ನ.17ರಿಂದ ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್ ಕಾಲೇಜು ಪುನಾರಂಭ

ಬೆಂಗಳೂರು, ಅ.23(ಕೆಎಂಶಿ)- ನವೆಂಬರ್ 17 ರಿಂದ ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್ ಕಾಲೇಜುಗಳು ಪುನರಾರಂಭಗೊಳ್ಳಲಿವೆ ಎಂದು ಉನ್ನತ ಶಿಕ್ಷಣ ಇಲಾಖೆ ಹೊಣೆ ಹೊತ್ತಿರುವ ಡಾ.ಅಶ್ವತ್ಥ್‍ನಾರಾಯಣ್ ಇಂದಿಲ್ಲಿ ಪ್ರಕಟಿಸಿದ್ದಾರೆ.

ಕಾಲೇಜುಗಳನ್ನು ಪ್ರಾರಂಭ ಮಾಡುವ ಸಂಬಂಧ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜು ಗಳ ಜೊತೆ ಡಿಪ್ಲೊಮಾ ತರಗತಿಗಳು ಆರಂಭಗೊಳ್ಳಲಿದ್ದು, ಪ್ರಾಕ್ಟಿಕಲ್ ತರಗತಿ ಅಂದಿನಿಂದಲೇ ಆರಂಭಗೊಳ್ಳಲಿದೆ ಎಂದರು.

ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಪಾಠ ಕೇಳಬಹುದು. ಇಲ್ಲವೆ ಮನೆಯಲ್ಲೇ ಆನ್‍ಲೈನ್ ತರಗತಿ ಮೂಲಕ ಅಭ್ಯಾಸ ಮಾಡಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ಕಾಲೇಜಿಗೆ ಬಂದು ತರಗತಿ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಕಾಲೇಜಿಗೆ ಬರಲು ಅಭ್ಯಂತರವಿಲ್ಲ ಎಂದು ಮುಚ್ಚಳಿಕೆ ಬರೆದು ಕೊಡಬೇಕು. ಕಾಲೇಜುಗಳು ಆರಂಭಕ್ಕೂ ಮುನ್ನವೇ ವಿದ್ಯಾರ್ಥಿಗಳು ತರಗತಿ ಅಥವಾ ಮನೆಯಲ್ಲಿ ಪಾಠ ಕೇಳುತ್ತೇವೆ ಎಂಬುದರ ಬಗ್ಗೆ ಸಂಬಂಧಪಟ್ಟ ಕಾಲೇಜುಗಳಿಗೆ ಮಾಹಿತಿ ನೀಡ ಬೇಕು. ವಿದ್ಯಾರ್ಥಿಗಳ ಹಾಜರಾತಿ ಯನ್ನು ಗಮನದಲ್ಲಿಟ್ಟುಕೊಂಡು ಎಷ್ಟು ತರಗತಿಗಳನ್ನು ಪ್ರಾರಂಭಿಸಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳ ಲಾಗುವುದು. ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆ ಯಲ್ಲಿ ಟಾಸ್ಕ್‍ಫೋರ್ಸ್ ಇರಲಿದೆ. ಅದೇ ರೀತಿ ಪ್ರತಿ ಕಾಲೇಜು ಗಳಲ್ಲೂ ನಿರ್ವಹಣಾ ಕಾರ್ಯಪಡೆ ಇರುತ್ತದೆ ಎಂದರು.

ಕೇಂದ್ರ ಸರ್ಕಾರದ ಮಾರ್ಗಸೂಚಿ, ಯುಜಿಸಿ ಗೈಡ್ ಲೈನ್ಸ್‍ನ ಆಧಾರದ ಮೇಲೆ ತರಗತಿಗಳನ್ನು ಆರಂಭಿಸ ಲಾಗುತ್ತಿದೆ. ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಹಿಂದು ಳಿದ ಮತ್ತು ಇನ್ನಿತರ ವಸತಿ ನಿಲಯಗಳನ್ನು ಪ್ರಾರಂಭಿಸ ಲಾಗುವುದು. ವಸತಿ ನಿಲಯಗಳಲ್ಲಿ ಕೇಂದ್ರದ ಮಾರ್ಗಸೂಚಿ ಯನ್ನು ಕಡ್ಡಾಯ ವಾಗಿ ಜಾರಿ ಗೊಳಿಸಿ, ಸ್ವಚ್ಛತೆ ಮತ್ತು ಸ್ಯಾನಿ ಟೈಸರ್‍ಗೆ ಒತ್ತು ನೀಡಲಾಗು ವುದು.

ಅದೇ ರೀತಿ ತರಗತಿಗಳನ್ನೂ ಕೂಡಾ ವಿದ್ಯಾರ್ಥಿಗಳಲ್ಲಿ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಕಡ್ಡಾಯಗೊಳಿಸಲಾಗುವುದು. ವಿದ್ಯಾರ್ಥಿಗಳ ಅನು ಕೂಲಕ್ಕಾಗಿ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿ ದರು. ತರಗತಿಯಲ್ಲಾಗಲಿ, ಇಲ್ಲವೆ ವಸತಿ ನಿಲಯಗಳಲ್ಲಾಗಲಿ, ಯಾವುದಾದರೂ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು ಉಂಟಾದರೆ, ಸರ್ಕಾರದ ವತಿಯಿಂದಲೇ ಅವರಿಗೆ ಚಿಕಿತ್ಸೆಯನ್ನು ಕಲ್ಪಿಸುವುದಾಗಿಯು ಹೇಳಿದರು.

ಕಾಲೇಜುಗಳನ್ನು ಪುನರಾರಂಭಿಸಲು ವಿದ್ಯಾರ್ಥಿಗಳಿಂದ ಬೇಡಿಕೆ ಇತ್ತು. ಈ ಬೇಡಿಕೆಯನ್ನು ಗಮನಿಸಿ, ತಜ್ಞರು, ಆರೋಗ್ಯ ಇಲಾಖೆಗೆ ಜೊತೆ ಪೂರ್ವ ಸಭೆಗಳನ್ನು ನಡೆಸಿದ ನಂತರ ಸರ್ಕಾರ ಇಂತಹ ತೀರ್ಮಾನ ಕೈಗೊಂಡಿದೆ.

ಮುಖ್ಯಮಂತ್ರಿಯವರು ಕರೆದಿದ್ದ ಇಂದಿನ ಸಭೆಯಲ್ಲಿ ಕೇವಲ ಶಿಕ್ಷಣ ಇಲಾಖೆ ಅಷ್ಟೇ ಅಲ್ಲದೆ, ಆರೋಗ್ಯ, ಸಮಾಜ ಕಲ್ಯಾಣ, ಸಾರಿಗೆ, ನಗರಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.