ಕೃಷ್ಣರಾಜ ಕ್ಷೇತ್ರದಲ್ಲಿ `ಕೊರೊನಾ’ ಬಗ್ಗೆ ಜನಜಾಗೃತಿ

ಮೈಸೂರು, ಮಾ.20(ಆರ್‍ಕೆಬಿ)- ಕೊರೊನಾ ಸೋಂಕು ಹರಡುವುದನ್ನು ಪ್ರಾಣಾಯಾಮ ಮತ್ತು ಅಗ್ನಿಹೋತ್ರ ದಿಂದ ತಡೆಗಟ್ಟಬಹುದು ಎಂಬ ಮಾಹಿ ತಿಯ ಕಿರುಪುಸ್ತಕಗಳನ್ನು ಶುಕ್ರವಾರ ಕೃಷ್ಣ ರಾಜ ಕ್ಷೇತ್ರದಲ್ಲಿ ಮನೆ ಮನೆಗೆ ಹಂಚುವ ಮೂಲಕ ಶಾಸಕ ಎಸ್.ಎ.ರಾಮದಾಸ್ ಜನಜಾಗೃತಿ ಮೂಡಿಸಿದರು.

ಮೈಸೂರು ನಗರಪಾಲಿಕೆಯ 49ನೇ ವಾಡ್‍ನ ಹೊಸಕೇರಿ 5ನೇ ಕ್ರಾಸ್, ವಾತ್ಸಲ್ಯ ಆಸ್ಪತ್ರೆ ಬಳಿ ಹಲವು ಮನೆಗಳಿಗೆ ತೆರಳಿ ಪುಸ್ತಕ ಹಂಚಿದ ಶಾಸಕರು, ಪುಸ್ತಕದಲ್ಲಿ ಪ್ರಾಣಾಯಾಮದ ಬಗ್ಗೆ ಮಾಹಿತಿ ಇದ್ದು, ಕಲಿಯಲು ಆಸಕ್ತರಿದ್ದರೆ ಇಲ್ಲಿಗೇ ಬಂದು ತರಬೇತಿ ನೀಡಲಾಗುವುದು ಎಂದರು.

ಕೊರೊನಾ ಬಗ್ಗೆ ಭಯ ಬೇಡ, ಮುಂಜಾಗ್ರತಾ ಕ್ರಮ ಅಗತ್ಯ. ಕೈಗಳನ್ನು ಆಗ್ಗಾಗ್ಗೆ ತೊಳೆದು ಶುಚಿಯಾಗಿಟ್ಟುಕೊಳ್ಳಿ, ಯಾರಿಗೂ ಕೈ ಕುಲುಕದೆ ಕೈಜೋಡಿಸಿ ನಮಸ್ಕರಿಸಿ. ರೋಗನಿರೋಧಕ ಶಕ್ತಿ ಹೆಚ್ಚಿ ಸುವ ಅರಿಶಿಣ, ಮೆಣಸು, ಶುಂಠಿ, ಬೆಳ್ಳುಳ್ಳಿ ಪದಾರ್ಥಗಳನ್ನು ಹೆಚ್ಚು ಬಳಸಿ. ಕೆಮ್ಮು, ಸೀನು ಇರುವವರು ಮಾಸ್ಕ್ ಅಥವಾ ಕರ ವಸ್ತ್ರ ಬಳಸಿ. ಮುಂಬಾಗಿಲ ಬಳಿ ಸೋಪು ಮತ್ತು ನೀರು ಇಟ್ಟು ಮನೆ ಪ್ರವೇಶಿಸುವವ ರೆಲ್ಲರೂ ಕಡ್ಡಾಯವಾಗಿ ಕೈ ಕಾಲು ತೊಳೆದು ಕೊಳ್ಳುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು. ಡಾ.ಕಾರ್ತಿಕ್ ಉಡುಪ, ಪಾಲಿಕೆ ಸದಸ್ಯೆ ಸೌಮ್ಯ, ಮಾಜಿ ಸದಸ್ಯೆ ವಿದ್ಯಾ ಅರಸ್, ಬಿಜೆಪಿ ಕೆ.ಆರ್.ಕ್ಷೇತ್ರ ಅಧ್ಯಕ್ಷ ಎಂ.ವಡಿ ವೇಲು, ಉಪಾಧ್ಯಕ್ಷ ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಜೆ.ನಾಗೇಂದ್ರ ಕುಮಾರ್, ಉಮೇಶ್, ಜೆ.ರವಿ, ಮುಖಂಡ ರಾದ ಪಾಪಚ್ಚಿ ನಾಗರಾಜ್, ಲೋಕೇಶ್, ಅರುಣ್ ಕುಮಾರ್, ಅಭಿ, ಕುಮಾರ್, ಸ್ವಾಮಿ, ಅನ್ನಪೂರ್ಣ ಮತ್ತಿತರಿದ್ದರು.