ಮೈಸೂರಲ್ಲಿ ಸಂತಕವಿ ಸರ್ವಜ್ಞ ಜಯಂತಿ ಆಚರಣೆ

ಮೈಸೂರು,ಫೆ.20(ಆರ್‍ಕೆ)- ಮೈಸೂ ರಿನ ಕಲಾಮಂದಿರದ ಮನೆಯಂಗಳದಲ್ಲಿ ಇಂದು ಸಂತಕವಿ ಸರ್ವಜ್ಞ ಅವರ ಜಯಂತಿ ಯನ್ನು ಸರಳವಾಗಿ ಆಚರಿಸಲಾಯಿತು.

ಮೈಸೂರು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಏರ್ಪಡಿ ಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಲ್. ನಾಗೇಂದ್ರ ಅವರು ಸರ್ವಜ್ಞ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಮಾತನಾಡಿದ ಅವರು, ನಮ್ಮ ಸಂಸ್ಕøತಿ, ಸಾಹಿತ್ಯ ಸಂಪದ್ಭರಿತವಾಗಿರುವುದಕ್ಕೆ ಸಂತಕವಿ ಸರ್ವಜ್ಞರು ನೀಡಿದ ಕೊಡುಗೆ ಕಾರಣ ಎಂದು ತಿಳಿಸಿದರು.

ಅವರ ವಿಚಾರಧಾರೆ, ಕವಿ ಸಂತತಿ ಹಿನ್ನೆಲೆಯಿಂದಾಗಿ ಇಂದೂ ನಮ್ಮ ನಾಡು ಋಷಿಮುನಿಗಳ ವಿಚಾರಧಾರೆಗಳಿಂದ ಕೂಡಿದೆ. ನಗರ ಪ್ರದೇಶಗಳಲ್ಲಿ ಕುಂಬಾರ ವೃತ್ತಿ ನಶಿ ಸುತ್ತಿದೆಯಾದರೂ, ಗ್ರಾಮೀಣ ಜನರಲ್ಲಿ ಅದು ಇಂದಿಗೂ ಜೀವಂತವಾಗಿರುವುದು ಶ್ಲಾಘನೀಯ ಎಂದು ನುಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಯೋಜನೆ ಮೂಲಕ ಗುಡಿ ಕೈಗಾರಿಕೆ ಪ್ರೋತ್ಸಾಹಿಸಲು 20 ಕೋಟಿ ರೂ. ಅನುದಾನ ನೀಡಿದ್ದಾರೆ. ಉತ್ತಮ ಆರೋಗ್ಯಕ್ಕಾಗಿ ಮಣ್ಣಿನಿಂದ ಮಾಡಿದ ಮಡಿಕೆಯಲ್ಲಿ ತಯಾರಿಸಿದ ಊಟ ಸೇವಿ ಸುತ್ತಿದ್ದ ನಮ್ಮ ಪೂರ್ವಜರು ಆರೋಗ್ಯ ದಿಂದ ದೀರ್ಘ ಕಾಲ ಜೀವಿಸುತ್ತಿದ್ದರು ಎಂದು ತಿಳಿಸಿದರು. ಮೈಲ್ಯಾಕ್ ಅಧ್ಯಕ್ಷ ಫಣೀಶ್, ಕರ್ನಾಟಕ ಮೃಗಾಲಯ ಪ್ರಾಧಿ ಕಾರದ ಅಧ್ಯಕ್ಷ ಎಲ್.ಆರ್.ಮಹದೇವ ಸ್ವಾಮಿ, ಕಾರ್ಪೊರೇಟರ್ ಉಷಾ, ಕುಂಬಾ ರರ ಸಂಘದ ಪ್ರಕಾಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.