ದಲಿತ ನೌಕರರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ

ಮೈಸೂರು:  ದಲಿತ ನೌಕರರ ಹಿತ ಕಾಪಾಡುವ ನಿಟ್ಟಿನಲ್ಲಿ ಮೈಸೂರಿನಲ್ಲಿ ರೀಡ್ ಅಂಡ್ ಟೇಲರ್ ದಲಿತ ನೌಕರರ ಕ್ಷೇಮಾಭಿವೃದ್ಧಿ ಸಂಘವನ್ನು ರಚಿಸಲಾಗಿದ್ದು, ದಲಿತರ ಅನಾರೋಗ್ಯ, ನಿವೃತ್ತಿ, ಅಪಘಾತ, ಸಾವು ಸಂಭವಿಸಿದಾಗ ಸಹಾಯ ಹಸ್ತ ಚಾಚುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ಸೇರಿದಂತೆ ಹಲವಾರು ಉದ್ದೇಶಗಳನ್ನು ಈ ಸಂಘವು ಹೊಂದಿದೆ ಎಂದು ಸಂಘದ ಗೌರವಾಧ್ಯಕ್ಷ ಗೋವಿಂದ ಸ್ವಾಮಿ ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವನ್ನು ನೋಂದಣಿಯಾಗಿದ್ದು, ಪದಾಧಿಕಾರಿಗಳಾಗಿ ಎಂ.ರವಿ (ಅಧ್ಯಕ್ಷ), ಜೇಸುದಾಸ್, ನಾಗೇಂದ್ರಮೂರ್ತಿ (ಉಪಾಧ್ಯಕ್ಷರು), ನಾಗೇಂದ್ರ (ಪ್ರಧಾನಕಾರ್ಯ ದರ್ಶಿ), ನಾಗರಾಜು (ಸಹ ಕಾರ್ಯದರ್ಶಿ) ಇತರರು ನೇಮಕಗೊಂಡಿದ್ದಾರೆ ಎಂದರು. ಗೋಷ್ಠಿಯಲ್ಲಿ ಅಧ್ಯಕ್ಷ ಎಂ.ರವಿ, ಕಾರ್ಯದರ್ಶಿ ನಾಗೇಂದ್ರ, ಸಿದ್ದಪ್ಪ, ಸುರೇಶ್ ಇದ್ದರು.