ಪುಟ್ಟ ಮಕ್ಕಳ ವಾಕ್, ಶ್ರವಣ ದೋಷ ನಿರ್ಲಕ್ಷಿಸದಿರಿ

ಮೈಸೂರು, ಮಾ.13(ಆರ್‍ಕೆಬಿ)-ಶಾಲೆಗೆ ಹೋಗುವ ಪುಟ್ಟ ಮಕ್ಕಳಲ್ಲಿ ಕಿವಿ ಕೇಳಿಸ ದಿರುವುದು, ತೊದಲು ಮಾತು ಮೊದ ಲಾದ ಸಮಸ್ಯೆಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡದೆ ತಕ್ಷಣವೇ ಚಿಕಿತ್ಸೆ ಕೊಡಿಸಿ ಎಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್) ನಿರ್ದೇಶಕಿ ಡಾ. ಎಂ.ಪುಷ್ಪಾವತಿ ಅವರು ಪೋಷಕ ರಿಗೆ ಕಿವಿಮಾತು ಹೇಳಿದರು.

ಮೈಸೂರಿನ ಮಾಧವಕೃಪಾದಲ್ಲಿ `ಸಕ್ಷಮ’ ದಿಂದ ಶುಕ್ರವಾರ ಏರ್ಪಡಿಸಿದ್ದ ಮೈಸೂರು ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜನಿಸಿದ ಮಗುವಿಗೆ ಕಿವಿ ಕೇಳಿಸುತ್ತದೆಯೇ ಎಂದು ಬಹಳಷ್ಟು ಪೋಷಕರು ಪರೀಕ್ಷಿ ಸುವುದೇ ಇಲ್ಲ. ಹಸುಗೂಸು ಆಸ್ಪತ್ರೆ ಯಿಂದ ಮನೆಗೆ ಹೋಗುವಾಗಲಾದರೂ ಶ್ರವಣ ಸಾಮಥ್ರ್ಯದ ಪರೀಕ್ಷೆ ಮಾಡಿಸ ಬೇಕು ಎಂದರು.

ಮಗು ಬೆಳೆದಂತೆ ಕಿವಿ ಕೇಳಿಸದಿದ್ದರೆ, ಮಾತು ಬಾರದಿದ್ದರೂ ಗಂಭೀರವಾಗಿ ಪರಿ ಗಣಿಸದ ಪೋಷಕರು, `ಅಪ್ಪ, ತಾತನಿಗೂ ಚಿಕ್ಕಂದಿನಲ್ಲಿ ಹೀಗೆ ಇತ್ತು, ಮುಂದೆ ಮಾತು ಬರಲಿಲ್ಲವೇ. ಹಾಗೇ ಮಗುವಿಗೂ ಮುಂದೆ ಸರಿಹೋಗುತ್ತದೆ’ ಎಂದು ಉದಾಸೀನ ಮಾಡುತ್ತಾರೆ. ಕೆಲವರು ಮೂಢನಂಬಿಕೆಗೆ ಒಳಗಾಗಿ ಚಿಕಿತ್ಸೆಗೇ ಮುಂದಾಗುವುದಿಲ್ಲ. ಮಗು ಬೆಳೆಯುತ್ತಾ ಕಿವಿ ಪೂರ್ಣ ಕೇಳಿಸ ದಂತಾಗುತ್ತದೆ, ಮಾತು ಬಾರದಂತಾಗು ತ್ತದೆ. ಸರಿಪಡಿಸಲಾಗದ ಸ್ಥಿತಿಗೆ ತಲು ಪುತ್ತದೆ. ಪೋಷಕರ ನಿರ್ಲಕ್ಷ್ಯದಿಂದಾಗಿ ಮಗು ಜೀವನಪರ್ಯಂತ ನರಳುವಂತಾ ಗುತ್ತದೆ ಎಂದು ಅರಿವು ಮೂಡಿಸಲೆತ್ನಿಸಿ ದರು. `ಆಯಿಷ್’ನಿಂದ ಮೈಸೂರಿನ 17 ಆಸ್ಪತ್ರೆಗಳಲ್ಲಿ ವಾಕ್-ಶ್ರವಣ ದೋಷ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ನವ ಜಾತಾ ಶಿಶುವಿನಿಂದ ಹಿಡಿದು ಮೂರು ತಿಂಗಳ ಕಂದನವರೆಗಿನ ಮಕ್ಕಳನ್ನು ತಪ್ಪದೇ ಪರೀಕ್ಷೆ ಗೊಳಪಡಿಸಬೇಕು. ಇದರಲ್ಲಿ ಸಂಘ-ಸಂಸ್ಥೆಗಳ ಹೊಣೆ ಹೆಚ್ಚಿನದಿದೆ. ಶಾಲಾ ಕಾಲೇಜುಗಳಲ್ಲಿ ಶಿಬಿರ ಆಯೋ ಜಿಸಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

`ಸಕ್ಷಮ’ದ ರಾಷ್ಟ್ರೀಯ ಕಾರ್ಯದರ್ಶಿ ಕಮಲಾಕಾಂತ್ ಪಾಂಡೆ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಡಾ.ಚಂದ್ರ ಶೇಖರ್ ಅಧ್ಯಕ್ಷತೆ ವಹಿಸಿದ್ದರು. ವಿಜಯ ವಿಠಲ ಶಾಲೆ ಕಾರ್ಯದರ್ಶಿ ವಾಸುದೇವ ಭಟ್, ಜಿಎಸ್‍ಎಸ್ ಫೌಂಡೇಷನ್ ಸಂಸ್ಥಾ ಪಕ ಶ್ರೀಹರಿ, ಜಿಲ್ಲಾ ಅಂಗವಿಕಲ ಕಲ್ಯಾಣಾಧಿ ಕಾರಿ ಮಮತಾ ಮತ್ತಿತರಿದ್ದರು.