ಆಟೋ ಚಾಲಕರಿಗೆ ಪರಿಹಾರ ಮೊತ್ತ ಜಮೆ

ಮೈಸೂರು, ಜೂ.4- ಲಾಕ್‍ಡೌನ್ ಪರಿ ಣಾಮ ಸಂಕಷ್ಟಕ್ಕೆ ಸಿಲುಕಿರುವ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಕರ್ನಾಟಕ ಸರ್ಕಾರ ಘೋಷಣೆ ಮಾಡಿದ್ದ 5 ಸಾವಿರ ರೂ. ಪರಿ ಹಾರ ಮೊದಲ ಕಂತಿನಲ್ಲಿ ರಾಜ್ಯದ 40 ಸಾವಿರ ಚಾಲಕರ ಖಾತೆಗೆ ಹಣ ಜಮೆ ಆಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಬೆಳಕು ಸಂಸ್ಥೆ ವತಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪನವರಿಗೆ ಚಾಲಕರಿಂದ ಕೃತ ಜ್ಞತಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬೆಳಕು ಸಂಸ್ಥೆ ಸಂಸ್ಥಾಪಕ ಕೆ.ಎಂ. ನಿಶಾಂತ್ ನೇತೃತ್ವದಲ್ಲಿ ಹತ್ತಾರು ಆಟೋ ಚಾಲಕರು ಸಿಹಿ ವಿತರಿಸಿ ಸಂಭ್ರಮಿಸಿದರು. ಬಳಿಕ ಕೆ.ಎಂ.ನಿಶಾಂತ್ ಮಾತನಾಡಿ, ಸೇವಾ ಸಿಂದು ಪೆÇೀರ್ಟಲ್ ಪ್ರಾರಂಭವಾದ ದಿನ ದಿಂದಲೇ ಚಾಲಕರಿಗೆ ಆನ್‍ಲೈನ್ ಅರ್ಜಿ ಸಲ್ಲಿಸಲು ಅನುಕೂಲವಾಗಲೆಂದು ಬೆಳಕು ಸಂಸ್ಥೆ ವತಿಯಿಂದ ಉಚಿತ ಸಹಾಯ ಕೇಂದ್ರ ಪ್ರಾರಂಭಿಸಲಾಯಿತು. 10 ದಿನಗಳಿಂದ ನಿರಂತರವಾಗಿ ಚಾಲಕರ ಅರ್ಜಿಗಳನ್ನು ಅಪ್‍ಲೋಡ್ ಮಾಡಲಾಗಿದೆ. ಇಲ್ಲಿಯವ ರೆಗೂ 1000ಕ್ಕೂ ಹೆಚ್ಚು ಚಾಲಕರು ನಮ್ಮ ಸಹಾಯ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ.

700ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತ ವಾಗಿದೆ. ಅವರಲ್ಲಿ ಬಹುತೇಕರಿಗೆ ಇಂದು ಮೊದಲ ಹಂತದಲ್ಲಿ 5000 ರೂ. ತಲು ಪಿದೆ. ಇನ್ನುಳಿದವರಿಗೆ ಇನ್ನೆರಡು ದಿನಗಳಲ್ಲಿ ಹಣ ತಲುಪಲಿದೆ. ಹಾಗಾಗಿ ನಾನು ಯಡಿ ಯೂರಪ್ಪನವರಿಗೆ ಎಲ್ಲ ಚಾಲಕರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ಆಟೋ ಚಾಲಕ ನಂಜುಂಡಸ್ವಾಮಿ ಮಾತ ನಾಡಿ, ಯಡಿಯೂರಪ್ಪನವರು ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದರು. ಈಗ ಮೊದಲ ಹಂತದಲ್ಲಿ ರಾಜ್ಯದ 40 ಸಾವಿರ ಚಾಲಕರಿಗೆ ತಲಾ 5000 ರೂ. ತಲುಪಿದೆ. ಸಂಕಷ್ಟದಲ್ಲಿದ್ದ ಚಾಲಕರ ಕುಟುಂಬಕ್ಕೆ ಯಡಿಯೂರಪ್ಪನವರು ಆಸರೆಯಾಗಿದ್ದಾರೆ ಎಂದರು. ಆಟೋಚಾಲಕರ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ, ಬೆಳಕು ಸಂಸ್ಥೆಯ ಎಂ.ಎನ್.ಧನುಷ್, ನರೇಂದ್ರ, ದೀಪಕ್, ನಂಜಪ್ಪ, ಸುದರ್ಶನ್, ಅರ್ಜುನ್, ಪ್ರವೀಣ್ ಪಣಿ, ತಾಂಬು, ಪರಮೇಶ್, ಪ್ರಸಾದ್, ಸತ್ಯ, ಮತ್ತಿತರರು ಉಪಸ್ಥಿತರಿದ್ದರು.