ರಾಜ್ಯದಲ್ಲಿ ಡಬಲ್ ಇಂಜಿನ್ ಭ್ರಷ್ಟ ಸರ್ಕಾರ

ಮೈಸೂರು. ಏ.೨೯(ಎಂಟಿವೈ)- ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವಿದ್ದು, ಇಂತಹ ಭ್ರಷ್ಟ ಸರ್ಕಾರ ವನ್ನು ನಾನು ಯಾವತ್ತೂ ಕಂಡಿರಲಿಲ್ಲ ಎಂದು ಶಾಸಕ ಸಾ.ರಾ. ಮಹೇಶ್ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ವಿಜಯನಗರ ೨ನೇ ಹಂತದಲ್ಲಿರುವ ಕೊಡವ ಸಮುದಾಯ ಭವನದಲ್ಲಿ ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಸಂಬAಧ ನಡೆದ ಜೆಡಿಎಸ್ ಮುಖಂಡರು ಹಾಗೂ ಕಾರ್ಯ ಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿಯಬೇಕಾದರೆ ಜನ ಉಳಿಯಬೇಕು ಮತ್ತು ರೈತರು ಉಳಿಯಬೇಕು ಎಂದರು.

ರಾಜ್ಯ ಸರ್ಕಾರದಲ್ಲಿ ದುಡ್ಡಿಲ್ಲದೆ ೮ ತಿಂಗಳಿAದ ಬಡವರಿಗೆ ಸೀಮೆಎಣ್ಣೆ ಕೊಟ್ಟಿಲ್ಲ. ಗ್ಯಾಸ್, ಡೀಸೆಲ್, ಪೆಟ್ರೋಲ್, ಬೆಲೆ ಗಗನಕ್ಕೇರಿದೆ. ೫೦ ಲಕ್ಷ ಜನ ಕೆಲಸ ಕಳೆದುಕೊಂಡಿದ್ದಾರೆ. ಸಬ್ ಇನ್ಸ್ಪೆಕ್ಷರ್ ನೇಮಕಾತಿಯಲ್ಲಿ ದೊಡ್ಡ ಹಗರಣ ನಡೆದಿದೆ ಎಂದು ಸರ್ಕಾರದ ಹಗರಣವನ್ನು ತಿಳಿಸಿದರು.

ಕುಮಾರಣ್ಣ ೧೪ ತಿಂಗಳು ಮುಖ್ಯಮಂತ್ರಿ ಯಾಗಿದ್ದರು. ಒಂದೇ ಒಂದು ಹಗರಣ ನಡೆಯ ಲಿಲ್ಲ. ಆದ್ದರಿಂದ ಹಳೆ ಮೈಸೂರು ಭಾಗದಲ್ಲಿ ಈ ಚುನಾವಣೆ ಗೆಲ್ಲಲೇಬೇಕು. ನಾವು ಗೆದ್ದಿರುವ ಕ್ಷೇತ್ರವಿದು, ಇದನ್ನು ಉಳಿಸಿಕೊಳ್ಳಲೇಬೇಕು. ಕೀಲಾರ ಜಯರಾಂ ಜೊತೆ ಮಾತನಾಡಿ ಮನವೊಲಿಸುತ್ತೇನೆ. ದಯವಿಟ್ಟು ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ. ನೀವು ಅಂದುಕೊAಡAತೆ ಈ ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಪ್ರತಿ ೨೫ ಜನರಂತೆ ತಂಡ ರಚನೆ ಮಾಡಿ ಮತದಾರರ ಮನವೊಲಿಸಿ ಹೆಚ್.ಕೆ. ರಾಮು ಅವರನ್ನು ಗೆಲ್ಲಿಸಲು ಎಲ್ಲರು ಶ್ರಮಿಸಬೇಕೆಂದು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇ ಗೌಡ ಮಾತನಾಡಿ, ರಾಜ್ಯದ ಹಿತ ಕಾಪಾಡಲು ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ. ಕುಮಾರಣ್ಣ ನವರು ಜೆ.ಡಿ.ಎಸ್ ಪಕ್ಷದ ಅಧಿಪತಿಯಾಗಿದ್ದಾರೆ. ಆದ್ದರಿಂದ ರಾಜ್ಯದ ಜನರಿಗೆ ಶಿಕ್ಷಣ, ಆರೋಗ್ಯ ಮತ್ತು ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ನೀಡಿ, ರೈತರ ಸಾಲ ಮನ್ನಾ ಮಾಡಿ, ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ಈ ರಾಜ್ಯವನ್ನು ಸಮೃದ್ಧ ಕರ್ನಾಟಕ ಮಾಡಲು ಕುಮಾರಣ್ಣ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಜೆ.ಡಿ.ಎಸ್. ಪಕ್ಷಕ್ಕೆ ನೆಲೆ ಇಲ್ಲ ಎನ್ನುತ್ತಾರೆ. ಆದರೆ ಕೇವಲ ೨೦ ದಿನದಲ್ಲೇ ಪಕ್ಷ ನನ್ನನ್ನು ಎಂ.ಎಲ್.ಸಿ. ಮಾಡಿದೆ. ಜಿಲ್ಲೆ ಜೆಡಿಎಸ್ ಪಕ್ಷದ ಭದ್ರಕೋಟೆ ಎಂದು ಸಾಬೀತು ಮಾಡಿದೆ. ಹೆಚ್.ಕೆ. ರಾಮುರವರು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಪಕ್ಷದ ಕಷ್ಟ ಸುಖದ ಬಗ್ಗೆ ಅವರಿಗೆ ಅರಿವಿದೆ. ಆದ್ದರಿಂದ ಹೆಚ್.ಕೆ.ರಾಮು ಅವರನ್ನು ಅತ್ಯಧಿಕ ಮತಗಳ ಅಂತರದಿAದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ತಿ.ನರಸೀಪುರ ಶಾಸಕ ಅಶ್ವಿನ್ ಕುಮಾರ್, ಪಿರಿಯಾಪಟ್ಟಣ ಶಾಸಕ ಕೆ.ಮಹಾದೇವ, ಕೆ.ಟಿ. ಶ್ರೀಕಂಠೇಗೌಡ, ಹೆಚ್.ಕೆ. ರಾಮು ಮಾತ ನಾಡಿದರು. ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ನರಸಿಂಹಸ್ವಾಮಿ ನಗರ ಜೆ.ಡಿ.ಎಸ್. ಅಧ್ಯಕ್ಷ ಚೆಲುವೇಗೌಡ, ಜಿಲ್ಲಾ ಯುವ ಅಧ್ಯಕ್ಷ ಗಂಗಾಧರಗೌಡ, ನಗರ ಮಹಿಳಾ ಅಧ್ಯಕ್ಷೆ ಪ್ರೇಮಾಶಂಕರೇಗೌಡ, ಜಿ.ಪಂ.ಮಾಜಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್, ಅಹಿಂದ ಮುಖಂಡ ಅಪೆಕ್ಸ್ ಶ್ರೀನಿವಾಸ್, ಮಾಜಿ ಮೇಯರ್ ಎಂ.ಜೆ. ರವಿಕುಮಾರ್, ಗಂಗಾಧರ್ ಬೃಂದಾ ಕೃಷ್ಣೇಗೌಡ, ನಗರ ಪಾಲಿಕಾ ಸದಸ್ಯ ಶ್ರೀಧÀರ್, ಜಿ.ಪಂ.ಮಾಜಿ ಸದಸ್ಯರಾದ ಎಂ.ಪಿ.ನಾಗರಾಜು, ಎಂ.ಟಿ. ಕುಮಾರ್, ಶ್ರೀರಾಂ ಪುರ ರಮೇಶ್, ಕೆ.ವಿ. ಮಲ್ಲೇಶ್ ಹಾಜರಿದ್ದರು.