ಶಕ್ತಿ ದೇವತೆಗಳ ಕರಗ ನಗರ ಸಂಚಾರಕ್ಕೆ ನಿರ್ಬಂಧ ಸಲ್ಲದು

ಮಡಿಕೇರಿ, ಅ.21- ಮಡಿಕೇರಿ ನಗರದ ಐತಿಹಾಸಿಕ ನಾಲ್ಕು ಶಕ್ತಿ ದೇವತೆಗಳ ದಸರಾ ಕರಗಗಳ ನಗರ ಸಂಚಾರಕ್ಕೆ ನಿರ್ಬಂಧ ಹೇರಿರುವುದು ಸರಿ ಯಾದ ಕ್ರಮವಲ್ಲ ವೆಂದು ಅಸಮಾ ಧಾನ ವ್ಯಕ್ತಪಡಿಸಿರುವ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್, ನವರಾತ್ರಿಯ ಕೊನೆಯ ಮೂರು ದಿನಗಳಾದರು ಕರಗ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೋವಿಡ್ ಮಾರ್ಗಸೂಚಿಯ ನೆಪವೊಡ್ಡಿ ಕೊಡಗು ಜಿಲ್ಲೆಗೆ ಮಾತ್ರ ಸೀಮಿತವಾಗಿ ಎಲ್ಲಾ ನಿಯಮಗಳನ್ನು ಹೇರಿಕೆ ಮಾಡು ತ್ತಿರುವುದು ಖಂಡನೀಯ. ತಲಕಾವೇರಿ ಯಲ್ಲಿ ತೀರ್ಥೋದ್ಭವದ ಸಂದರ್ಭದಲ್ಲೂ ಭಕ್ತರ ಭಾವನೆಗೆ ವಿರುದ್ಧವಾಗಿ ಜಿಲ್ಲಾ ಡಳಿತ ನಡೆದುಕೊಂಡಿದೆ. ಇದೀಗ ಮಡಿಕೇರಿ ನಗರ ದಸರಾ ದಿನಗಳ ಧಾರ್ಮಿಕ ವಿಧಿ, ವಿಧಾನಗಳಿಗೂ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ. ಬಹಳ ವರ್ಷಗಳ ಹಿಂದೆ ಮಡಿಕೇರಿಯನ್ನು ಸಾಂಕ್ರಾಮಿಕ ರೋಗ ಕಾಡಿದಾಗ ನಾಲ್ಕು ಶಕ್ತಿ ದೇವತೆ ಗಳ ಕರಗೋತ್ಸವವನ್ನು ಆರಂಭಿಸ ಲಾಯಿತು. ಊರಿನ ಹಿತಕ್ಕಾಗಿ ಕರಗಗಳು ನಗರ ಸಂಚಾರ ಕೈಗೊಂಡು ಮನೆ ಮನೆಗಳಿಂದ ಪೂಜೆ ಪಡೆ ಯುವ ಪದ್ಧತಿ ನಿರಂತರವಾಗಿ ನಡೆದು ಕೊಂಡು ಬಂದಿದೆ. ಆದರೆ ಪ್ರಸ್ತುತ ವರ್ಷ ಕರಗಗಳು ನಗರ ಸಂಚಾರವನ್ನೇ ಮಾಡ ಬಾರದೆಂದು ಜಿಲ್ಲಾಡಳಿತ ಅರ್ಥಹೀನ ಆದೇಶ ನೀಡಿ ರುವುದು ಹಾಸ್ಯಾಸ್ಪದ ವಾಗಿದೆ. ರಾಜ್ಯದ ಯಾವ ಭಾಗದಲ್ಲೂ ಅನ್ವಯವಾಗದ ನಿಯಮಾವಳಿಗಳು ಕೊಡಗಿನಲ್ಲಿ ಮಾತ್ರ ಜಾರಿಯಾಗುತ್ತಿದೆ.

ಮೈಸೂರು ದಸರಾ ಹೆಚ್ಚು ನಿರ್ಬಂಧ ಗಳಿಲ್ಲದೆ ಸಾಂಗವಾಗಿ ನಡೆಯುತ್ತಿದೆ. ಉಪಚುನಾವಣೆಗಳ ಪ್ರಚಾರ ಕಾರ್ಯ ಕೂಡ ಭರ್ಜರಿಯಾಗಿ ಆಗುತ್ತಿದೆ. ಸಚಿವರು ಗಳು ಜನ ಜಂಗುಳಿಯ ನಡುವೆ ಯೇ ಸಂಚರಿಸುತ್ತಾರೆ. ಜಿಲ್ಲಾಡಳಿತದ ಭವನ ಪ್ರತಿದಿನ ಮಿತಿ ಮೀರಿದ ಜನಸಂಖ್ಯೆ ಯಿಂದ ಕೂಡಿರುತ್ತದೆ. ಪರಿಸ್ಥಿತಿ ಹೀಗಿರು ವಾಗ ವರ್ಷಕ್ಕೊಮ್ಮೆ ಬರುವ ದಸರಾ ಆಚರಣೆಗೆ ಮಾತ್ರ ಕೊಡಗು ಜಿಲ್ಲಾಡಳಿತ ನಿರ್ಬಂಧ ಹೇರುತ್ತಿರುವುದು ಯಾಕೆ ಮತ್ತು ಆಡಳಿತ ಪಕ್ಷದ ಶಾಸಕರು ಎಲ್ಲವನ್ನೂ ಅಧಿಕಾರಿಗಳ ವಿವೇಚನೆಗೆ ಬಿಟ್ಟು ಮೌನಕ್ಕೆ ಶರಣಾಗಿ ರುವುದು ಯಾಕೆ ಎಂದು ನೆರವಂಡ ಉಮೇಶ್ ಪ್ರಶ್ನಿಸಿದ್ದಾರೆ. ಜಿಲ್ಲೆಯ ಆಚಾರ ವಿಚಾರಗಳ ಬಗ್ಗೆ ಹೊರಗಿನಿಂದ ಬಂದಿರುವ ಅಧಿ ಕಾರಿಗಳಿಗೆ ತಿಳಿದಿರುವುದಿಲ್ಲ. ಈ ರೀತಿಯ ಸಂದರ್ಭಗಳಲ್ಲಿ ಜನರಿಂದ ಆಯ್ಕೆ ಯಾದ ಜನಪ್ರತಿನಿಧಿಗಳು ಜನಪರವಾದ ನಿಲುವುಗಳನ್ನು ಕೈಗೊಳ್ಳಲು ಅಧಿಕಾರಿಗಳ ಮನವೊಲಿಸುವ ಕಾರ್ಯ ಮಾಡ ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಜಿಲ್ಲಾಡಳಿತ ಮಡಿಕೇರಿ ದಸರಾ ಆಚರಣೆ ಕುರಿತು ತನ್ನ ನಿರ್ಧಾರವನ್ನು ಬದಲಿಸಿ ಅ.23, 24 ಮತ್ತು 25 ರಂದು ಕರಗಗಳ ನಗರ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಆ ಮೂಲಕ ಕರಗ ಪೂಜೆ ಗಾಗಿ ದೇವಾಲಯಗಳಲ್ಲಿ ನೂಕುನುಗ್ಗಲು ಉಂಟಾಗುವುದನ್ನು ತಪ್ಪಿಸಬೇಕು ಎಂದು ಉಮೇಶ್ ಒತ್ತಾಯಿಸಿದ್ದಾರೆ.