ನ್ಯಾಯದಾನ ಮಾಡಬೇಕಾದ ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ…

ಮೈಸೂರು, ಏ.11(ಎಂಟಿವೈ)- ನೊಂದ ವರಿಗೆ ನ್ಯಾಯದಾನ ಮಾಡಬೇಕಾದ ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಕಂಡು ಬರುತ್ತಿರುವುದು ಸಮಾಜಕ್ಕೆ ಮಾರಕ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಎನ್. ಸಂತೋಷ್ ಹೆಗ್ಡೆ ವಿಷಾದಿಸಿದ್ದಾರೆ.

ಮೈಸೂರಿನ ಹೊರವಲಯದ ಮಹಾ ರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ ಮಧ್ಯಾಹ್ನ ಆಯೋಜಿಸಿದ್ದ ವಿಜ್ಞಾನ-ತಂತ್ರಜ್ಞಾನ ಕನ್ನಡೋತ್ಸವದ ಸಮಾ ರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಂವಿಧಾನದ ಆಧಾರಸ್ತಂಭ ಗಳಾದ ಕಾರ್ಯಾಂಗ, ಶಾಸಕಾಂಗದಂತೆ ನ್ಯಾಯಾಂಗದಲ್ಲೂ ಭ್ರಷ್ಟಾಚಾರ ತಾಂಡವ ವಾಡುತ್ತಿದೆ. ಈ ಮೂರು ವ್ಯವಸ್ಥೆಯಲ್ಲಿ ರುವ ಸಿಬ್ಬಂದಿಗಳಾರು ಸ್ವರ್ಗಲೋಕದಿಂದ ಬಂದಿರುವವರಲ್ಲ. ಅವರು ಎಲ್ಲರಂತೆ ನಮ್ಮ ಸಮುದಾಯದಲ್ಲಿರುವವರೇ ಆಗಿದ್ದಾರೆ. ಹಾಗಾಗಿ, ಅಲ್ಲಿಯೂ ಲಂಚಾವತಾರ ನುಸುಳಿದೆ. ಪ್ರತಿಯೊಬ್ಬರಲ್ಲೂ ದುರಾಸೆ ಎಂಬ ರೋಗ ಹೆಚ್ಚಾಗುತ್ತಿದೆ. ಇದಕ್ಕೆ ಮದ್ದು, ಮಿತಿಯೂ ಇಲ್ಲದಂತಾಗಿದೆ. ಯಾವುದೇ ಕಾನೂನಿನ ಹಿಡಿತಕ್ಕೂ ಸಿಗುತ್ತಿಲ್ಲ. ಭ್ರಷ್ಟಾ ಚಾರಕ್ಕೆ ಚೀನಾದಲ್ಲಿ ಗಲ್ಲು ಶಿಕ್ಷೆ ವಿಧಿಸಿದರೆ, ಭಾರತದಲ್ಲಿ 7 ವರ್ಷ ಜೈಲು ಶಿಕ್ಷೆ ಇದೆ. ಇದರಿಂದ ನಮ್ಮಲ್ಲಿ ಭ್ರಷ್ಟರಿಗೆ ಕಾನೂನು, ಶಿಕ್ಷೆಯ ಭಯವಿಲ್ಲದಂತಾಗಿದೆ. ಈ ಕಾರಣ ದಿಂದ ಭ್ರಷ್ಟಾಚಾರ ಸರ್ವವ್ಯಾಪಿಯಾ ಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸ್ವಯಂ ತೃಪ್ತಿ ಇದ್ದಾಗ ಮಾತ್ರ ಭ್ರಷ್ಟಾ ಚಾರ, ಲಂಚಗುಳಿತನಕ್ಕೆ ಕಡಿವಾಣ ಹಾಕ ಬಹುದು. ಭ್ರಷ್ಟ ವ್ಯವಸ್ಥೆ ಬದಲಾವಣೆ ಯುವ ಜನರಿಂದ ಮಾತ್ರ ಸಾಧ್ಯ. ಪ್ರತಿ ಯೊಬ್ಬರು ಬದಲಾವಣೆಗೆ ಕೈಜೋಡಿಸ ಬೇಕು. ಯುವ ಜನರು ದಾರಿ ತಪ್ಪಿದರೆ, ಭ್ರಷ್ಟಾಚಾರಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗ ಲಿದೆ. ಆಗ ಸಮಾಜದಲ್ಲಿ ಶಾಂತಿ-ನೆಮ್ಮದಿ ನಿರ್ಮಾಣ ಅಸಾಧ್ಯ ಎಂದರು.

ರಾಷ್ಟ್ರಪತಿಯಿಂದ ಹಿಡಿದು ಜವಾನ ನವರೆಗೆ, ಸುಪ್ರೀಂಕೋರ್ಟ್ ನ್ಯಾಯ ಮೂರ್ತಿಯಿಂದ ಹಿಡಿದು ಕೆಳಹಂತದ ನೌಕರರವರೆಗೂ ಎಲ್ಲರೂ ಜನರ ಸೇವ ಕರು. ಇವರ್ಯಾರು ಜನರ ಮಾಲೀಕರಲ್ಲ. ಆದರೀಗ ಸೇವೆ ಮಾಡುವವರು ಅಧಿಕಾರ ವನ್ನು ಚಲಾಯಿಸುತ್ತಿದ್ದಾರೆ, ಪ್ರದರ್ಶಿಸುತ್ತಿ ದ್ದಾರೆ. ಮಾನವೀಯತೆ ಬೆಳೆಸಿಕೊಳ್ಳದಿದ್ದರೆ ಕನ್ನಡಿಗರು ಆಗಲ್ಲ. ಇದೀಗ ನೀತಿ- ನೈತಿ ಕತೆ ಯಾರಿಗೂ ಬೇಡವಾಗಿದೆ. ಇದು ಸರಿ ಯಲ್ಲ. ಯುವ ಜನರು ಮಾನವೀಯತೆ, ನೈತಿಕ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಉಪಾಧ್ಯಕ್ಷ ಜಾಕೀರ್ ಹುಸೇನ್, ಮುಖಂಡ ಡಾ.ಕೆ.ರಘುರಾಮ್ ವಾಜ ಪೇಯಿ ಇನ್ನಿತರರು ಉಪಸ್ಥಿತರಿದ್ದರು.