ಮೈಸೂರು, ಮೇ 30(ಪಿಎಂ)- ಕೊರೊನಾ ಸೋಂಕು ಪ್ರಕ ರಣದಲ್ಲೀಗ ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್‍ಗೆ ಹೆಚ್ಚಿನ ಅವಕಾಶ ನೀಡ ಲಾಗುತ್ತಿದೆ. ಲಾಕ್‍ಡೌನ್ ನಿರ್ಬಂಧಗಳನ್ನು ಸಡಿಲ ಗೊಳಿಸಿರುವುದರಿಂದ ಕೊರೊನಾ ಸೋಂಕು ತಡೆಯುವಲ್ಲಿ ಈಗ ಜನತೆ ಮತ್ತು ಸಮಾ ಜದ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ ಎಂದು ಡಿಸಿ ಅಭಿರಾಂ ಜಿ.ಶಂಕರ್ ಹೇಳಿದರು.
ಮೈಸೂರಿನ ಪುರಭವನ ಆವರಣದಲ್ಲಿ ಪಾಲಿಕೆ ಪೌರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದ ಬಳಿಕ ಜಿಲ್ಲಾಧಿಕಾರಿ ಗಳು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಒಂದು ವಾರ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದು ಕೊರೊನಾ ನೆಗೆಟಿವ್ ಬಂದಲ್ಲಿ ಅಂಥವರು ಹೋಂ ಕ್ವಾರಂಟೈನ್‍ನಲ್ಲಿ ಇರಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಹೋಂ ಕ್ವಾರಂ ಟೈನ್‍ಗೊಳಗಾದವರ ಸಂಖ್ಯೆ ಹೆಚ್ಚುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಮಂದಿ ಹೋಂಕ್ವಾರಂಟೈನಲ್ಲಿದ್ದಾರೆ. ಈ ಹಿನ್ನೆಲೆ ಜನತೆ ತಮ್ಮ ಪಕ್ಕದ ಮನೆ ಹಾಗೂ ಬಡಾ ವಣೆಗಳಲ್ಲಿ ಕ್ವಾರಂಟೈನಲ್ಲಿ ಇರು ವವರ ಬಗ್ಗೆ ಹೆಚ್ಚು ನಿಗಾ ಇಡಬೇಕಾಗುತ್ತದೆ. ಕ್ವಾರಂ ಟೈನ್‍ಗೆ ಒಳಗಾದವರು ಮನೆಯಿಂದ ಹೊರಗೆ ಓಡಾ ಡುತ್ತಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ನೆರೆ ಹೊರೆಯವರು ತಿಳಿದುಕೊಳ್ಳಬೇಕಾದ ಅಗತ್ಯ ವಿದೆ. ಜತೆಗೆ ನಿರ್ಬಂಧ ಸಡಿಲಿಕೆಯಿಂದಾಗಿ ವಾಹನ ಸಂಚಾರಕ್ಕೂ ಅವಕಾಶವಾದ ಕಾರಣ ಮುಂಜಾಗರೂಕ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಗಮನ ಸೆಳೆದಿದ್ದಾರೆ.