ಯೋಗದಿಂದ ರೋಗ ಮುಕ್ತ: ಶಾಸಕ ನಿರಂಜನಕುಮಾರ್

ಗುಂಡ್ಲುಪೇಟೆ:  ಯೋಗಾಭ್ಯಾಸ ಮತ್ತು ಧ್ಯಾನ ಮಾಡುವು ದರಿಂದ ಮಾನಸಿಕ ಸುಸ್ಥಿರತೆ ಹಾಗೂ ಉತ್ತಮ ಆರೋಗ್ಯವನ್ನು ಹೊಂದಬಹು ದಾಗಿದೆ ಎಂದು ಶಾಸಕ ಸಿ.ಎಸ್.ನಿರಂಜನ ಕುಮಾರ್ ಹೇಳಿದರು.

ಪಟ್ಟಣದ ಮದ್ದಾನೇಶ್ವರ ಪ್ರೌಢಶಾಲೆಯ ಆವರಣದಲ್ಲಿರುವ ಮಹಾಮನೆ ಯೋಗ ಕೇಂದ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಶ್ರೀ ಮದ್ದಾ ನೇಶ್ವರ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದರು. ಇಂದಿನ ಆಹಾರ ಪದ್ಧತಿ ಹಾಗೂ ಜೀವನ ವಿಧಾನಗಳಿಂದ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಅನುಭಸುವಂತಾ ಗಿದೆ. ನಿಯಮಿತ ನಡಿಗೆ, ವ್ಯಾಯಾಮ, ಯೋಗಾಭ್ಯಾಸ ಹಾಗೂ ಧ್ಯಾನ ಮಾಡು ವುದರಿಂದ ಮಾನಸಿಕ ಸುಸ್ಥಿರತೆ ಹಾಗೂ ಉತ್ತಮ ಆರೋಗ್ಯವನ್ನು ಹೊಂದಬಹುದಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಯೋಗಕ್ಕೆ ಮನ್ನಣೆ ದೊರಕುವಂತೆ ಮಾಡಿದ್ದು, ಇಡೀ ವಿಶ್ವವೇ ಭಾರತದತ್ತ ನೋಡು ವಂತಾಗಿದೆ. ತಾವೂ ಸಹಾ ಶಾಸಕರಾ ಗುವ ಮೊದಲು ಇದೇ ಯೋಗಕೇಂದ್ರ ದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದು, ಇದನ್ನು ಮನೆಯಲ್ಲಿಯೂ ಪಾಲಿಸುತ್ತಿದ್ದೇನೆ. ಪಟ್ಟ ಣದ ಮಹಾಮನೆ ಯೋಗ ಕೇಂದ್ರವು ಕಳೆದ ದಶಕದಿಂದ ಪಟ್ಟಣ ಹಾಗೂ ಸುತ್ತ ಲಿನ ಜನರಿಗೆ ಯೋಗಾಭ್ಯಾಸ ತರಬೇತಿ ನೀಡುತ್ತಿದ್ದು, ಇದರ ಸದ್ಬಳಕೆಯಾಗುತ್ತಿದೆ. ಆರೋಗ್ಯವಂತರಾದ ಎಲ್ಲರೂ ನಿಯಮಿತ ವಾಗಿ ಯೋಗಾಭ್ಯಾಸ ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದು ಎಂದು ಸಲಹೆ ನೀಡಿದರು.

ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷ ಕೆಂಪ ರಾಜು ಮಾತನಾಡಿ, ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ ಹಾಗೂ ಯೋಗವು ದೊರಕಲಿದೆ. ಯೋಗಾಭ್ಯಾಸವನ್ನು ಜೀವ ನದ ಇಂದು ಭಾಗವಾಗಿ ನಿರಂತರವಾಗಿ ನಡೆಸಿಕೊಂಡು ಹೋಗಬೇಕು. ಇದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂದರು. ಈ ಸಂದರ್ಭದಲ್ಲಿ ಯೋಗ ಶಿಕ್ಷಕರಾದ ನಾಗೇಶ್, ಕೆ.ಸಿ.ರಾಜಪ್ಪ, ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಹರಿಣ , ಕೇಶವ, ಕೆ.ವಿ. ಶ್ರೀನಿವಾಸ್ ಸೇರಿದಂತೆ ಮದ್ದಾನೇಶ್ವರ ಶಾಲೆಯ ವಿದ್ಯಾರ್ಥಿಗಳು ಹಾಗೂ ಯೋಗಪಟುಗಳು ಹಾಜರಿದ್ದರು.