ಡಿಎಫ್‍ಆರ್‍ಎಲ್‍ನಿಂದ ನಗರಪಾಲಿಕೆಗೆ 6,500 ಆಹಾರ ಪೊಟ್ಟಣ ವಿತರಣೆ

ಮೈಸೂರು,ಏ.12(ವೈಡಿಎಸ್)-ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರು, ಮನೆಗೆಲಸ ದವರು, ದಿನಗೂಲಿ ಕಾರ್ಮಿ ಕರಿಗೆ ವಿತರಿಸಲು ಮೈಸೂ ರಿನ ಡಿಎಫ್‍ಆರ್‍ಎಲ್ ಸಂಸ್ಥೆ (ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೊರೇಟರಿ) 6,500 ಸಿದ್ಧ ಆಹಾರದ ಪೊಟ್ಟಣಗಳನ್ನು ನಗರಪಾಲಿಕೆಗೆ ನೀಡಿದೆ. ಡಿಎಫ್ ಆರ್‍ಎಲ್ ಸಂಸ್ಥೆ ಆವರಣದಲ್ಲಿ ಈ ಸಿದ್ಧ ಆಹಾರದ ಪೊಟ್ಟ ಣದ ಬಾಕ್ಸ್‍ಗಳನ್ನು ಡಿಎಫ್‍ಆರ್‍ಎಲ್ ಸಂಸ್ಥೆ ನಿರ್ದೇಶಕ ಡಾ.ಅನಿಲ್‍ದತ್ ಸೆಮ್ವಾಲ್ ಅವರು ಪಾಲಿಕೆ ಹೆಚ್ಚುವರಿ ಆಯುಕ್ತ ಶಶಿಕುಮಾರ್ ಅವರಿಗೆ ಹಸ್ತಾಂತರಿಸಿದರು. ಡಿಎಫ್‍ಆರ್‍ಎಲ್ ನೀಡಿರುವ ಕೊಂಬೊ ರೈಸ್, ಕಿಚಡಿ, ಟೊಮ್ಯಾಟೊ ರೈಸ್, ವೈಟ್ ರೈಸ್, ದಾಲ್ ಫ್ರೈ ಉತ್ತಮ ಗುಣಮಟ್ಟದ ಆಹಾರವಾಗಿದ್ದು, 1 ವರ್ಷ ಕೆಡದಂತೆ ಇಡಬಹುದಾಗಿದೆ ಎಂದು ಹೇಳಿದರು. ಈ ವೇಳೆ, ಡಿಎಫ್‍ಆರ್‍ಎಲ್‍ನ ಸಹಾಯಕ ನಿರ್ದೇಶಕ ಡಾ.ಎಂ. ಎಂ.ಫರಿದಾ, ಹೆಚ್ಚುವರಿ ನಿರ್ದೇಶಕರಾದ ಡಾ.ಎನ್. ಗೋಪಾಲನ್, ಡಾ.ಆರ್.ಕುಮಾರ್ ಮತ್ತಿತರರಿದ್ದರು.