ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ

ಮೂಗೂರು: ಬಾಲ್ಯ ಜೀವನದಿಂದಲೂ ತ್ಯಾಗದ ಮೂರ್ತಿ ಗಳಾಗಿ ಹೊರಹೊಮ್ಮಿದ ಸಿದ್ಧಗಂಗಾ ಶ್ರೀ ಗಳು ವಿಶ್ವಕ್ಕೆ ಶ್ರೇಷ್ಠರು ಎಂದು ತಾ.ಪಂ. ಸದಸ್ಯ ಎಂ.ಪಿ.ಚಂದ್ರಶೇಖರ್ ಹೇಳಿದರು.

ಗ್ರಾಮದ ಬಂಡಿ ಬೀದಿಯ ಬಂಡಿ ಮಂಟಪದ ಆವರಣದಲ್ಲಿ ನಡೆದ ಸಿದ್ಧ ಗಂಗಾ ಶ್ರೀಗಳ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಶ್ರೀಗಳು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ಕನ್ನಡ ಚಳವಳಿಗಾರ ಮೂಗೂರು ನಂಜುಂಡಸ್ವಾಮಿ, ವಾಟಾಳ್ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯಸ್ವಾಮೀಜಿ ಅವರು ಶ್ರೀಗಳು ನಡೆದು ಬಂದ ದಾರಿ, ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳ ಬಗ್ಗೆ ಮಾತ ನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿ ಸಿದ ವಿವಿಧ ಮಠದ ಸ್ವಾಮೀಜಿಗಳನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿ ಯಿಂದ ಹುತಾತ್ಮರಾದ ವೀರಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸುಮಾರು 2000ಕ್ಕೂ ಹೆಚ್ಚು ಮಂದಿ ದಾಸೋಹದಲ್ಲಿ ಭಾಗವಹಿಸಿದ್ದರು. ಲಿಂಗೈಕ್ಯರಾದ ಶಿವ ಕುಮಾರ ಸ್ವಾಮೀಜಿಗಳ ಭಾವಚಿತ್ರವನ್ನು ಅಲಂಕೃತÀ ಹೂವಿನ ಪಲ್ಲಕ್ಕಿಯಲ್ಲಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಮುಖಂಡರಾದ ಎಂ.ವಿ. ಬಸವಣ್ಣ, ಹೋಟೆಲ್ ಪುಟ್ಟಸ್ವಾಮಿ, ಅಖಿಲ ಭಾರತ ವೀರಶೈವ ಸಂಘದ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ, ಗ್ರಾ.ಪಂ. ಉಪಾಧ್ಯಕ್ಷ ಕಿರಣ್ ಕುಮಾರ್, ಜಿಲ್ಲಾ ಖಾಸಗಿ ಬಸ್ ನಿರ್ವಾಹಕ, ಚಾಲಕ ಸಂಘದ ಅಧ್ಯಕ್ಷ ಮೂಗೂರು ಚಂದ್ರು, ಉಪನ್ಯಾಸಕ ಕುಮಾರ ಸ್ವಾಮಿ, ಚಿನ್ನಬುದ್ದಿ, ಮಹೇಂದ್ರಕುಮಾರ್, ಕೆ.ಜಿ.ನಾಗರಾಜು ಕುರುಬೂರು, ನಂಜುಂಡ ಸ್ವಾಮಿ, ಮಹದೇವಪ್ಪ, ಎಂ.ಪಿ.ನಿಂಗಪ್ಪ ಹಾಗೂ ಗ್ರಾಮಸ್ಥರು ಹಾಜರಿದ್ದರು.