ಸಾಲಬಾಧೆ: ಹಾಸನದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಮೈಸೂರಲ್ಲಿ ಇಂಜಿನಿಯರಿAಗ್ ವ್ಯಾಸಂಗ ಮಾಡುತ್ತಿದ್ದ ಪುತ್ರನೊಂದಿಗೆ ವಿಷ ಸೇವಿಸಿದ ದಂಪತಿ
ಹಾಸನ, ಫೆ.೨೪- ಸಾಲಬಾಧೆಯಿಂದ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಇಲ್ಲಿನ ಹೇಮಾವತಿ ನಗರದ ಪೋಸ್ಟ್ ಆಫೀಸ್ ರಸ್ತೆ ನಿವಾಸಿ ಹಾಗೂ ಪೆಟ್ರೋಲ್ ಬಂಕ್ ಮಾಲೀಕ ಸತ್ಯಪ್ರಸಾದ್(೫೪), ಅವರ ಪತ್ನಿ ಅನ್ನಪೂರ್ಣ(೫೦) ಹಾಗೂ ಪುತ್ರ ಗೌರವ್(೨೧) ಆತ್ಮಹತ್ಯೆ ಮಾಡಿಕೊಂಡವರು.ವಿವರ: ಸೀಮೆಎಣ್ಣೆ ವ್ಯಾಪಾರಿಯಾಗಿದ್ದ ಸತ್ಯಪ್ರಸಾದ್, ಕೆಲ ತಿಂಗಳ ಹಿಂದೆ ತಾಲೂ ಕಿನ ಬೇಲೂರು ರಸ್ತೆಯ ಇಬ್ಬಾಣೆ ಬಳಿ ಪೆಟ್ರೋಲ್ ಬಂಕ್‌ವೊAದನ್ನು ಗುತ್ತಿಗೆಗೆ ಪಡೆದಿದ್ದರು. ಅದಕ್ಕಾಗಿ ಖಾಸಗಿ ಹಣ ಕಾಸು ಸಂಸ್ಥೆಗಳು ಹಾಗೂ ಬ್ಯಾಂಕ್‌ನಿAದ ಕೋಟ್ಯಾಂತರ ರೂ. ಸಾಲ ಮಾಡಿದ್ದರು ಎನ್ನಲಾಗಿದೆ. ಆದರೆ, ಪೆಟ್ರೋಲ್ ಬಂಕ್ ನಿಂದ ನಿರೀಕ್ಷಿತ ಆದಾಯ ಬಾರದೆ ನಷ್ಟ ಅನುಭವಿಸಿ, ಇತ್ತೀಚೆಗೆ ಅದನ್ನು ಇನ್ನೊಬ್ಬ ರಿಗೆ ವಹಿಸಿದ್ದರು. ಮತ್ತೊಂದೆಡೆ, ಹಳೇ ಮನೆ ಮಾರಾಟ ಮಾಡಿ ಹಾಲಿ ಇದ್ದ ಮನೆ ಖರೀದಿಸಿದ್ದರು. ಆದರೆ, ಅದರ ದಾಖ ಲಾತಿಗಳು ಸರಿ ಇರಲಿಲ್ಲ. ಇತ್ತೀಚೆಗೆ ಅವರ ಕಾರನ್ನು ಹಣಕಾಸು ಸಂಸ್ಥೆ ಸಿಬ್ಬಂದಿ ಜಪ್ತಿ ಮಾಡಿದ್ದರಿಂದ ಕುಟುಂಬ ಖಿನ್ನತೆಗೆ ಒಳಗಾಗಿತ್ತು. ಈ ಹಿಂದೆ ಮೈಸೂರಿನ ಮಹಾಜನ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ ಗೌರವ್, ಎರಡನೇ ವರ್ಷಕ್ಕೆ ಅದನ್ನು ಕೈಬಿಟ್ಟು ನಂತರ ಮಹಾರಾಜ ಇಂಜಿನಿಯರಿAಗ್ ಕಾಲೇ ಜಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿAಗ್ ಕೋರ್ಸ್ ವ್ಯಾಸಾಂಗ ಮಾಡುತ್ತಿದ್ದರು. ಅಲ್ಲದೇ ಸಿನಿಮಾ ನಟನಾಗಬೇಕೆಂಬ ಕನಸು ಕಂಡಿದ್ದ. ಅದಕ್ಕೆ ತಕ್ಕಂತೆ ಮಂಡ್ಯ ರಮೇಶ್ ಅವರ ನಟನದಲ್ಲಿ ಸಾಕಷ್ಟು ತರಬೇತಿ ಪಡೆದಿದ್ದ ಎನ್ನಲಾಗಿದೆ. ಕಳೆದ ವಾರವಷ್ಟೇ ಗೌರವ್ ಮೈಸೂರಿನಿಂದ ಬಂದಿದ್ದು ೪ ದಿನಗಳ ಕಾಲ ಉಪನಯನ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿದ್ದರು. ಸಾಕಷ್ಟು ಸಂಬAಧಿಕರು, ಸ್ನೇಹಿತರು, ನೆರೆಹೊರೆಯವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ಸಾಲ ಮಾಡಿದ್ದ ವಿಷಯವನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಹೀಗಾಗಿ ಮಾಡಿದ ಸಾಲ ತೀರಿಸಲಾಗದೇ ಮನನೊಂದು ಊಟದಲ್ಲಿ ವಿಷ ಬೆರೆಸಿ ಒಂದೇ ರೂಂನಲ್ಲಿ ಮೂವರು ಸೇವನೆ ಮಾಡಿ, ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸತ್ಯಪ್ರಸಾದ್ ತಾಯಿ ಅನಾರೋಗ್ಯ ಪೀಡಿತರಾಗಿದ್ದು, ಮಹಡಿ ಮೇಲಿನ ರೂಂ ನಲ್ಲಿದ್ದರು. ಪ್ರತಿದಿನವೂ ಅವರಿಗೆ ಅಲ್ಲಿಗೆ ಸಮಯಕ್ಕೆ ಸರಿಯಾಗಿ ತಿಂಡಿ, ಊಟ ನೀಡಲಾಗುತ್ತಿತ್ತು. ಆದರೆ ಇಂದು ಬೆಳಗ್ಗೆ ೧೦ ಗಂಟೆ ಆದರೂ ಯಾರೂ ತಿಂಡಿ ನೀಡಿಲ್ಲ. ರೂಂನಿAದಲೇ ಮಗ ಸೊಸೆಗೆ ಕರೆ ಮಾಡಿದರೂ ಸ್ವೀಕರಿಸಿಲ್ಲ. ಇದರಿಂದ ಗಾಬರಿಗೊಂಡ ವೃದ್ದೆ ತಮ್ಮ ಮಗಳಿಗೆ ಕರೆ ಮಾಡಿದ್ದಾರೆ. ಅವರು ಮನೆಗೆ ಬಂದು ನೋಡಿದಾಗ ದಂಪತಿ ಮನೆಯ ರೂಂನಲ್ಲಿ, ಗೌರವ್ ಬಾತ್‌ರೂಂನಲ್ಲಿ ಬಿದ್ದಿದ್ದರು. ಗೌರವ್ ಉಸಿರಾಡುತ್ತಿದ್ದು, ಆತನನ್ನು ಆಂಬುಲೆನ್ಸ್ ಮೂಲಕ ಹಿಮ್ಸ್ಗೆೆ ದಾಖಲಿಸಿ ಚಿಕಿತ್ಸೆ ಆರಂಭಿಸುತ್ತಿದ್ದAತೆ ಪ್ರಾಣ ಪಕ್ಷಿ ಹಾರಿ ಹೋಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎಸ್ಪಿ ಶ್ರೀನಿವಾಸ್ ಗೌಡ, ಎಎಸ್ಪಿ ನಂದಿನಿ, ಡಿವೈಎಸ್ಪಿ ಉದಯ ಭಾಸ್ಕರ್, ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರೇಣುಕಾಪ್ರಸಾದ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ವೇಳೆ ಎಸ್‌ಪಿ ಶ್ರೀನಿವಾಸ್‌ಗೌಡ ಮಾತನಾಡಿ, ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಹೇಮಾವತಿ ನಗರದಲ್ಲಿ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ವಯಸ್ಸಾದ ಅಜ್ಜಿ ಸೇರಿದಂತೆ ನಾಲ್ವರಿದ್ದರು. ಸಂಬAಧಿಕರೊಬ್ಬರು ಬಂದು ನೋಡಿದಾಗ ಮೂವರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರಣಗಳು ತಿಳಿದುಬಂದಿಲ್ಲ. ಯಾವುದೇ ಡೆತ್‌ನೋಟ್ ಸಿಕ್ಕಿಲ್ಲ. ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದೇವೆ. ಗೌರವ್ ಮೈಸೂರಿನಲ್ಲಿ ಇಂಜಿಯರಿAಗ್ ಶಿಕ್ಷಣ ಪಡೆಯು ತ್ತಿದ್ದು, ಉಪನಯನಕ್ಕಾಗಿ ಮನೆಗೆ ಬಂದಿದ್ದ ಎನ್ನಲಾಗಿದೆ. ನಮಗೆ ಕ್ರಿಮಿನಾಶಕದ ೨ ಬಾಟಲ್ ಮನೆಯಲ್ಲಿ ಸಿಕ್ಕಿದ್ದು, ಸಾಲ ಕಟ್ಟದ ಕಾರಣ ಫೈನಾನ್ಸ್ ಕಂಪನಿಯವರು ಕಳೆದ ೨ ವಾರಗಳ ಹಿಂದೆ ಇವರ ಕಾರನ್ನು ಜಪ್ತಿ ಮಾಡಿಕೊಂಡು ಹೋಗಿದ್ದರು. ಇನ್ನು ಪೆಟ್ರೋಲ್ ಬಂಕ್ ವ್ಯವಹಾರ ಕೂಡ ಸರಿಯಾಗಿ ನಡೆಯುತ್ತಿರಲಿಲ್ಲ. ಹೆಚ್ಚಿನ ತನಿಖೆಯಿಂದ ಸತ್ಯಾಂಶ ಹೊರಬರಬೇಕಾಗಿದೆ ಎಂದರು.