ನಂಜರಾಜ ಬಹದ್ದೂರ್ ಛತ್ರದಲ್ಲಿ ಜನದಟ್ಟಣೆ; 2 ಹೊಸ ಕೇಂದ್ರಗಳಿಗೆ 120 ಮಂದಿ ಸ್ಥಳಾಂತರ

ಮೈಸೂರು,ಏ.7(ಎಂಟಿವೈ)- ಮೈಸೂ ರಿನ ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿನ ಪುನರ್ವಸತಿ ಕೇಂದ್ರ 235ಕ್ಕೂ ಹೆಚ್ಚು ಜನರು ಆಶ್ರಯ ಪಡೆ ದಿದ್ದ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಟಿ ಯಿಂದ ಮಂಗಳವಾರ 120 ಮಂದಿ ಯನ್ನು 2 ಹೊಸ ಪುನರ್ವಸತಿ ಕೇಂದ್ರ ಗಳಿಗೆ ಸ್ಥಳಾಂತರಿಸಲಾಯಿತು.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿ ದಂತೆ ವಿವಿಧೆಡೆ ನಿರಾಶ್ರಿತರಾಗಿದ್ದ 200ಕ್ಕೂ ಹೆಚ್ಚು ಮಂದಿಯನ್ನು ನಂಜರಾಜ ಬಹ ದ್ದೂರು ಕಲ್ಯಾಣ ಮಂಟಪದಲ್ಲಿ ಇರಿಸಿ ಊಟದ ವ್ಯವಸ್ಥೆಯನ್ನೂ ಮಾಡಲಾ ಗಿತ್ತು. ಹಾಗಿದ್ದೂ, ಕೆ.ಆರ್.ಆಸ್ಪತ್ರೆ ಸುತ್ತ ಮುತ್ತ, ವಿವಿಧ ಪಾರ್ಕ್, ಬಸ್ ತಂಗು ದಾಣ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಇನ್ನಷ್ಟು ಮಂದಿ ನಿರಾಶ್ರಿತರಾಗಿ ದಿನ ದೂಡುತ್ತಿದ್ದರು. ಇವರು ಪ್ರತಿದಿನ ಕೆ.ಆರ್. ಆಸ್ಪತ್ರೆ ಮುಂಭಾಗ ದಾನಿಗಳು ನೀಡುತ್ತಿದ್ದ ಆಹಾರ ಪದಾರ್ಥಗಳಿಗಾಗಿ ಕಾಯುವಂ ತಾಗಿತ್ತು. ಹೀಗೆ ಆಹಾರ ಪದಾರ್ಥಕ್ಕಾಗಿ ಒಟ್ಟಿಗೇ ಬರುವವರನ್ನು ಕಾಯುವುದೇ ಪೊಲೀಸರಿಗೆ ತಲೆ ನೋವಾಗಿತ್ತು. ಹಾಗಾಗಿ ಇಂದು ಬೆಳಿಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ವಿವಿಧೆಡೆಯಿಂದ 80ಕ್ಕೂ ಹೆಚ್ಚು ನಿರಾಶ್ರಿತರನ್ನು ನಂಜರಾಜ ಬಹದ್ದೂರ್ ಕಲ್ಯಾಣಮಂಟಪಕ್ಕೆ ಕರೆತಂದು ಬಿಟ್ಟಿದ್ದರು. ಛತ್ರ ದಲ್ಲಿ ನಿರಾಶ್ರಿತರ ಸಂಖ್ಯೆ ಒಮ್ಮೆಲೇ ಹೆಚ್ಚಿದ್ದರಿಂದ ಆರೋಗ್ಯ ಸಮಸ್ಯೆ ಉಲ್ಬಣಿಸ ಬಹುದೆಂದು ಆತಂಕಗೊಂಡ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಮತ್ತೆರಡು ಪುನರ್ವಸತಿ ಕೇಂದ್ರ ಸ್ಥಾಪಿಸಿ, ಕೆಲವರನ್ನು ಅಲ್ಲಿಗೆ ಸ್ಥಳಾಂತರಗೊಳಿಸಿದರು. ಸಾರಿಗೆ ಸಂಸ್ಥೆ ಬಸ್‍ನಲ್ಲಿ ಕರೆದೊಯ್ದು ಬಿಡಲಾಯಿತು.

ಹೆಬ್ಬಾಳ್ ವೃತ್ತ ಸಮೀಪದ ನಿತ್ಯೋ ತ್ಸವ ಭವನದಲ್ಲಿ 70, ಲಕ್ಷ್ಮೀಪುರಂನ ನೇರಂಬಳ್ಳಿ ಸಾವಿತ್ರಮ್ಮ ಸುಬ್ಬರಾವ್ ಕಲ್ಯಾಣ ಮಂಟಪದಲ್ಲಿ 50 ಮಂದಿಗೆ ಆಶ್ರಯ ನೀಡಲಾಯಿತು. ಇಲ್ಲಿಗೆ ಉಪಾ ಹಾರ, ಊಟದ ವ್ಯವಸ್ಥೆಯನ್ನು ಪಾಲಿಕೆ ಯಿಂದಲೇ ಕಲ್ಪಿಸಿರುವುದರಿಂದ ಇಲ್ಲಿರುವ ನಿರಾಶ್ರಿತರಲ್ಲಿ ಒಬ್ಬರನ್ನೂ ಹೊರ ಬರಲು ಬಿಡುವುದಿಲ್ಲ. ಎರಡೂ ಕೇಂದ್ರಕ್ಕೂ ಪೊಲೀಸರ ಭದ್ರತೆ ಒದಗಿಸಲಾಗಿದೆ. ಇದಕ್ಕೂ ಮುನ್ನ ಪಾಲಿಕೆ ಆಯುಕ್ತ ಗುರು ದತ್ತ ಹೆಗಡೆ, ಎಡಿಸಿ ಕೆ.ಎನ್.ಶಶಿಕುಮಾರ್ ನೇತೃತ್ವದ ತಂಡ ನಿತ್ಯೋತ್ಸವ ಭವನ ಹಾಗೂ ನೇರಂಬಳ್ಳಿ ಸಾವಿತ್ರಮ್ಮ ಸುಬ್ಬರಾವ್ ಕಲ್ಯಾಣ ಮಂಟಪವನ್ನು ಪರಿಶೀಲಿಸಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಂಡಿತು.