ಕುವೆಂಪುನಗರ ಪೊಲೀಸರಿಂದ ಕೊರೊನಾ ಜಾಗೃತಿ ಅಭಿಯಾನ

ಮೈಸೂರು,ಏ.19-ಮೈಸೂರು ಕುವೆಂಪು ನಗರ ಪೊಲೀಸ್ ಠಾಣೆಯ ಸಿಬ್ಬಂದಿ, ಪ್ರತಿನಿತ್ಯ ವಿವೇಕಾನಂದನಗರ ವೃತ್ತದಲ್ಲಿ ಕೊರೊನಾ ವೈರಾಣುವಿನ ಪರಿಣಾಮ ಕುರಿತು ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ. ಧ್ವನಿವರ್ಧಕದ ಮೂಲಕ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ, ಮಧ್ಯಾಹ್ನ 12 ಗಂಟೆಯಿಂದ ಮರುದಿನ ಬೆಳಿಗ್ಗೆ 6 ಗಂಟೆಯವರೆಗೆ ದ್ವಿಚಕ್ರ ವಾಹನ ದಲ್ಲಿ ಒಬ್ಬರು ಮಾತ್ರ ಓಡಾಡಿ, ಕಡ್ಡಾಯ ವಾಗಿ ಹೆಲ್ಮೆಟ್ ಧರಿಸಿ, ದೂರ ಹೋಗದೇ ಮನೆಯ ಸುತ್ತಮುತ್ತ ವಾಕಿಂಗ್ ಮಾಡಿ, ಹಾಲಿನ ಬೂತ್, ಪೆಟ್ರೋಲ್ ಬಂಕ್, ಹಣ್ಣು, ತರಕಾರಿ ಮಾರುಕಟ್ಟೆ, ದಿನಸಿ ಅಂಗಡಿ, ಔಷಧಿ ಅಂಗಡಿ, ಹೂವಿನ ಅಂಗಡಿ, ಮಾಂಸದ ಅಂಗಡಿಗಳಲ್ಲಿ ಗುಂಪು ಸೇರದೇ ಒಬ್ಬರಿಗೊಬ್ಬರು ಸಾಮಾಜಿಕ ಅಂತರ ವನ್ನು ಕಾಯ್ದುಕೊಳ್ಳಿ. ಹೀಗೆ ಸಾರ್ವಜನಿಕ ರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಈ ಜಾಗೃತಿ ಅಭಿಯಾನದಲ್ಲಿ ಕುವೆಂಪು ನಗರ ಪೊಲೀಸ್ ಠಾಣೆಯ ಎಎಸ್‍ಐ ಹೀರಾಸಿಂಗ್, ಪ್ರೊಬೇಷನರಿ ಪಿಎಸ್‍ಐ ಮಹಾವೀರ್ ಹಾಗೂ ಕಾರಿನ ಪ್ರಾಯೋ ಜಕತ್ವ ವಹಿಸಿರುವ ರಾಜರತ್ನಂ ಇನ್ನಿ ತರರು ಉಪಸ್ಥಿತರಿದ್ದರು.