ಮೈಸೂರು,ಮಾ.16(ಎಂಟಿವೈ)- ಕೊರೊನಾ ವೈರಸ್ ಎಫೆಕ್ಟ್ ನ್ಯಾಯಾ ಲಯದ ಕಲಾಪಗಳ ಮೇಲೂ ಉಂಟಾ ಗಿದ್ದು, ಮೈಸೂರು ನ್ಯಾಯಾಲಯದಲ್ಲೂ ತುರ್ತು ಪ್ರಕರಣಗಳ ವಿಚಾರಣೆಗಷ್ಟೇ ಮನ್ನಣೆ ನೀಡಿ, ಉಳಿದ ಎಲ್ಲಾ ವಿಚಾರಣೆಗಳನ್ನು ಅನಿರ್ದಿಷ್ಟಾ ವಧಿಗೆ ಮುಂದೂಡಲಾಗಿದೆ.
ನ್ಯಾಯಾಲಯಗಳಲ್ಲಿ ನ್ಯಾಯಾಧೀ ಶರು, ವಕೀಲರು, ವಿವಿಧ ಪ್ರಕರಣಗಳ ವಿಚಾ ರಣೆಗಾಗಿ ಬರುವ ಆಪಾದಿತರು, ಕಕ್ಷಿದಾ ರರು, ಪೊಲೀಸರು ಹಾಗೂ ಸಾರ್ವಜನಿ ಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದ ರಿಂದ ಕೊರೊನಾ ವೈರಸ್ ಹಬ್ಬುವ ಆತಂಕ ಇರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ಆದೇ ಶದ ಮೇರೆಗೆ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಅವರು ಭಾನುವಾರ ಹೈ ಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯ ಗಳಿಗೆ ಅನ್ವಯವಾಗುವಂತೆ ಪ್ರತ್ಯೇಕ ಎರಡು ಅಧಿಸೂಚನೆ ಹೊರಡಿಸಿರುವ ಹಿನ್ನೆಲೆ ಯಲ್ಲಿ ಇಂದಿನಿಂದ ಮೈಸೂರು ನ್ಯಾಯಾ ಲಯದಲ್ಲಿ ತುರ್ತು ಪ್ರಕರಣಗಳ ವಿಚಾರಣೆ ಯಷ್ಟೇ ನಡೆದಿದ್ದು, ಇನ್ನಿತರ ಪ್ರಕರಣಗಳ ವಿಚಾರಣೆಯನ್ನು ಮುಂದಿನ ಆದೇಶದ ವರೆಗೂ ಮುಂದೂಡಲಾಗಿದೆ.
ಮೈಸೂರು ನಗರದಲ್ಲಿ 34 ಬೆಂಚ್ ಹಾಗೂ ತಾಲೂಕು ಕೇಂದ್ರಗಳಲ್ಲಿ 16 ಬೆಂಚ್ ಸೇರಿದಂತೆ ಒಟ್ಟು 50 ಬೆಂಚ್‍ಗಳಲ್ಲೂ ಇಂದಿನಿಂದ ತುರ್ತು ಪ್ರಕರಣಗಳ ವಿಚಾರಣೆಯಷ್ಟೇ ನಡೆಯುತ್ತದೆ. ರಿಜಿ ಸ್ಟ್ರಾರ್ ಜನರಲ್ ಹೊರಡಿಸಿರುವ ಆದೇಶ ದಂತೆ ತುರ್ತು ಪ್ರಕರಣಗಳಲ್ಲಿ ಅಗತ್ಯವಿ ದ್ದರೆ (ಕಡ್ಡಾಯವಿದ್ದರೆ) ಮಾತ್ರ ವಿಚಾರ ಣೆಗೆ ಹಾಜರಾಗಲು ಸೂಚಿಸಬೇಕು. ಇಲ್ಲದಿ ದ್ದರೆ ಕಕ್ಷಿದಾರರ ಹಾಜರಾತಿಗೆ ವಿನಾಯಿತಿ ನೀಡುವಂತೆ ಸೂಚಿಸಲಾಗಿದೆ. ಈ ಆದೇಶ ವನ್ನು ಮೈಸೂರಲ್ಲೂ ಪಾಲಿಸಲಾಗುತ್ತಿದ್ದು, ಜಿಲ್ಲಾ ವಕೀಲರ ಸಂಘವೂ ಸಹಕಾರ ನೀಡುತ್ತಿದೆ. ಮೊದಲ ದಿನವಾದ ಇಂದು ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಕ್ಷಿದಾರರು, ಸಾರ್ವ ಜನಿಕರು ನ್ಯಾಯಾಲಯಕ್ಕೆ ಹಾಜರಾಗಿ ದ್ದರು. ನಂತರ ವಿಷಯ ತಿಳಿದು ಕಕ್ಷಿದಾ ರರನ್ನು ವಾಪಸ್ಸು ಕಳಿಸಲಾಯಿತು.
ಸೂಚನಾ ಫಲಕದಲ್ಲಿ: ತುರ್ತು ವಿಚಾ ರಣೆಯನ್ನಷ್ಟೇ ನಡೆಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಆದೇಶದ ಮೇರೆಗೆ ರಿಜಿಸ್ಟ್ರಾರ್ ಜನ ರಲ್ ರಾಜೇಂದ್ರ ಬಾದಾಮಿಕರ್ ಅವರ ಅಧಿಸೂಚನೆ ಮೇರೆಗೆ ಮೈಸೂರು ಜಿಲ್ಲಾ ವಕೀಲರ ಸಂಘವೂ ತುರ್ತು ವಿಚಾರಣೆ ಗಷ್ಟೇ ಆದÀ್ಯತೆ ನೀಡುವಂತೆ ವಕೀಲರಲ್ಲಿ ಮನವಿ ಮಾಡಿದೆ. ಸಂಘದ ಹೊರಾಂ ಗಣದಲ್ಲಿರುವ ಸೂಚನಾ ಫಲಕದಲ್ಲಿ “ಘನ ಉಚ್ಛ ನ್ಯಾಯಾಲಯದಿಂದ ನೀಡಿರುವ ನಿರ್ದೇಶನದ ಅನ್ವಯ ತಮ್ಮ ಕಕ್ಷಿದಾರರು ಮುಂದಿನ ಆದೇಶದವರೆಗೆ ಯಾರೂ ಕೋರ್ಟ್‍ಗೆ ಬರದಂತೆ ವಕೀಲರು ತಿಳುವಳಿಕೆ ನೀಡಬೇಕಾಗಿ ವಿನಂತಿ’’ ಎಂದು ವಕೀಲರ ಸಂಘ ಮನವಿ ಮಾಡಿದೆ.