ಅಂಬಳೆಯಲ್ಲಿ ವಿಜೃಂಭಣೆಯ ಚಾಮುಂಡೇಶ್ವರಿ ಹಬ್ಬ

ಯಳಂದೂರು:  ತಾಲೂಕಿನ ಅಂಬಳೆ ಗ್ರಾಮದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ರಕ್ತಬೀಜಾಸುರ ಸಂಹಾರ ದೊಡ್ಡಹಬ್ಬ (ಬಾಳೆ ಕತ್ತರಿಸುವ ಹಬ್ಬ) ವಿಜೃಂಭಣೆಯಿಂದ ಬುಧವಾರ ಜರುಗಿತು.

ಬೆಳಿಗ್ಗೆಯಿಂದಲೇ ಗ್ರಾಮದ ಎಲ್ಲಾ ಕೋಮಿನ ಜನರು ವಾದ್ಯ ಮೇಳ, ನಗರಿ ಜತೆಯಲ್ಲಿ ಛತ್ರಿ ಚಾಮರಗಳೊಂದಿಗೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಉತ್ಸವಮೂರ್ತಿಯನ್ನು ಗ್ರಾಮದ ಹೊರವಲಯದಲ್ಲಿರುವ ಸುವರ್ಣಾವತಿ ನದಿಯಲ್ಲಿ ವಿಶೇಷ ಪೂಜೆ ಮಾಡಿದರು.

ನಂತರ ಭಕ್ತರು ಹೊಸ ಕೇಲು ಜತೆಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದರು. ಬಳಿಕ ಚಾಮುಂಡೇಶ್ವರಿ ಅಮ್ಮನವರ ಉತ್ಸವ ಮೂರ್ತಿ ಹೊತ್ತ ಭಕ್ತರು ಕಾರಾಪುರ ಮಠದ ಬಳಿ ಇರುವ ದೇವಳ್ವ ಗುಡಿಯಲ್ಲಿ ಪೂಜೆ ಸಲ್ಲಿಸಿ ಮತ್ತೆ ಚಾಮುಂಡೇಶ್ವರಿ ಅಮ್ಮನವರ ದೇವಾಲಯ ಪ್ರದಕ್ಷಿಣೆ ಹಾಕಿದರು. ಬಳಿಕ ದೇವರು ಮನೆಯಲ್ಲಿ ಉತ್ಸವ ಮೂರ್ತಿ ಇಟ್ಟರು.

ರಕ್ತಬೀಜಾಸುರ ಸಂಹಾರ: ಗ್ರಾಮದೇವತೆ ಚಾಮುಂಡೇಶ್ವರಿ ವೇಷ ಧರಿಸಿದ ಭಕ್ತ ಮತ್ತು ರಕ್ತಬೀಜಾಸುರ ವೇಷಸು ಭಕ್ತರ ನಡುವ ಕಾಳಗ ನಡೆಯುತ್ತದೆ. ಈ ಕಾಳಗದಲ್ಲಿ ರಕ್ತ ಬೀಜಾಸುರ ಸಂಹಾರ ಮಾಡುವ ಬದಲು ಬಾಳೆ ಕಂಬ ಕತ್ತರಿಸುವ ಮೂಲಕ ರಕ್ತ ಬೀಜಾಸುರನ ವಧೆ ಮಾಡಲಾಗುತ್ತದೆ.ಇದೇ ಸಂದರ್ಭದಲ್ಲಿ ಸಾವಿರಾರು ಭಕ್ತರು ಎಳೆನೀರು ತಲೆ ಮೇಲೆ ಹೊರುವ ಮೂಲಕ ತಮ್ಮ ಹರಕೆಗಳನ್ನು ತೀರಿಸಿದರು.