ವಿಷ್ಣು ಸಮಾಜ ಯುವ ಮಂಡಲದ ಯುವಕರಿಂದ ಕಾರ್ಮಿಕರಿಗೆ ಆಹಾರ ವಿತರಣೆ

ಮೈಸೂರು, ಏ.27(ಆರ್‍ಕೆಬಿ)- ಲಾಕ್ ಡೌನ್‍ನಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕ ರಿಗೆ ಮೈಸೂರಿನ ವಿಷ್ಣು ಸಮಾಜ ಯುವ ಮಂಡಲದ ಯುವಕರು ಆಹಾರದ ನೆರವು ನೀಡುತ್ತಿದ್ದಾರೆ. ಲಾಕ್‍ಡೌನ್ ಜಾರಿಯಾ ದಂದಿನಿಂದಲೂ ಪ್ರತಿದಿನ 1200 ಪ್ಯಾಕೆಟ್ ಆಹಾರದ ಪೊಟ್ಟಣಗಳನ್ನು ವಿತರಿಸಿ ಹಸಿದ ಹೊಟ್ಟೆ ತುಂಬಿಸುತ್ತಿದ್ದಾರೆ. ಮೈಸೂರಿನ ಇಟ್ಟಿಗೆಗೂಡಿನ ಮಾನಸ ರಸ್ತೆಯಲ್ಲಿರುವ ರಾಜಸ್ತಾನ್ ವಿಷ್ಣು ಸೇವಾ ಟ್ರಸ್ಟ್‍ನಲ್ಲಿ ಅಡುಗೆ ತಯಾರಿಸಿ, ಪೊಟ್ಟಣಗಳನ್ನು ಕಟ್ಟಿ, ವಾಹನ ಗಳಲ್ಲಿ ವಿವಿಧ ಕಡೆಗೆ ಕಳಿಸಲಾಗುತ್ತಿದೆ. ಬೋಗಾದಿ, ರೂಪಾ ನಗರ, ಜೆ.ಸಿ.ಲೇಔಟ್, ಬಂಬೂ ಬಜಾರ್, ಗ್ರಾಮಾಂತರ ಬಸ್ ನಿಲ್ದಾಣ, ಯಾದವಗಿರಿ, ಇಟ್ಟಿಗೆಗೂಡು ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ವಲಸೆ ಮತ್ತು ಕೂಲಿ ಕಾರ್ಮಿಕರಿಗೆ ನೀಡಲಾಗು ತ್ತಿದೆ. ಯುವ ಮಂಡಲ ಸದಸ್ಯರಾದ ರಾಣ್‍ಸಿಂಗ್, ಭವರ್ ಸಿಂಗ್, ಮನೋ ಹರ್ ಸಿಂಗ್, ಪಂಕಜ್‍ಸಿಂಗ್, ಸುರೇಶ್ ದೆವಾಸಿ, ಅಮರ್‍ಸಿಂಗ್, ಚಂದನ್‍ಸಿಂಗ್, ಕೈಲಾಶ್‍ಕುಮಾರ್ ಇನಿತರರು ಈ ಕಾರ್ಯ ದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ.