ನಾಲ್ವಡಿ ಆಡಳಿತದ ಸಮಗ್ರ ಸಂಶೋಧನೆ ಅಗತ್ಯ

ಮೈಸೂರು, ಜೂ.5(ಎಂಟಿವೈ)- ಸುದೀರ್ಘ ಅವಧಿಗೆ ಉತ್ತಮ ಆಳ್ವಿಕೆ ನಡೆ ಸಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆ ಯರ್ ಅವರ ಆಡಳಿತ ಕುರಿತಂತೆ ಸಮಗ್ರ ಸಂಶೋಧನೆ ಅಗತ್ಯವಿದೆ. ಆ ಮೂಲಕ ಇಂದಿನ ರಾಜಕಾರಣಿಗಳಿಗೆ ಉತ್ತಮ ಸಂದೇಶ ರವಾನಿಸಬೇಕಿದೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಭಾರ ತೀಯ ದಲಿತ ಸಾಹಿತ್ಯ ಅಕಾಡೆಮಿ ಸಂಯು ಕ್ತಾಶ್ರಯದಲ್ಲಿ `ರಾಜರ್ಷಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ಜಯಂತಿ’ ಪ್ರಯುಕ್ತ ಶುಕ್ರ ವಾರ ಆಯೋಜಿಸಿದ್ದ ಐವರು ಹಿರಿಯ ಪತ್ರಕರ್ತರಿಗೆ ನಾಲ್ವಡಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿದ ಅವರು, ನಾಲ್ವಡಿ ಅವರು ಮಾದರಿ ಆಡಳಿತ ನೀಡಿ ರಾಜಕಾರಣ ಹೇಗೆ ಮಾಡಬೇಕೆಂದು ತೋರಿಸಿಕೊಟ್ಟಿ ದ್ದಾರೆ. ಮಹಾತ್ಮ ಗಾಂಧೀಜಿಯೇ ನಾಲ್ವಡಿ ಅವರನ್ನು ಮೆಚ್ಚಿ `ರಾಜಋಷಿ’ ಎಂಬ ಬಿರುದು ನೀಡಿದ್ದರು ಎಂದು ಸ್ಮರಿಸಿದರು.

ನಾಲ್ವಡಿಯವರು ದಕ್ಷಿಣ ಕರ್ನಾಟಕ ದಲ್ಲಿ ಮೈಸೂರು ಪ್ರಾಂತ್ಯ ಮುಂದುವರೆದ ಜಿಲ್ಲೆಯಾಗಿ ಗುರುತಿಸಿಕೊಳ್ಳಲು ಭದ್ರ ಬುನಾದಿ ಹಾಕಿಕೊಟ್ಟರು. ಶೋಷಿತ ಸಮಾಜದವ ರಿಗೆ ಶಾಲೆ, ವಿದ್ಯಾರ್ಥಿನಿಲಯ, ವಿಶ್ವ ವಿದ್ಯಾ ನಿಲಯ ಆರಂಭಿಸುವ ಮೂಲಕ ವಿದ್ಯಾ ಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿದರು. ಮೂಢ ನಂಬಿಕೆಗಳ ವಿರುದ್ಧ ಸಮಗ್ರ ಕಾಯ್ದೆ ಜಾರಿಗೆ ತಂದರು ಎಂದು ನೆನಪಿಸಿದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, ಹಲವು ಪ್ರಥಮಗಳಿಗೆ ಸಾಕ್ಷಿಯಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು `ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆಯಂತೆ ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಯೋಜನೆ ಗಳನ್ನೇ ಅನುಷ್ಠಾನಗೊಳಿಸಿದ್ದಾರೆ. ದೇಶದ ರಾಜ ಪರಂಪರೆಯಲ್ಲಿಯೇ ನಾಲ್ವಡಿ ಅವರು ವಿಶೇಷ ಸ್ಥಾನ ಪಡೆದಿದ್ದಾರೆ. ಮೊದಲ ಬಾರಿಗೆ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಿದ ಕೀರ್ತಿ ನಾಲ್ವಡಿ ಅವರಿಗೆ ಸಲ್ಲು ತ್ತದೆ. ಅರಮನೆಯ ಆಭರಣಗಳನ್ನೇ ಗಿರಿವಿ ಇಟ್ಟು ಕೆಆರ್‍ಎಸ್ ಆಣೆಕಟ್ಟನ್ನು ಕಟ್ಟಿಸಿ ಮೈಸೂರು, ಮಂಡ್ಯ, ಬೆಂಗಳೂರು ಸುತ್ತಲಿನ ಜಿಲ್ಲೆಗಳ ಜನರಿಗೆ ಅನುಕೂಲ ಮಾಡಿದ್ದಾರೆ ಎಂದು ಸ್ಮರಿಸಿದರು.

ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ಪ್ರಸ್ತುತ ಸಂದರ್ಭ ಪ್ರಪಂಚ ವಿಷಮ ಪರಿಸ್ಥಿತಿ ಎದುರಿಸುತ್ತಿದೆ. ಕೊರೊನಾ ವಿರುದ್ಧ ನಡೆಯುತ್ತಿರುವ ಹೋರಾಟ ಮೂರನೆ ಮಹಾಯುದ್ಧ ದಂತೆ ಭಾಸವಾಗುತ್ತಿದೆ. ಇದರಲ್ಲಿ ಯಶಸ್ವಿ ಯಾಗಲೇಬೇಕಾದ ಅನಿವಾರ್ಯವಿದೆ. ಸಮರ್ಪಕವಾಗಿ ಪರಿಸ್ಥಿತಿ ನಿಭಾಯಿಸದಿ ದ್ದರೆ ವಿನಾಶಕ್ಕೆ ಎಡೆಮಾಡಿಕೊಟ್ಟಂತೆ ಎಂದು ಎಚ್ಚರಿಸಿದರು.

ಪುರಸ್ಕೃತರು: ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, `ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ಮುಖ್ಯ ವರದಿಗಾರ ಎಸ್.ಟಿ.ರವಿಕುಮಾರ್, ಹಿರಿಯ ಪತ್ರಕರ್ತ ಎಂ.ಎಸ್.ಕಾಶಿನಾಥ್, ಅಂಶಿ ಪ್ರಸನ್ನಕುಮಾರ್, ಟಿ.ವಿ.ರಾಜೇಶ್ವರ ಅವರಿಗೆ ನಾಲ್ವಡಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಸಾಪ ಜಿಲ್ಲಾ ಧ್ಯಕ್ಷ ಡಾ.ವೈ.ಡಿ.ರಾಜಣ್ಣ, ನಗರ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್ ಕಾರ್ಯಕ್ರಮದಲ್ಲಿದ್ದರು.