ಆನ್‍ಲೈನ್ ಗ್ಯಾಂಬ್ಲಿಂಗ್ ನಿಗ್ರಹಿಸಿ ಜಿಲ್ಲಾ ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ

ಮೈಸೂರು, ಫೆ.2(ಆರ್‍ಕೆ)-ಆನ್‍ಲೈನ್ ಗ್ಯಾಂಬ್ಲಿಂಗ್ ಅನ್ನು ಸಂಪೂರ್ಣವಾಗಿ ನಿಗ್ರಹಿಸಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸ್ ಅಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದ್ದಾರೆ.

ಮೈಸೂರಿನ ಎಸ್ಪಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಘಟಕದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ರಾಜ್ಯ ಸರ್ಕಾರ ಇತ್ತೀಚೆಗೆ ಆನ್‍ಲೈನ್ ಗ್ಯಾಂಬ್ಲಿಂಗ್ ನಿಷೇಧಿಸಲು ಕಾಯ್ದೆ ಜಾರಿಗೆ ತಂದಿದ್ದು, ಅದನ್ನು ಪರಿಣಾಮಕಾರಿ ಯಗಿ ಜಾರಿಗೊಳಿಸಬೇಕೆಂದು ತಾಕೀತು ಮಾಡಿದರು.
ಜೂಜು, ಇಸ್ಪೀಟ್ ದಂಧೆಯಂತೆ ಆನ್‍ಲೈನ್ ಗ್ಯಾಂಬ್ಲಿಂಗ್‍ನಿಂದ ಯುವಕರು ಮನೆ-ಮಠ ಕಳೆದು ಕೊಂಡು ಬೀದಿಗೆ ಬರುತ್ತಿದ್ದಾರೆ. ಅವರು ಮುಂದೆ ಅಪರಾಧ ಕೃತ್ಯಕ್ಕಿಳಿದು ಜೀವನವನ್ನೇ ನಾಶಪಡಿಸಿ ಕೊಳ್ಳುವುದನ್ನು ತಡೆಯಬೇಕು. ಪೊಲೀಸರು ಈ ಬಗ್ಗೆ ಹೆಚ್ಚು ಗಮನಹರಿಸಿ, ಈ ದಂಧೆಗೆ ಕಡಿವಾಣ ಹಾಕಬೇಕೆಂದು ಸಚಿವರು ತಾಕೀತು ಮಾಡಿದರು.

ಮಟ್ಕಾ, ಜೂಜು, ಬೆಟ್ಟಿಂಗ್‍ನಂತಹ ದುವ್ರ್ಯವ ಹಾರ, ಗೋವುಗಳ ಅಕ್ರಮ ಸಾಗಣೆಯಂತಹ ಪ್ರಕರಣ ಗಳು ಪೊಲೀಸರಿಗೆ ಸವಾಲಾಗಿವೆ. ಅಂತಹ ಕೃತ್ಯವನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಿ ಅದರಲ್ಲಿ ಭಾಗಿಗಳಾದವ ರನ್ನು ಬಗ್ಗು ಬಡಿಯಿರಿ ಎಂದು ನಿರ್ದೇಶನ ನೀಡಿದ ಅವರು, ಕೇರಳ ರಾಜ್ಯದ ಗಡಿಯ ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣೆ ಬಿಗಿಗೊಳಿಸಿ ಎಂದು ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡು ತ್ತಿರುವ ಬಗ್ಗೆ ದೂರುಗಳಿವೆ. ಕಾರ್ಯಾಚರಣೆ ತೀವ್ರಗೊಳಿಸಿ, ಅಂತಹ ಕೃತ್ಯಗಳೆಸಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ತೋರಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಅನಿವಾರ್ಯವಾಗಲಿದೆ ಎಂದು ಆರಗ ಜ್ಞಾನೇಂದ್ರ ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಅಪರಾಧ ಪ್ರಕರಣಗಳ ಪತ್ತೆ, ಹೆದ್ದಾರಿ ದರೋಡೆ, ಸುಲಿಗೆ, ಕಳ್ಳತನಗಳಂತಹ ಅಪರಾಧಗಳ ತಡೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಕಾನೂನು-ಸುವ್ಯವಸ್ಥೆಗೆ ಭಂಗ ಬಾರದಂತೆ ಎಚ್ಚರ ವಹಿಸಲಾಗಿದೆ ಎಂದು ಮೈಸೂರು ಜಿಲ್ಲೆಯ ಅಪರಾಧ ಪ್ರಕರಣಗಳ ಪ್ರಗತಿ ಕುರಿತು ಎಸ್ಪಿ ಆರ್.ಚೇತನ್ ಅವರು ಗೃಹ ಸಚಿವರಿಗೆ ವಿವರಿಸಿದರು. ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ ಪವಾರ್, ನಗರ ಪೊಲೀಸ್ ಕಮೀಷನರ್ ಡಾ. ಚಂದ್ರಗುಪ್ತ, ಅಡಿಷನಲ್ ಎಸ್ಪಿ ಆರ್.ಶಿವ ಕುಮಾರ್, ಇನ್ಸ್‍ಪೆಕ್ಟರ್ ಮೇಲ್ಪಟ್ಟ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.