ಕಮಲದ ಹೂವು ಕೀಳಲು ಹೋದ ವ್ಯಕ್ತಿ ಸಾವು

ಗುಂಡ್ಲುಪೇಟೆ,:  ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಕಮಲದ ಹೂವುಗಳನ್ನು ಕೀಳಲು ಕೆರೆಗೆ ಇಳಿದಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ತಾಲೂಕಿನ ಮದ್ದೂರು ಕಾಲೋನಿ ಬಳಿ ಇರುವ ಕೆರೆಯಲ್ಲಿ ಬುಧವಾರ ನಡೆದಿದೆ.
ತಾಲೂಕಿನ ಹಸಗೂಲಿ ಗ್ರಾಮದ ನಾಗಶೆಟ್ಟಿ (36) ಎಂಬಾತನೇ ಸಾವಿಗೀ ಡಾದ ವ್ಯಕ್ತಿ. ಈತ ತಮ್ಮ ಮನೆಯಲ್ಲಿ ವರಮಹಾಲಕ್ಮ್ಷಿ ಪೂಜೆಯ ನಿಮಿತ್ತ ವಾಗಿ ಮದ್ದೂರು ಕಾಲೋನಿ ಬಳಿ ಇರುವ ಕೆರೆಯಲ್ಲಿ ಅರಳಿದ್ದ ಕಮಲದ ಹೂವು ಗಳನ್ನು ಕೀಳಲು ಹೋಗಿದ್ದಾಗ ಕೆಸರಿ ನಲ್ಲಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ.

ಈ ಬಗ್ಗೆ ಅಕ್ಕ ಪಕ್ಕದವರು ಪೆÇಲೀಸ್ ಹಾಗೂ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿ ದರು. ಕೂಡಲೇ ಸ್ಥಳಕ್ಕೆ ತೆರಳಿದ ಅಗ್ನಿ ಶಾಮಕ ಅಧಿಕಾರಿ ಚೆಲುವರಾಜು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಳೇಬರವನ್ನು ಹೊರತೆಗೆದರು.

ಸ್ಥಳಕ್ಕೆ ತಹಶೀಲ್ದಾರ್ ಚಂದ್ರ ಕುಮಾರ್, ತಾಪಂ ಇಒ ಡಾ.ಕೃಷ್ಣ ಮೂರ್ತಿ, ಸರ್ಕಲ್ ಇನ್ಸ್‍ಪೆಕ್ಟರ್ ಎಚ್.ಎನ್.ಬಾಲ ಕೃಷ್ಣ ತೆರಳಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಪಟ್ಟಣದ ಪೆÇಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.