ಕೊರೊನಾ ಎಫೆಕ್ಟ್: ವಿದ್ಯಾರ್ಥಿಗಳ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಪ್ರವೇಶ ಪತ್ರ ಪೋಷಕರಿಗೆ ವಿತರಣೆ

ಮೈಸೂರು, ಜೂ. 19(ಆರ್‍ಕೆ)- ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪರವಾಗಿ ಪೋಷಕರಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಪ್ರವೇಶ ಪತ್ರ ವಿತರಣೆ ಪ್ರಕ್ರಿಯೆ ಇಂದಿ ನಿಂದ ಆರಂಭವಾಗಿದೆ.

ಜೂನ್ 25ರಿಂದ ಜುಲೈ 4ರವರೆಗೆ ನಡೆಯ ಲಿರುವ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯ ಪ್ರವೇಶ ಪತ್ರ ಪಡೆಯಲು ಮಕ್ಕಳ ಶಾಲೆಗೆ ಬರು ವುದನ್ನು ತಪ್ಪಿಸಲು ಪೋಷಕರನ್ನು ಕರೆಸಿ ಸಾಮಾ ಜಿಕ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳ ಪರವಾಗಿ ತಂದೆ, ತಾಯಿ ಅಥವಾ ಸಂಬಂ ಧಿಕರಿಗೆ ಪ್ರವೇಶ ಪತ್ರ ವಿತರಿಸುವಂತೆ ಸಾರ್ವ ಜನಿಕ ಶಿಕ್ಷಣ ಇಲಾಖೆಯಿಂದ ಎಲ್ಲಾ ಶಾಲೆಗಳಿಗೆ ನಿರ್ದೇಶನ ಬಂದಿದೆ. ಅದರಂತೆ ಇಂದಿನಿಂದ ಮೊಬೈಲ್‍ಗೆ ಕರೆ ಮಾಡಿ ಪೋಷಕರನ್ನು ಕರೆಸಿ ಕೊಂಡು ಶಾಲೆಗಳಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಪ್ರವೇಶ ಪತ್ರವನ್ನು ವಿತರಿಸಲಾಗುತ್ತಿದೆ. ಇಂದು ಬೆಳಿಗ್ಗೆ ಮೈಸೂರಿನ ಕೆಆರ್‍ಎಸ್ ರಸ್ತೆಯ ಐಡಿ ಯಲ್ ಜಾವ ರೋಟರಿ ಶಾಲೆಯಲ್ಲಿ ಪ್ರಾಂಶು ಪಾಲರಾದ ಎಸ್.ಎ.ವೀಣಾ ಅವರು ಪೋಷಕ ರಿಗೆ ಪ್ರವೇಶ ಪತ್ರಗಳನ್ನು ವಿತರಿಸಿದರು.

ಬೆಳಿಗ್ಗೆ 10ರಿಂದ ಸಂಜೆ 4.30 ಗಂಟೆವರೆಗೆ ಹಂತ-ಹಂತವಾಗಿ ಸಮಯದ ಅಂತರ ನೀಡಿ ಪೋಷಕರನ್ನು ಕರೆಸಿಕೊಂಡು ವಿಶೇಷ ಕೌಂಟರ್ ಮೂಲಕ ಪ್ರವೇಶ ಪತ್ರಗಳನ್ನು ವಿತರಿಸಲಾಯಿತು. ಐಡಿಯಲ್ ಜಾವಾ ರೋಟರಿ ಶಾಲೆಯಲ್ಲಿ ಇಬ್ಬರು ಪುನರಾವರ್ತಿತ ಸೇರಿದಂತೆ ಒಟ್ಟು 105 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆ ಯುತ್ತಿದ್ದು, ಇಂದು ಒಂದೇ ದಿನ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಪೋಷಕರಿಗೆ ಪ್ರವೇಶ ಪತ್ರಗಳನ್ನು ವಿತರಿಸಲಾಯಿತು ಎಂದು ವೀಣಾ ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಕೌಂಟರ್ ಬಳಿ ಸ್ಯಾನಿಟೈಸರ್ ನೀಡಲಾಯಿ ತಲ್ಲದೆ, ದೂರ ದೂರಕ್ಕೆ ಚೇರ್ ಹಾಕಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೋನಾ ವೈರಸ್ ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳ ಲಾಯಿತು. ಈ ವೇಳೆ ಐಡಿಯಲ್ ಜಾವಾ ರೋಟರಿ ಶಾಲೆ ಗೌರವ ಕಾರ್ಯದರ್ಶಿ ಎನ್‍ಸಿಎಸ್ ಮನೋ ಹರ ಉಪಸ್ಥಿತರಿದ್ದರು. ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಎಲ್ಲಾ ಶಾಲೆಗಳಲ್ಲಿಯೂ ಪೋಷಕ ರನ್ನು ಕರೆಸಿಕೊಂಡು ಪ್ರವೇಶ ಪತ್ರಗಳನ್ನು ನೀಡ ಲಾಗುತ್ತಿವೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಎಲ್ಲಾ ಕೇಂದ್ರ ಗಳಲ್ಲಿ ಸಕಲ ಸಿದ್ಧತೆ ನಡೆಸಿದ್ದು, ಸ್ಯಾನಿಟೈಸೇಷನ್ ಮಾಡಿ ಕೊರೋನಾ ವೈರಸ್ ಸೋಂಕು ಹರಡ ದಂತೆ ಮುನ್ನೆಚ್ಚರಿಕಾ ಕ್ರಮ ಜರುಗಿಸಲಾಗಿದೆ.