ನಾಯಿಗಳ ದಾಳಿ: ಚಿರತೆ ಮರಿ ರಕ್ಷಣೆ

ಹುಣಸೂರು,ಮೇ 25(ಕೆಕೆ)- ತಾಲೂಕಿನ ಮೈಲಾಂಬೂರು ಗ್ರಾಮದ ಜಮೀನಿ ನೊಂದರಲ್ಲಿ ನಾಯಿ ದಾಳಿಗೆ ಸಿಲುಕಿದ್ದ ಚಿರತೆ ಮರಿಯನ್ನು ಯುವಕರ ತಂಡ ರಕ್ಷಿಸಿದೆ.

ಗ್ರಾಮದ ಮಹೇಂದ್ರ, ಸಾಗರ್, ರಾಜು ಯುವಕರ ತಂಡ ಜಮೀನಿನ ಕೆಲಸಕ್ಕೆಂದು ತೆರಳುತ್ತಿದ್ದಾಗ ಪ್ರಮೋದ್ ಎಂಬುವವರ ಜಮೀನಿನಲ್ಲಿ ನಾಯಿಗಳ ಚೀರಾಟ ಕೇಳಿ ಬಂದಿದೆ. ಸ್ಥಳಕ್ಕೆ ಹೋಗಿ ನೋಡಿದಾಗ ಚಿರತೆ ಮರಿ ಮೇಲೆ ನಾಯಿ ಗಳ ಹಿಂಡು ದಾಳಿ ನಡೆಸುತ್ತಿದ್ದ ದೃಶ್ಯ ಕಂಡು ಬಂದಿದೆ. ತಕ್ಷಣ ನಾಯಿಗಳನ್ನು ಓಡಿಸಿ ಯುವಕರು ಚಿರತೆ ಮರಿ ಯನ್ನು ರಕ್ಷಿಸಿ, ಹುಣಸೂರು ಗ್ರಾಮಾಂ ತರ ಠಾಣೆ ಹಾಗೂ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಗ್ರಾಮಾಂತರ ಎಸ್‍ಐ ಶಿವಪ್ರಕಾಶ್ ಸಮ್ಮುಖ ದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗೆ ಯುವಕರು ಚಿರತೆ ಮರಿ ಒಪ್ಪಿಸಿದ್ದಾರೆ.