ಮೈಸೂರು, ಮೇ 15(ಆರ್‍ಕೆ)- ವಸತಿ ಬಡಾವಣೆ ಅಭಿವೃದ್ಧಿ ಹಂತದಲ್ಲೇ ನಿವೇ ಶನ ಮಾರಾಟ ಮಾಡಲು ಅವಕಾಶ ಕಲ್ಪಿ ಸುವ ನಗರ ಯೋಜನಾ ಕಾಯ್ದೆ (urban town planning act)ಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿರುವ ಸರ್ಕಾರದ ಕ್ರಮವನ್ನು ಮೈಸೂರಿನ ಗೃಹ ನಿರ್ಮಾಣ ಸಹಕಾರ ಸಂಘಗಳು, ಡೆವ ಲಪರ್‍ಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳು ಸ್ವಾಗತಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ಡೆವಲಪರ್‍ಗಳು ಹಾಗೂ ಸಾರ್ವಜನಿ ಕರಿಗೆ ಅನುಕೂಲವಾಗಿದೆ. ಅಲ್ಲದೆ ಸರ್ಕಾ ರಕ್ಕೂ ಆರ್ಥಿಕ ಕ್ರೋಢಿಕರಣವಾಗಲಿದೆ ಎಂದೂ ಎಸ್&ಎಸ್ ಇನ್‍ಫ್ರಾಸ್ಟ್ರಕ್ಚರ್ ವ್ಯವ ಸ್ಥಾಪಕ ನಿರ್ದೇಶಕರಾದ ಶ್ರೀಕಾಂತ್‍ದಾಸ್ ಅಭಿಪ್ರಾಯಪಟ್ಟಿದ್ದಾರೆ. ಎಸ್‍ಬಿಎಫ್‍ಸಿ (ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಂಪನೀಸ್)ಗೆ 30 ಸಾವಿರ ಕೋಟಿ ರೂ. ನೀಡಿರುವುದು ಆರ್ಥಿಕ ಸಂಕಷ್ಟದಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ವರ ದಾನವಾಗಿದೆ. ಮೂಲಭೂತ ಸೌಕರ್ಯ ಗಳನ್ನು ಕಲ್ಪಿಸುವ ಮುನ್ನವೇ ಶೇ.40 ರಷ್ಟು ನಿವೇಶನ ಮಾರಾಟ ಮಾಡಲು ಅವಕಾಶ ಕಲ್ಪಿಸಿರುವುದರಿಂದ ಆರ್ಥಿಕ ಮುಗ್ಗಟ್ಟಿ ನಿಂದ ಅರ್ಧಕ್ಕೆ ನಿಂತಿರುವ ಯೋಜನೆಗಳು ಪೂರ್ಣಗೊಳ್ಳಲಿದೆ. ಸಾರ್ವಜನಿಕರಿಗೆ ಶೀಘ್ರದಲ್ಲೇ ನಿವೇಶನಗಳು ದೊರೆಯ ಲಿವೆ. ಮೂಲಭೂತ ಸೌಕರ್ಯ ಕಲ್ಪಿಸುವ ಮುನ್ನವೇ ನಿವೇ ಶನಗಳನ್ನು ನೋಂದಣಿ ಮಾಡುವುದರಿಂದ ಸರ್ಕಾರಕ್ಕೆ ನೋಂದಣಿ ಶುಲ್ಕದಿಂದ ಆರ್ಥಿಕ ಕ್ರೋಡೀಕರಣವಾಗಲಿದೆ. ಈ ಯೋಜನೆಯೂ ರಿಯಲ್ ಎಸ್ಟೇಟ್ ಉದ್ಯಮಿಗಳು ಮಾತ್ರ ವಲ್ಲ ಸಾರ್ವಜನಿಕರಿಗೂ ವರದಾನವಾದರೆ, ಸರ್ಕಾರಕ್ಕೆ ಆರ್ಥಿಕ ಬಲವನ್ನು ನೀಡುತ್ತದೆ ಎಂದು ತಿಳಿಸಿದರು.
ಅಭಿವೃದ್ಧಿ ಹಂತ ದಲ್ಲೇ ವಸತಿ ಬಡಾ ವಣೆಯ ನಿವೇಶನ ಗಳನ್ನು ಮಾರಾಟ ಮಾಡಲು ಅವಕಾಶ ನೀಡುವಂತೆ ನಗರ ಯೋಜನಾ ಕಾಯ್ದೆಗೆ ತಿದ್ದುಪಡಿ ಮಾಡಿರುವ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದ್ದು, ಅದಕ್ಕಾಗಿ ನಾವು ವಂದನೆಗಳನ್ನು ಸಲ್ಲಿ ಸುತ್ತೇವೆ ಎಂದು ಮೈಸೂರು ಜಿಲ್ಲಾ ಸಹ ಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರೂ ಆದ ಗೃಹ ನಿರ್ಮಾಣ ಸಹಕಾರ ಸಂಘದ ಪ್ರತಿನಿಧಿ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ.
ಪ್ರಸ್ತುತ ಇದ್ದ ಕಾಯ್ದೆಯಂತೆ ಯಥೇಚ್ಛ ವಾಗಿ ಹಣವಿರುವವರು ಮಾತ್ರ ಶೇ.100 ರಷ್ಟು ಮೂಲ ಸೌಕರ್ಯದೊಂದಿಗೆ ಬಡಾ ವಣೆ ಅಭಿವೃದ್ಧಿಪಡಿಸಿ ನಿವೇಶನ ಮಾರು ತ್ತಿದ್ದರು. ಅದರಿಂದ ಸಣ್ಣಪುಟ್ಟ ಸಂಘ ಗಳು, ಡವೆಲಪರ್‍ಗಳಿಗೆ ತೊಂದರೆ ಯಾಗುತ್ತಿತ್ತು ಎಂದು ಅವರು ತಿಳಿಸಿದರು.
ಈಗ ಕಾಯ್ದೆಗೆ ತಿದ್ದುಪಡಿ ಮಾಡಿರು ವುದರಿಂದ ಎಲ್ಲರೂ ಹಂತ ಹಂತವಾಗಿ ನಿವೇಶನವನ್ನು ಸದಸ್ಯರೆಲ್ಲರಿಗೂ ಹಂಚಿಕೆ ಮಾಡಿ ಬಂದ ಹಣದಲ್ಲಿ ವಸತಿ ಬಡಾ ವಣೆ ಯೋಜನೆಯನ್ನು ಪೂರ್ಣಗೊಳಿ ಸಬಹುದು. ಸಂಘಕ್ಕೆ ಹಣಕ್ಕಟ್ಟಿದ ಪ್ರತಿ ಯೊಬ್ಬರಿಗೂ ಕೈಗೆಟಕುವ ದರದಲ್ಲಿ ನಿವೇ ಶನ ನೀಡಬಹುದಾಗಿದೆ ಎಂದ ರಾಜೀವ್, ಕಾಯ್ದೆಗೆ ತಿದ್ದುಪಡಿ ಮಾಡುವಂತೆ ಹಲವು ವರ್ಷಗಳಿಂದ ತಾವು ಒತ್ತಾಯಿ ಸುತ್ತಿದ್ದೆವು ಎಂದರು.
ಈ ಕಾಯ್ದೆಯಿಂದ ಡೆವಲಪರ್‍ಗಳು, ಖಾಸಗಿ ಗೃಹ ನಿರ್ಮಾಣ ಸಂಘಗಳವ ರಿಗೆ ಅನುಕೂಲವಾಗುವುದು. ಆದರೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಒಳ ಚರಂಡಿ, ಎಸ್‍ಟಿಪಿಯಂತಹ ಮೂಲ ಸೌಕರ್ಯ ಅಭಿವೃದ್ಧಿಗೊಳಿಸದೇ ಮುಡಾ ಅಥವಾ ತತ್ಸಮ ಪ್ರಾಧಿಕಾರಗಳು ನಿವೇ ಶನ ಬಿಡುಗಡೆ ಮಾಡಿದಲ್ಲಿ ನಿವೇಶನ ಖರೀದಿಸಿದ ಜನರು, ಮುಂದೆ ಪರಿತಪಿಸ ಬೇಕಾಗುತ್ತದೆ ಎಂದು ಮುಡಾ ಮಾಜಿ ಅಧ್ಯಕ್ಷರಾದ ಡೆವಲಪರ್ ಹೆಚ್.ಎನ್. ವಿಜಯ್ ಅಭಿಪ್ರಾಯಪಟ್ಟಿದ್ದಾರೆ.