ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ ಪತ್ರಕರ್ತರ ಕಚೇರಿಯಲ್ಲಿ ಶಾಸಕ ನಿರಂಜನ್‍ಕುಮಾರ್ ಹೇಳಿಕೆ

ಗುಂಡ್ಲುಪೇಟೆ: ಪಟ್ಟಣದ ಅಬ್ದುಲ್ ನಜೀರ್ ಸಾಬ್ ಜೋಡಿ ರಸ್ತೆಯ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚನೆ ನಿಡಲಾಗುವುದು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.

ಪಟ್ಟಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಶನಿವಾರ ಪತ್ರಕರ್ತರಿಂದ ಸನ್ಮಾನ ಸ್ವೀಕ ರಿಸಿ ಅವರು ಮಾತನಾಡಿದರು.

ಜೋಡಿ ರಸ್ತೆಯ ಕಾಮಗಾರಿ ಬಹಳ ಮಂದಗತಿಯಲ್ಲಿ ಸಾಗುತ್ತಿದೆ. ಗುದ್ದಲಿ ಪೂಜೆ ಸಮಯದಲ್ಲಿ 3 ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದ್ದರು. ಆದರೆ, ಕಾಮಗಾರಿ ಪ್ರಾರಂಭ ವಾಗಿ ಆರೇಳು ತಿಂಗಳಾದರೂ ಪೂರ್ಣ ಗೊಂಡಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಸಾರ್ವ ಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ತಾಕೀತು ನೀಡಲಾಗುತ್ತದೆ ಎಂದರು.

ತಾಲೂಕಿನ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗಾಗಿ ಸ್ಥಳೀಯ ಗ್ರಾಮ ಪಂಚಾ ಯಿತಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುವುದು ಅಗತ್ಯವಾಗಿದೆ. ಪಂಚಾಯಿತಿಗಳಲ್ಲಿ ಪಿಡಿಒ, ಕಾರ್ಯದರ್ಶಿ ಎಲ್ಲರೂ ಸಕಾಲದಲ್ಲಿ ಹಾಜರಿರಬೇಕು ಎಂದು ಸೂಚಿಸಲಾಗುವುದು. ಜತೆಗೆ, ಗ್ರಾಮೀಣ ಭಾಗದ ಜನರಿಂದ ಪಂಚಾಯಿತಿ ಅಧಿ ಕಾರಿಗಳ ವಿರುದ್ಧ ದೂರುಗಳು ಬಂದಲ್ಲಿ ಅಂತಹ ಅಧಿಕಾರಿಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ನರೇಗಾ ಯೋಜನೆ ತಾಲೂಕಿನಲ್ಲಿ ಸಂಪೂ ರ್ಣವಾಗಿ ಅನುಷ್ಠಾನಗೊಳಿಸಲು ಮೂರ್ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಮಾದರಿಯನ್ನಾಗಿ ಮಾಡಬೇಕು. ಈ ಗ್ರಾಮಗಳಲ್ಲಿ ನರೇಗಾ ಯೋಜನೆಯ ಎಲ್ಲ ಕೆಲಸಗಳು ಅನುಷ್ಠಾನಗೊಂಡಿರ ಬೇಕು. ಇವುಗಳನ್ನು ತೋರಿಸಿ ಎಲ್ಲ ಪಂಚಾ ಯಿತಿಯ ಜನರನ್ನು ಉತ್ತೇಜಿಸಬೇಕು ಎನ್ನುವ ಆಲೋಚನೆಯಿದ್ದು, ಇದನ್ನು ಸದ್ಯದಲ್ಲೇ ಕಾರ್ಯಗತಗೊಳಿಸಲಾಗುತ್ತದೆ ಎಂದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾ.ಬಾಬು, ನಿರ್ದೇಶಕರಾದ ಸೋಮ ಶೇಖರ್, ಕೆ.ಎನ್.ಮಹದೇವಸ್ವಾಮಿ, ವೀರೇಂದ್ರಪ್ರಸಾದ್, ಸತೀಶ್, ರಾಜ ಗೋಪಾಲ್, ದೀಪಾ ಶ್ರೀನಿವಾಸ್, ಪುರಸಭಾ ಅಧ್ಯಕ್ಷ ಪಿ.ಗಿರೀಶ್, ಸದಸ್ಯ ಗೋವಿಂದ ರಾಜನ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಣಯ್, ಮುಖಂಡರಾದ ಮಹದೇವ ಪ್ರಸಾದ್, ಮಂಜುನಾಥ್ ಹಾಜರಿದ್ದರು.