೊತೆಗೆ ಈ ಕ್ಷಣದಿಂದ ಮತ್ತಷ್ಟು ಜವಾಬ್ದಾರಿಯುತವಾಗಿ ನಡೆದುಕೊಳ್ಳ ಬೇಕಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು. ಎಲ್ಲಾ ಸೋಂಕಿತರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಫೇಸ್ ಬುಕ್ ಲೈವ್ ಮೂಲಕ ಮಾಹಿತಿ ನೀಡಿದ ಅವರು, ಮೈಸೂರು ಜಿಲ್ಲೆಗೆ ಇಂದು ವಿಶೇಷ ದಿನ. ಮೊದಲ ಪ್ರಕರಣ ದಾಖಲಾದ ಮಾ.21ರಿಂದ ಈವರೆಗೆ ಸುಮಾರು 2 ತಿಂಗಳಲ್ಲಿ 90 ಪ್ರಕರಣಗಳು ಪತ್ತೆ ಯಾದವು. ಇದರಲ್ಲಿ 74 ನಂಜನಗೂಡಿನ ಜುಬಿ ಲಂಟ್ ಕಂಪನಿಗೆ ಸಂಬಂಧಿಸಿದ್ದು. ಇಂದು ಎಲ್ಲಾ ಸೋಂಕಿತರೂ ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆಯಾದಂತಾಗಿದೆ. ಮೈಸೂರು ಜಿಲ್ಲೆ ಮೊದಲ ಘಟ್ಟದ ಸಮಸ್ಯೆಯಿಂದ ಹೊರ ಬಂದಿದೆ. ಸದ್ಯಕ್ಕೆ ಯಾವುದೇ ಪಾಸಿಟಿವ್ ಪ್ರಕರಣ ಗಳಿಲ್ಲ. ಸಂಭ್ರಮಿಸಲು ಇದು ಕಾರಣವಾಗ ಬಹುದು. ಆದರೆ ಈ ಕ್ಷಣದಿಂದ ಸಾರ್ವಜನಿಕರು ಮತ್ತಷ್ಟು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದರು. ಮೈಸೂರಲ್ಲಿ ಪ್ರಕರಣಗಳಿಲ್ಲ ಎಂದು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ಒಂದು ಪ್ರಕರಣ ಗಳಿಲ್ಲದ ಗ್ರೀನ್ eóÉೂೀನ್ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣ ಕಾಣಿಸಿಕೊಳ್ಳುತ್ತಿರುವುದು ಗಮನದಲ್ಲಿರ ಬೇಕು. ಲಾಕ್‍ಡೌನ್ ಸಡಿಲಿಕೆಯಿಂದಾಗಿ ಹೊರ ರಾಜ್ಯ ಹಾಗೂ ವಿದೇಶಗಳಿಂದ ಜನ ಬರು ತ್ತಿರುವುದರಿಂದ ಮತ್ತಷ್ಟು ಎಚ್ಚರಿಕೆಯಿಂದಿರ ಬೇಕು. ಈ ಕ್ಷಣದಿಂದ ಮುಖಗವಸು ಕಡ್ಡಾಯ ವಾಗಿ ಧರಿಸಬೇಕು.
ಸ್ಯಾನಿಟೈಸರ್ ಬಳಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳ ಲೇಬೇಕು. ಗರ್ಭಿಣಿ, ಬಾಣಂತಿಯರು, ವೃದ್ಧರು, ಚಿಕ್ಕಮಕ್ಕಳು, ಇತರೆ ಗಂಭೀರ ಆರೋಗ್ಯ ಸಮಸ್ಯೆಯುಳ್ಳವರ ಬಗ್ಗೆ ತೀವ್ರ ನಿಗಾ ವಹಿಸಬೇಕು. ಲಾಕ್‍ಡೌನ್ ಹೆಸರಿಗಷ್ಟೇ ಜಾರಿಯಲ್ಲಿದ್ದರೂ, ಬಹುತೇಕ ನಿರ್ಬಂಧಗಳನ್ನು ತೆರವು ಮಾಡಲಾಗಿದೆ.
ಕೈಗಾರಿಕೆ ಸೇರಿದಂತೆ ಆರ್ಥಿಕ ಚಟುವಟಿಕೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ ಈ ಸಂದರ್ಭದಲ್ಲಿ ಎಚ್ಚರ ತಪ್ಪಿ ನಡೆದುಕೊಂಡರೆ, ಮತ್ತೆ ಅಪಾಯ ಎದುರಾಗಬಹುದು ಎಂದು ಎಚ್ಚರಿಸಿದರು.
ಹೊರ ರಾಜ್ಯದಿಂದ 600 ಮಂದಿ: ನಮ್ಮ ಜಿಲ್ಲೆಗೂ ಹೊರ ರಾಜ್ಯಗಳಿಂದ 600ಕ್ಕೂ ಹೆಚ್ಚು ಜನ ಬಂದಿದ್ದಾರೆ. ಗರ್ಭಿಣಿಯರು, ಗಂಭೀರ ಅನಾರೋಗ್ಯವಿರುವ ಕೆಲವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ನೆಗೆಟಿವ್ ಬಂದಿದ್ದರಿಂದ ಅವರನ್ನು ಹೋಂ ಕ್ವಾರಂಟೈನ್‍ಗೆ ಕಳುಹಿಸಲಾಗಿದೆ. ಉಳಿದವರನ್ನು ಫೆಸಿಲೇಟೆಡ್ ಕ್ವಾರಂಟೈನ್‍ನಲ್ಲಿಟ್ಟು ನಿಗಾ ವಹಿಸಲಾಗಿದೆ. ಸದ್ಯಕ್ಕೆ ವಿದೇಶದಿಂದ ಯಾರೂ ಜಿಲ್ಲೆಗೆ ಬಂದಿಲ್ಲ. ಅಂತರ ರಾಜ್ಯ ಹಾಗೂ ವಿದೇಶದಿಂದ ಬರುವವರನ್ನು ಕಡ್ಡಾಯವಾಗಿ ಫೆಸಿಲೇಟೆಡ್ ಕ್ವಾರಂಟೈನ್ ಮಾಡಲಾಗುತ್ತದೆ. ಸಾಮಥ್ರ್ಯವಿದ್ದರು ಹಣ ಪಾವತಿಸಿ, ಹೋಟೆಲ್ ಹಾಗೂ ಲಾಡ್ಜ್‍ಗಳಲ್ಲಿ ಉಳಿದುಕೊಳ್ಳಬಹುದು. ಇದು ಸಾಧ್ಯವಾಗದವರು ಸರ್ಕಾರದ ವತಿಯಿಂದ ವ್ಯವಸ್ಥೆ ಮಾಡಿರುವ ಸ್ಥಳಗಳಲ್ಲಿ ವಾಸವಿರಬೇಕು. ಇದನ್ನು ಕೆಲವರು ಪ್ರಶ್ನಿಸುವುದು, ವಿರೋಧ ವ್ಯಕ್ತಪಡಿಸುವುದು ಗಮನಕ್ಕೆ ಬಂದಿದೆ. ಜಿಆರ್‍ಎಸ್ ಫ್ಯಾಂಟಸಿ ಪಾರ್ಕ್ ಆವರಣದ ಆರೋಗ್ಯ ಪರೀಕ್ಷಾ ಕೇಂದ್ರ, ಕೊಪ್ಪ, ಬಾವಲಿ ಇನ್ನಿತರ ಚೆಕ್‍ಪೋಸ್ಟ್‍ಗಳಲ್ಲಿ ಈ ರೀತಿ ಘಟನೆ ನಡೆದಿವೆ. ಸಮುದಾಯದ ಹಿತ ಹಾಗೂ ಸೋಂಕು ಹರಡುವುದನ್ನು ತಪ್ಪಿಸುವ ಉದ್ದೇಶದಿಂದ ಮಾತ್ರವೇ ಈ ಕ್ರಮ ಕೈಗೊಳ್ಳಲಾಗಿದೆ. ಇದರ ಹೊರತು ವ್ಯಕ್ತಿಗೆ ಅಥವಾ ಅವರ ಕುಟುಂಬಕ್ಕೆ ನೋವುಂಟು ಮಾಡುವ ಉದ್ದೇಶವಿಲ್ಲ. ಕೆಲವರನ್ನು ಕ್ವಾರಂಟೈನ್ ಮಾಡಿದರೆ ಲಕ್ಷಾಂತರ ಜನರಿಗೆ ಸೋಂಕು ಹರಡುವುದು ತಪ್ಪುತ್ತದೆ. ಹಾಗಾಗಿ ಸಾರ್ವಜನಿಕರು ಸಹಕರಿಸಬೇಕು. ಹೊರ ರಾಜ್ಯ ಹಾಗೂ ವಿದೇಶದಿಂದ ಬರುವವರು ತೀರಾ ಅಗತ್ಯವಿಲ್ಲದಿದ್ದರೆ ತಮ್ಮ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು. ಮುಂದಿನ ದಿನಗಳಲ್ಲಿ ಯಾವುದೇ ನಿರ್ಬಂಧವಿಲ್ಲದೆ ಪ್ರಯಾಣಿಸಲು ಅವಕಾಶ ನೀಡಬಹುದು ಎಂದು ಅಭಿರಾಮ್ ಜಿ.ಶಂಕರ್ ಸಲಹೆ ನೀಡಿದರು.
ಸೋಂಕು ಎಲ್ಲೆಡೆ ಹರಡಿಲ್ಲ: ಕಳೆದ 15 ದಿನಗಳಿಂದ ಯಾವುದೇ ಪ್ರಕರಣವಿಲ್ಲದ ಹಿನ್ನೆಲೆಯಲ್ಲಿ ರ್ಯಾಂಡಮ್ ಆಗಿ ಹಾಗೂ ಕಂಟೇನ್ಮೆಂಟ್ ಜೋನ್‍ಗಳಲ್ಲಿ ಸ್ಯಾಂಪಲ್ ತೆಗೆದುಕೊಳ್ಳಲಾಗಿದೆ. ಪೊಲೀಸ್, ಹೋಂಗಾರ್ಡ್, ಆಶಾ ಕಾರ್ಯಕರ್ತರು, ಮಾಧ್ಯಮದವರಿಗೂ ಪರೀಕ್ಷೆ ನಡೆಸಿದ್ದು, ಎಲ್ಲವೂ ನೆಗೆಟಿವ್ ವರದಿ ಬಂದಿದೆ. ಇದು ಕಂಟೇನ್ಮೆಂಟ್ ಒಂದು ಹಂತಕ್ಕೆ ಯಶಸ್ವಿಯಾಗಿದ್ದು, ಕೋವಿಡ್ ಎಲ್ಲೆಡೆ ಹರಡಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ ಅವರು, ಪೊಲೀಸ್, ನಗರ ಪಾಲಿಕೆ, ಮುಡಾ, ಆರೋಗ್ಯ ಇಲಾಖೆ, ಜಿಪಂ, ಪಿಡಿಓಗಳು, ಆಶಾ ಕಾರ್ಯಕರ್ತರು, ಹೊಂಗಾರ್ಡ್, ಪೌರಕಾರ್ಮಿಕರು, ಆಂಬುಲೆನ್ಸ್ ಸಿಬ್ಬಂದಿ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ. ಮುಖ್ಯವಾಗಿ ಧರ್ಮ, ಜಾತಿ, ವಯಸ್ಸಿನ ಭೇದವಿಲ್ಲದೆ ಸಾರ್ವಜನಿಕರು ತಮಗಾದ ಕಷ್ಟ-ನಷ್ಟವನ್ನು ಸಹಿಸಿಕೊಂಡು, ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಸಹಕರಿಸಿದ್ದಾರೆ. ಪರಿಣಾಮ ಸೋಂಕು ತಡೆಗಟ್ಟಲು ಸಾಧ್ಯವಾಗಿದೆ ಎಂದು ಎಲ್ಲರಿಗೂ ಧನ್ಯವಾದ ತಿಳಿಸಿದರಲ್ಲದೆ, 90ರಿಂದ 0(ಸೊನ್ನೆ)ಗೆ ಬಂದಿದ್ದರೂ ಮುಂದೆ ಹಲವು ಸವಾಲುಗಳನ್ನು ದಾಟಬೇಕಾಗುತ್ತದೆ. ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಿದ್ಧವಿದೆ. ಆದರೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ ಎಂದರು.
ನಂಜನಗೂಡಲ್ಲೂ ಸ್ವಲ್ಪ ರಿಲೀಫ್
ಮೈಸೂರು,ಮೇ15(ಆರ್‍ಕೆ)-ಮೈಸೂರು ಕೋವಿಡ್-19 ಸೋಂಕು ಮುಕ್ತವಾದ ಹಿನ್ನೆಲೆ ಯಲ್ಲಿ ನಂಜನಗೂಡು ಪಟ್ಟಣ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಬಡಾವಣೆಗಳ ಕ್ಲಸ್ಟರ್ ಘಟಕಗಳಲ್ಲಿ ಇದುವರೆಗೆ ವಿಧಿಸಲಾಗಿದ್ದ ನಿರ್ಬಂಧಗಳಲ್ಲಿ ಕೆಲ ಸಡಿಲಿಕೆ ಮಾಡ ಲಾಗಿದೆ. ಈ ಸಂಬಂಧ ಶುಕ್ರವಾರ ಆದೇಶ ಹೊರಡಿಸಿರುವ ಮೈಸೂರು ಜಿಲ್ಲಾಧಿಕಾರಿಗಳು, ಅನುಮತಿ ನೀಡಿರುವ ಚಟುವಟಿಕೆಗಳಿಗೆ ಮತ್ತು ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸ ಲಾಗಿದೆ. ಕೆಐಎಡಿಬಿ ಕೈಗಾರಿಕಾ ಪ್ರದೇಶದ ಎಲ್ಲಾ ಉದ್ಯಮಗಳು ಕಾರ್ಯ ನಿರ್ವಹಿಸಬಹು ದಾಗಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಲಭ್ಯವಿರುವ ಕಾರ್ಮಿಕರನ್ನು ಬಳಸಿಕೊಂಡು ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ನಡೆಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಶಾಪಿಂಗ್ ಕಾಂಪ್ಲೆಕ್ಸ್‍ನಲ್ಲಿರುವ ಅಗತ್ಯ ಸಾಮಗ್ರಿ, ಔಷಧಿ, ಅಂಗಡಿ ಹೊರತುಪಡಿಸಿ ಉಳಿದ ಅಂಗಡಿ ಗಳನ್ನು ತೆರೆಯುವಂತಿಲ್ಲ. ಪಟ್ಟಣದಲ್ಲಿ ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಯೊಳಗೆ ಅಗತ್ಯ ವಸ್ತುಗಳು, ಹಾರ್ಡ್‍ವೇರ್, ಸಿಮೆಂಟ್, ಕಬ್ಬಿಣದ ಅಂಗಡಿಗಳನ್ನು ತೆರೆಯಲು ಅನು ಮತಿಸಲಾಗಿದೆ. ಆದರೆ ಬಟ್ಟೆ, ಚಿನ್ನಾಭರಣ, ಪಾದರಕ್ಷೆಯಂತಹ ಇನ್ನಿತರ ಅಂಗಡಿಗಳನ್ನು ತೆರೆಯುವಂತಿಲ್ಲ. ನಿಯಂತ್ರಿತ ವಲಯದಲ್ಲಿ ವಾಸಿಸುವವರನ್ನು ಹೊರತುಪಡಿಸಿ ಇತರೆ ಸರ್ಕಾರಿ, ಖಾಸಗಿ ಕಚೇರಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಗುರುತಿನ ಚೀಟಿಗಳನ್ನು ಇರಿಸಿಕೊಂಡು ಕಚೇರಿಗಳಿಗೆ ತೆರಳಬೇಕು. ಆಟೋ, ಟ್ಯಾಕ್ಸಿ, ಬಸ್, ಸೆಲೂನ್, ಸಿನಿಮಾ, ಮಾಲ್, ಜಿಮ್‍ಗಳು ಕಾರ್ಯನಿರ್ವಹಿಸಲು ಅವಕಾಶ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶದಲ್ಲಿ ತಿಳಿಸಿದ್ದಾರೆ.