ಕೊಳ್ಳೇಗಾಲದಲ್ಲೂ ಕೊರೊನಾ ಕಫ್ರ್ಯೂ ಯಶಸ್ವಿ

ಕೊಳ್ಳೇಗಾಲ, ಏ.24(ನಾಗೇಂದ್ರ)- ತಾಲೂಕಿನ ಕೊಳ್ಳೇಗಾಲದಲ್ಲಿ ಶನಿವಾರದ ವಾರಾಂತ್ಯದ ಕಫ್ರ್ಯೂ ಬಹುತೇಕ ಯಶಸ್ವಿಯಾಗಿದ್ದು, ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಕಫ್ರ್ಯೂಗೆ ಬಹುತೇಕ ನಾಗರಿಕರಿಂದ ಬೆಂಬಲ ವ್ಯಕ್ತವಾಗಿದೆ.

ಶನಿವಾರ ಹಾಗೂ ಭಾನುವಾರ ದಿನಸಿ, ತರಕಾರಿ, ಹಾಲಿನ ಅಂಗಡಿ, ಮಾಂಸದ ಅಂಗಡಿ, ಮೆಡಿಕಲ್ ಶಾಪ್‍ಗಳಿಗೆ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ತೆರೆದಿರುವ ಅವಕಾಶವಿದ್ದು, ಜನರಿಗೆ ಖರೀದಿಗೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆ ಕೊಳ್ಳೇಗಾಲ ದಲ್ಲಿ ಶನಿವಾರ ಬೆಳಗ್ಗೆ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಪ್ರಸಂಗ ಕಂಡು ಬಂತು. ಅಗತ್ಯ ವಸ್ತುಗಳ ಖರೀದಿಗೆ ನಿಗದಿಪಡಿಸಲಾಗಿದ್ದ ಸಮಯ ಮುಗಿಯುತ್ತಿ ದ್ದಂತೆ ರಸ್ತೆಗಿಳಿದ ಪೆÇಲೀಸರು ತೆರೆದಿದ್ದ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿಸಿದರು. ಅನಗತ್ಯವಾಗಿ ಓಡಾಡುತ್ತಿದ್ದ ಜನರನ್ನು ಪೆÇಲೀಸರು ಗದರಿಸಿ ತಮ್ಮ ಮನೆಗಳಿಗೆ ಕಳುಹಿಸುತ್ತಿದ್ದರು.

ಕೊಳ್ಳೇಗಾಲನಗರ ಹಾಗೂ ತಾಲೂಕಿನ ಹಲವೆಡೆ ಪೆÇಲೀಸರು ಗಸ್ತು ತಿರುಗುವ ಮೂಲಕ ಗಮನ ಸೆಳೆದು ನಾಗರಿಕರಲ್ಲಿ ಅರಿವು ಮೂಡಿಸಿದರು. ಕೆಎಸ್‍ಆರ್‍ಟಿಸಿ ಬಸ್‍ಗಳು ರಸ್ತೆಗಳಿದ್ದಿದ್ದರೂ ಬೆರಳಣಿಕೆಯಷ್ಟೇ ಪ್ರಯಾಣಿಕರ ಸಂಖ್ಯೆ ಕಂಡು ಬಂದಿತು. ಶನಿವಾರ ಸಾರಿಗೆ ಸಿಬ್ಬಂದಿಗಳು ಪ್ರಯಾಣಿಕರಿಗಾಗಿ ಕಾದು ನಿಂತಿದ್ದ ಪ್ರಸಂಗ ಕಂಡು ಬಂತು.
ತಾಲೂಕು ಕೇಂದ್ರ ಸ್ಥಾನವಾದ ಕೊಳ್ಳೇಗಾಲ ಪಟ್ಟಣದಲ್ಲಿ ಮೆಡಿಕಲ್ ಶಾಪ್, ಆಸ್ಪತ್ರೆಗಳು, ಸೇರಿದಂತೆ ಇನ್ನಿತರೆ ಅಗತ್ಯ ಸೇವೆಗಳು ಸಾರ್ವಜನಿಕರಿಗೆ ಲಭ್ಯವಿತ್ತು, ಉಳಿದಂತೆ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಸಾರ್ವಜನಿಕರು ಸಹ ಉತ್ತಮ ರೀತಿಯಲ್ಲಿ ಕಫ್ರ್ಯೂಗೆ ಬೆಂಬಲ ಸೂಚಿಸಿದರು.