ರಸ್ತೆಗಾಗಿ ಭೂಸ್ವಾಧೀನಕೊಳಪಟ್ಟ ಜಮೀನಿನ ರೈತರಿಗೆ ಪರಿಹಾರ ವಿತರಣೆ

ಹನೂರು:  ಕೊಳ್ಳೇ ಗಾಲದಿಂದ ಹನೂರು ರಸ್ತೆ ಅಭಿವೃದ್ದಿ ಕೆಶಿಫ್ ಯೋಜನೆಯಡಿ ಭೂಸ್ವಾಧೀನಕ್ಕೆ ಮಂಜೂರಾತಿ ದೊರೆತಿದ್ದು, ರೈತರು, ಮಳಿಗೆ ಮಾಲೀಕರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ನೊಂದಾಣಿ ಮಾಡಿ, ಪರಿಹಾರ ಪಡೆದು ಅಭಿವೃದ್ಧಿಗೆ ಸಹಕಾರ ಪರಿಹಾರ ನೀಡುವಂತೆ ಕೊಳ್ಳೇಗಾಲ ಉಪವಿಭಾಗಾಧಿ ಕಾರಿ ಬಿ.ಫೌಜಿಯ ತರುನ್ನುಮ್ ತಿಳಿಸಿದರು.

ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಭೂಸ್ವಾಧೀನ ರೈತರಿಗೆ ಪರಿಹಾರ ಚೆಕ್ ವಿತರಣೆ ಮಾಡಿ, ನಂತರ ಅವರು ಮಾತನಾಡಿದರು.ಕೆಶಿಫ್ ಯೋಜನೆಯಡಿ ಪ್ಯಾಕೇಟ್ ಕೊಳ್ಳೇ ಗಾಲದಿಂದ ಹನೂರುವರಗೆ 23.8 ಕೀಲೋ ಮೀಟರ್ ಹೆದ್ದಾರಿ ಸಂಖ್ಯೆ 79ರ ಅಭಿವೃ ದ್ಧಿಗೆ ಸರ್ಕಾರದಿಂದ ಅಧಿಕೃತ ಆದೇಶದಂತೆ ಭೂಸ್ವಾಧೀನ 2014-31-05-2016 ರಂತೆ ಜಮೀನು ನೇರ ಖರೀದಿಗೆ ಮಂಜೂ ರಾತಿ ದೊರೆಕಿದ್ದು ರಸ್ತೆ ಅಭಿವೃದ್ಧಿ ಅಗ್ರ ಹಾರ, ಸಿದ್ದಯ್ಯನಪುರ, ಮಧುವನಹಳ್ಳಿ, ಹಾರುವನ ಪುರ, ಚಿಕ್ಕಿಂದುವಾಡಿ, ದೊಡ್ಡಿಂ ದುವಾಡಿ, ಸಿಂಗನಲ್ಲೂರು, ಕೊಂಗರಹಳ್ಳಿ, ಆನಾಪುರ, ಮಂಗಲ, ಹುಲ್ಲೇಪುರ, ಹನೂರು ಪಟ್ಟಣ ಸೇರಿದಂತೆ ಗ್ರಾಮಗಳಲ್ಲಿನ ಒಟ್ಟು 401 ಸರ್ವೇ ನಂಬರ್‍ಗಳಲ್ಲಿ 68.06 ಎಕರೆ ಖಾಸಗಿ ಜಮೀನು ನೇರ ಖರೀದಿ ಮೂಲಕ ಭೂಸ್ವಾ ಧಿನಗೊಳಲಿದ್ದು, ಎಲ್ಲಾ 12 ಗ್ರಾಮ ಗಳ ಕಷಿ ಜಮೀನಿಗೆ ಬೆಲೆ ನಿಗದಿ ಪಡಿಸಿ ಯೋಜನಾ ನಿರ್ದೇಶಕರು ಯೋಜನೆ ಅನುಷ್ಠಾನ ಘಟಕ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆ ಬೆಂಗ ಳೂರು 3.9.2018 ರ ನಡುವಳಿಯಂತೆ ಮಂಜೂರಾತಿ ನೀಡಿದ್ದು, ಕೆಶಿಫ್ ವತಿ ಯಿಂದಲೇ 11 ಇ ಸ್ಕೇಚ್ ಪಡೆದು ಜಮೀನು ಕ್ರಯ ನೊಂದಾಣಿ ಪ್ರಕ್ರಿಯೆ ಪ್ರಾರಂಭ ವಾಗಿದೆ ಎಂದರು.
ಪ್ರಥಮವಾಗಿ ಇಂದು ಮಂಗಲ ಗ್ರಾಮದ ಒಟ್ಟು 6 ಸರ್ವೇ ನಂಬರ್‍ಗಳಲ್ಲಿ 54.75 ಎಕರೆ ಜಮೀನು ಖರೀದಿ ಕ್ರಯ ಪತ್ರ ನೊಂದಣಿ ಮಾಡಲಾಗಿದೆ. 5 ಮಂದಿ ರೈತರಿಗೆ 21,66,500 ಮೊತ್ತದ ಪರಿಹಾರ ಧನ ಕ್ರಾಸ್ ಚೆಕ್ ಪಾವತಿಸಲಾಗುತ್ತಿದೆ, ಮುಂದಿನ ದಿನಗಳಲ್ಲಿ ಕೊಳ್ಳೇಗಾಲ ಹನೂರು ಉಪನೊಂದಣಿ ಕಾರ್ಯ ಕೈಗೊಳ್ಳಲಾಗಿದೆ, ನೇರ ಖರೀದಿ ಜಮೀನಿಗೆ ಉಪನೊಂದಣಿ ಕಛೇರಿಯ ಮಾರ್ಗ ಸೂಚಿ ಬೆಲೆಯ 2 ಪಟ್ಟು ಹೆಚ್ಚುವರಿ ಪರಿಹಾರ ಧನ ಹಾಗೂ ಶೇ.100 ರಷ್ಟು ಸಾಂತ್ವಾನ ನಿಧಿ ಸೇರಿಸಿ ಪರಿಹಾರ ಧನ ನೀಡಲಾಗುತ್ತಿದೆ ಅಕ್ಟೋಬರ್ 2018ರ ಅಂತ್ಯದ ಒಳಗೆ ಶೇ.80 ರಷ್ಟು ಜಮೀನು ಖರೀದಿಗೆ ಗುರಿ ಇಟ್ಟು ಕೊಳ್ಳಲಾಗಿದೆ ಎಂದರು.

ಈ ರಸ್ತೆಯ ಅಭಿವೃದ್ಧಿ ಯೋಜನೆಯ ಮುಖ್ಯಾಂಶಗಳು

  • ಕೊಳ್ಳೇಗಾಲ ಹನೂರು ರಸ್ತೆ ಉದ್ದ 23.8 ಕಿ.ಮೀ
  • ಒಳಗೊಳ್ಳುವ ಗ್ರಾಮಗಳು- 12
  • ರಸ್ತೆ ಅಭಿವೃದ್ದಿಗೆ ನೇರ ಖರೀದಿಗೆ ಒಳಪಡುವ ಖಾಸಗಿ ಜಮೀನಿನ ವಿಸ್ತೀರ್ಣ 68.06 ಎಕರೆ
  • ರಸ್ತೆ ಅಭಿವೃದ್ಧಿ ಒಳಪಡುವ ಸರ್ಕಾರಿ ಜಮೀನಿನ ವಿಸ್ತೀರ್ಣ 1.92
  •  ಬೆಂಗಳೂರು-ಕೊಳ್ಳೇಗಾಲ ರಾಷ್ಟ್ರೀಯ ಹೆದ್ದಾರಿ ಕೊಳ್ಳೇಗಾಲ ಪಟ್ಟಣದ ಗಡಿಯಿಂದ ಅಗ್ರಹಾರ ಸಿದ್ದಯ್ಯನಪುರ ಮತ್ತುಮಧುವನಹಳ್ಳಿ ಗ್ರಾಮದ ಜಮೀನುಗಳ ಮೇಲೆ ಬೈಪಾಸ್ ರಸ್ತೆ ಮಾಡಲು ಯೋಜಿಸಲಾಗಿದೆ.

View Comments (1)