ದೇಶದಲ್ಲಿ ಪ್ರಸ್ತುತ ಸರ್ವಾಧಿಕಾರ ಜಾರಿಯಾಗುವ ಸ್ಥಿತಿ ನಿರ್ಮಾಣ

ಮೈಸೂರು, ಫೆ.27(ಆರ್‍ಕೆಬಿ)- ಪ್ರಸ್ತುತ ದೇಶದ ಪರಿಸ್ಥಿತಿ ನೋಡಿದರೆ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿದ್ದು, ಸರ್ವಾಧಿಕಾರ ಜಾರಿಗೆ ಬರುವ ಸ್ಥಿತಿ ಎದುರಾಗುವಂತಿದೆ ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಆತಂಕ ವ್ಯಕ್ತಪಡಿಸಿದರು.

ಮೈಸೂರಿನ ಮಾನಸಗಂಗೋತ್ರಿಯ ಕನ್ನಡ ಅಧ್ಯ ಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಎನ್.ರಾಚಯ್ಯ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿದ್ದ `ದಲಿತ ಚಳವಳಿ ಮತ್ತು ರೈತ ಚಳವಳಿ – ಒಂದು ಮುಖಾಮುಖಿ’ ರಾಜ್ಯ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ, ಮಾತನಾಡಿದರು.

ಇಂದಿನ ಪರಿಸ್ಥಿತಿ ಹೇಗಿದೆ ಎಂದರೆ ಬೇವು ಬಿತ್ತಿ, ಮಾವು ಬೆಳೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ರಾಜಕೀಯ ಅಧಿಕಾರ ಎಲ್ಲಾ ಸಮಸ್ಯೆಗಳನ್ನು ಬಗೆಹರಿ ಸುವ ಕೀಲಿ ಕೈ ಎನ್ನಲಾಗುತ್ತದೆ. ಆದರೆ ಒಂದು ಧರ್ಮ ಮತ್ತು ಜಾತಿಯೇ ಪ್ರಮುಖ ಎನ್ನುವಂತಾಗಿದೆ. ಮಾತನಾಡಿದರೆ ಶಿಕ್ಷೆಗೆ ಒಳಪಡಿಸುವ ಸ್ಥಿತಿ. ರಾಜಕೀಯ ನಾಯಕರು ಆಯುಧಗಳಂತಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಟಿಪ್ಪು ಭೂಮಿ ಇಲ್ಲದವರಿಗೆ ಭೂಮಿ ನೀಡಿದ. ದೇವ ದಾಸಿ ಪದ್ಧತಿ ನಿಲ್ಲಿಸಿದ. ಆತನ ಬಗ್ಗೆ ಮಾತನಾಡಿದರೆ ಹಿಂದೂ ವಿರೋಧಿ ಎನ್ನುತ್ತಾ.ರೆ. ಅಹಿಂದ ಸಮ್ಮೇಳನ ಮಾಡಬೇಡಿ, ಹಿಂದ ಎನ್ನಬೇಡಿ ಎನ್ನುತ್ತಾರೆ. ಜನ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಜನರನ್ನು ಹೆದರಿಸಲಾಗುತ್ತಿದೆ. ಸೌಹಾರ್ದತೆಯಿಲ್ಲದೇ ಆಡಳಿತ ಯಶಸ್ವಿಯಾಗಲು ಸಾಧ್ಯವೇ?. ಇಂತಹ ಪರಿಸ್ಥಿತಿಯಲ್ಲಿ ರೈತರು, ದಲಿತರು ಸೇರಿದಂತೆ ಎಲ್ಲಾ ಸಂಘಟನೆಗಳು ಒಗ್ಗೂಡಿ ಚಳವಳಿ ನಡೆಸುವುದು ಅನಿವಾರ್ಯವಾಗಿದೆ ಎಂದರು.

ಅಸ್ಪøಶ್ಯರ ಅಭಿವೃದ್ಧಿಗಾಗಿ ಅಧಿಕಾರಿಗಳನ್ನು ನೇಮಿಸಿ ದರೆ ಆ ಅಧಿಕಾರಿಗಳು ಎಡ, ಬಲ ಎಂದು ಸೃಷ್ಟಿಸಿ, ಇಂದು ಎಡಗೈ, ಬಲಗೈ ಎಂದು ನಮ್ಮನ್ನು ನಾವೇ ದೂಷಿಸಿಕೊಳ್ಳುವ ಸ್ಥಿತಿಗೆ ತಂದು ನಿಲ್ಲಿಸಲಾಗಿದೆ. ಜಾತಿ ವ್ಯವಸ್ಥೆಯಲ್ಲಿ ನಮ್ಮನ್ನು ನಾವೇ ಕಳೆದುಕೊಳ್ಳುವಂತಾ ಗಿದೆ. ಪ್ರಜಾಪ್ರಭುತ್ವದ ಭವಿಷ್ಯ ಏನು ಎಂದು ಯೋಚಿಸ ಬೇಕಾಗಿದೆ. ಪ್ರಜಾಪ್ರಭುತ್ವದ ಆಧಾರಸ್ತಂಭಗಳು ದುರ್ಬಲವಾದರೆ, ಸರ್ವಾಧಿಕಾರಿ ಆಡಳಿತಕ್ಕೆ ಒಳಗಾಗ ಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಎನ್.ರಾಚಯ್ಯ ಅವರು ನೊಂದವರ, ಬಡವರ ಧ್ವನಿಯಾಗಿ, ಯಾರ ಮುಲಾಜಿಗೂ ಒಳಗಾಗದೆ ಹಿಂದು ಳಿದವರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಮುಖ್ಯಮಂತ್ರಿ ವಿರುದ್ಧವೇ ಅವಿಶ್ವಾಸ ಮಂಡಿಸಿದಂಥ ವರು ಎಂದು ಸ್ಮರಿಸಿದರು. ಚರಿತ್ರೆಯಲ್ಲಿ ಶಾಶ್ವತರಾದ ಎನ್.ರಾಚಯ್ಯರಂತಹ ರಾಜಕೀಯ ನಾಯಕರ ಕುರಿತಂತೆ ಯುವ ಸಮುದಾಯ ಅರಿಯಬೇಕು. ಸಮಸ್ಯೆಗಳ ಕುರಿತಂತೆ ಚರ್ಚೆ, ಚಳವಳಿಗಳಾಗಬೇಕು ಎಂದು ಸಲಹೆ ನೀಡಿದರು. ಮೈಸೂರು ವಿವಿ ಕುಲ ಪತಿ ಪ್ರೊ.ಜಿ.ಹೇಮಂತಕುಮಾರ್ ಅಧ್ಯಕ್ಷತೆ ವಹಿಸಿ ದ್ದರು. ನಿವೃತ್ತ ರಾಜ್ಯ ಮಾಹಿತಿ ಆಯುಕ್ತ ಎಲ್.ಕೃಷ್ಣ ಮೂರ್ತಿ, ವಿಧಾನ ಪರಿಷತ್ ಸದಸ್ಯ ಆರ್.ಧರ್ಮ ಸೇನಾ, ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಮಜಾಫರ್ ಅಸ್ಸಾದಿ ಇನ್ನಿತರರು ಉಪಸ್ಥಿತರಿದ್ದರು.