ಗಜಪಯಣಕ್ಕೆ ಶಾಸಕರಿಂದ ಚಾಲನೆ

ಚಾಮರಾಜನಗರ, ಸೆ.11(ಎಸ್‍ಎಸ್)- ನಗರದ ಶ್ರೀ ವಿದ್ಯಾಗಣಪತಿ ಮಂಡಳಿಯು ಪ್ರತಿ ವರ್ಷದಂತೆ ಈ ಬಾರಿಯೂ ನಗರದ ರಥದ ಬೀದಿಯಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ಶುಕ್ರವಾರ ಭೂ ರಕ್ಷ ಗಣಪತಿಯ ಮೂರ್ತಿ ಪ್ರತಿಷ್ಠಾಪಿಸಿದೆ.

ಶುಕ್ರವಾರ ಮಧ್ಯಾಹ್ನ 12.30ರಿಂದ 1.30ರೊಳಗಿನ ಶುಭ ಅಭಿಜಿನ್ ಮುಹೂರ್ತದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸ ಲಾಯಿತು. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಸಾರಾ ಥಾಮಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‍ರಾಜ್, ಶ್ರೀವಿದ್ಯಾಗಣಪತಿ ಮಂಡಳಿ ಅಧ್ಯಕ್ಷ ಚಿಕ್ಕರಾಜು, ಗೌರವ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯಂ, ನಗರಸಭಾ ಅಧ್ಯಕ್ಷೆ ಆಶಾ ನಟರಾಜು, ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಸುಂದರ್ ಸೇರಿದಂತೆ ನೂರಾರು ಜನರು ಇದಕ್ಕೆ ಸಾಕ್ಷಿಯಾದರು.

ನಗರದ ಶ್ರೀ ವಿದ್ಯಾಗಣಪತಿ ಮಂಡಳಿಯು ಪ್ರತಿ ವರ್ಷ ವಿಶಿಷ್ಟ ರೀತಿಯ ವಿದ್ಯಾಗಣಪತಿಯನ್ನು ಪ್ರತಿಷ್ಠಾಪಿಸುತ್ತದೆ. ಅದರಂತೆ ಈ ವರ್ಷ ಭೂ ರಕ್ಷ ಗಣಪನನ್ನು ಕೂರಿಸಲಾಗಿದೆ. ರಾಮಸಮುದ್ರದ ನಟರಾಜು ಅವರು ಮಾಡಿರುವ ಈ ಮೂರ್ತಿಯಲ್ಲಿ ಗಣಪತಿಯ ಒಂದು ಕೈಯಲ್ಲಿ ಆಯುಧ, ಇನ್ನೊಂದು ಕೈಯಲ್ಲಿ ರಾಕ್ಷಸನ ರುಂಡ, ಮತ್ತೊಂದು ಕೈಯಲ್ಲಿ ಭೂ ಮಂಡಲವನ್ನು ಹಿಡಿದಿರುವ ಗಣಪನನ್ನು ಪ್ರತಿಷ್ಠಾಪಿಸಲಾಗಿದೆ. ಇದು 59ನೇ ವರ್ಷದ ಗಣಪತಿ ಎಂದು ವಿದ್ಯಾಗಣಪತಿ ಮಂಡಳಿಯ ಗೌರವ ಕಾರ್ಯದರ್ಶಿ ಎನ್.ಬಾಲಸುಬ್ರಹ್ಮಣ್ಯಂ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.
ಇದೇ ತಿಂಗಳ 20ರಂದು ಗಣಪತಿಯನ್ನು ವಿಸರ್ಜಿಸಲು ತೀರ್ಮಾ ನಿಸಲಾಗಿದೆ. ಪ್ರತಿ ವರ್ಷ ನಡೆಯುವಂತೆ ಈ ವರ್ಷವೂ ಮೆರವಣಿಗೆ ಮಾಡಲು ನಿರ್ಧರಿಸಲಾಗಿದೆ. ಈ ಮೊದಲು ಮೆರವಣಿಗೆ ಹೋಗು ತ್ತಿದ್ದ ಬೀದಿಗಳಲ್ಲಿ ಮೆರವಣಿಗೆ ಸಾಗಲಿದೆ. ನಂತರ ರಾತ್ರಿ ನಗರದ ದೊಡ್ಡಅರಸಿನ ಕೊಳದಲ್ಲಿ ಗಣಪತಿ ಮೂರ್ತಿಯನ್ನು ವಿಸರ್ಜಿಸ ಲಾಗುವುದು ಎಂದು ಅವರು ಮಾಹಿತಿ ನೀಡಿದರು.