ಏಷ್ಯಾದಲ್ಲೇ ಅತಿ ಎತ್ತರದ 161 ಅಡಿ ಆಂಜನೇಯ ಮೂರ್ತಿ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ತುಮಕೂರು, ಏ.೧೦-ಕುಣ ಗಲ್ ತಾಲೂಕಿನ ಬಿದನ ಗೆರೆಯಲ್ಲಿ ಬಸವೇಶ್ವರ ಮಠದಿಂದ ನಿರ್ಮಿಸಿರುವ ೧೬೧ ಅಡಿ ಎತ್ತರದ ಪಂಚಮುಖಿ ಆಂಜನೇಯಸ್ವಾಮಿ ಮೂರ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಇದು ಇಡೀ ಏಷ್ಯಾದಲ್ಲಿಯೇ ಅತಿ ಎತ್ತರದ ಪಂಚಮುಖಿ ಆಂಜನೇಯ ಮೂರ್ತಿಯಾಗಿದೆ.

ನಂತರ ಮಾತನಾಡಿದ ಅವರು, ಶ್ರೀ ರಾಮನವಮಿ ದಿನ ಈ ಪವಿತ್ರ ಕಾರ್ಯಕ್ರಮ ನಡೆದಿದೆ. ವಿಶ್ವದಲ್ಲೇ ಅತಿ ಎತ್ತರದ ಪಂಚಮುಖಿ ಆಂಜನೇಯ ಮೂರ್ತಿ ಇದಾಗಿದೆ. ಪಂಚಮುಖಿ ಬಹಳ ಅಪರೂಪ. ರಾಮಾಯಣದ ವಿಶೇಷ ಸಂದರ್ಭದಲ್ಲಿ ಹನುಮನ ಅವತಾರ ಇದಾಗಿದೆ. ಲೋಕ ಕಲ್ಯಾಣಕ್ಕಾಗಿ ಹನುಮ ಈ ಅವತಾರ ಎತ್ತಿದ್ದ ಎನ್ನುವ ಪ್ರತೀತಿ ಇದೆ ಎಂದರು. ಇಬ್ಬರು ಸ್ವಾಮೀಜಿಗಳು ಈ ಅದ್ಭುತ ಮೂರ್ತಿಗೆ ಜೀವ ತುಂಬುವ ಕೆಲಸ ಮಾಡಿದ್ದಾರೆ. ಇದು ಇಡೀ ವಿಶ್ವದಲ್ಲೇ ಅಪ ರೂಪದ ಮೂರ್ತಿಯಾಗಿದೆ. ಈ ಕ್ಷೇತ್ರದ ಮಹಿಮೆ ಜಗತ್ತಿಗೆ ಹರಡಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

ಪಟ್ಟನಾಯಕನಹಳ್ಳಿಯ ಸ್ವಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ, ಹರಿಹರ ವೀರಶೈವ ಪಂಚಮ ಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ, ಬಸವೇಶ್ವರ ಮಠದ ಧರ್ಮಾಧಿಕಾರಿ, ಡಾ. ಧನಂಜಯ್ಯ ಗೂರೂಜಿ, ಸಚಿವ ಡಾ. ಅಶ್ವತ್ಥ ನಾರಾಯಣ್, ಶಾಸಕರಾದ ಡಾ. ರಂಗನಾಥ್, ರಾಜುಗೌಡ ಸಂಸದ ಮುನಿಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.