ಕೊರೊನಾ ವಾರಿಯರ್ಸ್‍ಗೆ ಕಚೇರಿಯಲ್ಲೇ ಸಂಘ-ಸಂಸ್ಥೆಗಳಿಂದ ಸನ್ಮಾನ

ಮೈಸೂರು, ಜೂ.14(ಎಂಟಿವೈ)- ಮೈಸೂರಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಘಟಿತವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ನಗರದ ಹಲವು ಸಂಸ್ಥೆಗಳು ಸನ್ಮಾನಿಸಿದವು.

ಮೈಸೂರಿನ ಸಾಯಿ ಫೌಂಡೇಷನ್, ಕೀರ್ತಿ ಮಹಿಳಾ ಅಭಿವೃದ್ಧಿ ಸಂಸ್ಥೆ, ವಿಶ್ವಮಾತಾ ಸೇವಾ ಸಂಸ್ಥೆ ಹಾಗೂ ರೋಶಿಣಿ ಫೌಂಡೇಷನ್ ಪದಾಧಿಕಾರಿಗಳು ಕೊರೊನಾ ವಾರಿಯರ್ಸ್ ತಂಡದ ಅಧಿಕಾರಿಗಳಿದ್ದ ಕಚೇರಿಗೇ ತೆರಳಿ ಆತ್ಮೀಯವಾಗಿ ಸನ್ಮಾನಿಸಿದರು. ನಗರದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ಸನ್ಮಾನಿತರು: ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಜಿಪಂ ಸಿಇಓ ಪ್ರಶಾಂತ್ ಕುಮಾರ್ ಮಿಶ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ಎಎಸ್‍ಪಿ ಪಿ.ವಿ.ಸ್ನೇಹ, ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ಎ.ಸಿ.ತಮ್ಮಣ್ಣ, ಕಾರ್ಮಿಕಾ ಧಿಕಾರಿ ಮಂಜುಳಾದೇವಿ, ತಹಶೀಲ್ದಾರ್ ರಕ್ಷಿತ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್ ಅವರನ್ನು ಸನ್ಮಾನಿಸ ಲಾಯಿತು. ಸೋಂಕು ಹರಡುವುದು ತಡೆಯುವುದಕ್ಕೆ ಜನತೆ ಅಂತರ ಕಾಯ್ದುಕೊಳ್ಳಬೇಕಾದ ಕಾರಣ ಎಲ್ಲಾ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಸೇರಲು ನಿರಾಕರಿಸಿ ದರು. ಹಾಗಾಗಿ ಕೊರೊನಾ ವಾರಿಯರ್ಸ್ ತಂಡದ ಅಧಿ ಕಾರಿಗಳಿದ್ದ ಕಚೇರಿಗಳಿಗೇ ಕೀರ್ತಿ ಮಹಿಳಾ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಮಂಜುಳಾ ರಮೇಶ್, ವಿಶ್ವಮಾತಾ ಸೇವಾ ಸಂಸ್ಥೆ ವಿ.ಎ.ಮಂಜುಳಾ, ಸಾಯಿ ಫೌಂಡೇಷನ್ ಮುಖ್ಯಸ್ಥ ಸಾಯಿ ಕಿರಣ್ ರೆಡ್ಡಿ, ರೋಶಿಣಿ ಫೌಂಡೇಷನ್ ಮುಖ್ಯಸ್ಥೆ ಸಾಜಿದಾ ಎಂ.ಖಾನ್ ಮತ್ತಿತರರು ತೆರಳಿ ಗೌರವಿಸಿದರು.