ಭೇರ್ಯದಲ್ಲಿ ಕೋವಿಡ್ ಮಿತ್ರ ಸಹಾಯವಾಣಿ ಕೇಂದ್ರಕ್ಕೆ ಚಾಲನೆ

ಭೇರ್ಯ, ಮೇ 5 (ಮಹೇಶ್)- ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೂಕು ಆಡಳಿತದ ಕೋವಿಡ್ ಮಿತ್ರ ಸಹಾಯವಾಣಿ ಕೇಂದ್ರಕ್ಕೆ ತಾಪಂ ಇಓ ರಘುನಾಥ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ತಾಲೂಕಿನಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದೆ. ನೆಗಡಿ, ಕೆಮ್ಮು, ಶೀತಕ್ಕೆ ಕೋವಿಡ್ ಪರೀಕ್ಷೆಗೆ ಹೆಚ್ಚು ಹೆಚ್ಚು ಜನರು ಬರುತ್ತಿದ್ದಾರೆ. ಸಣ್ಣ-ಪುಟ್ಟ ಪ್ರಮಾಣದ ಖಾಯಿಲೆಗಳಿಗೆ ಆರ್‍ಟಿಪಿಸಿಆರ್ ಟೆಸ್ಟ್‍ಗೆ ಒಳಾಗುತ್ತಿದ್ದಾರೆ. ಜನರಿಗೆ ವೈದ್ಯ ರಿಂದ ಕೌನ್ಸಿಲಿಂಗ್ ಅಗತ್ಯವಿದ್ದು, ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜಿಲ್ಲಾಡಳಿತದ ಸೂಚನೆ ಮೇರೆಗೆ ಕೋವಿಡ್ ಮಿತ್ರ ಸಹಾಯವಾಣಿ ಕೇಂದ್ರವನ್ನು ತಾಲೂಕು ಆಡಳಿತದಿಂದ ಚಾಲನೆಗೆ ತರಲಾಗಿದೆ ಎಂದು ಹೇಳಿದರು.

ಕೋವಿಡ್ ಟೆಸ್ಟ್ ಮಾಡಿದರೂ ಸಹ ಲ್ಯಾಬ್‍ನಿಂದ ವರದಿಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಇದನ್ನೆಲ್ಲ ಮನ ಗಂಡು ಸರ್ಕಾರ ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲಿ ಅಲ್ಲಿಯ ಜನರಿಗೆ ಸರಿಯಾದ ರೀತಿಯಲ್ಲಿ ಕೌನ್ಸಿಲಿಂಗ್ ನಡೆಸಿದರೆ ಮುಂದೆ ಎಲ್ಲರೂ ಜಾಗೃತ ರಾಗುತ್ತಾರೆ. ಪಾಸಿಟಿವ್ ಪ್ರಕರಣಗಳು ಕಡಿಮೆಯಾಗುತ್ತದೆ ಎಂಬ ಉದ್ದೇಶದಿಂದ ಈ ಕೋವಿಡ್ ಮಿತ್ರ ಸಹಾಯವಾಣಿ ಕೇಂದ್ರವನ್ನು ಪ್ರತಿಯೊಂದು ಆರೋಗ್ಯ ಕೇಂದ್ರಗಳಲ್ಲಿ ತೆರೆಯಲಾಗಿದೆ ಎಂದರು.

ಆರೋಗ್ಯ ಕೇಂದ್ರದಲ್ಲಿ ತೆರೆಯಲಾಗಿ ರುವ ಕೋವಿಡ್ ಮಿತ್ರ ಸಹಾಯವಾಣಿ ಕೇಂದ್ರದಲ್ಲಿ ಮೊದಲು ವೈದ್ಯರನ್ನು ಭೇಟಿ ಮಾಡಿ ತಮ್ಮ ಹೆಸರು ವಿಳಾಸ ನೋಂದಾ ಯಿಸಿ ನಂತರ ವೈದ್ಯರು ಅವರನ್ನು ಆರ್‍ಟಿಪಿಸಿಆರ್ ಟೆಸ್ಟ್ ಕಡ್ಡಾಯವಾಗಿ ಮಾಡಿಸಲೇಬೇಕು ಎಂದು ಧೃಡೀಕರಣ ಚೀಟಿ ನೀಡಿದಾಗ ಮಾತ್ರ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ ಎಂದು ತಿಳಿಸಿದರು. ಯಾರು ಕೂಡ ಆತಂಕ ಪಡಬಾರದು. ವೈದ್ಯರನ್ನು ಭೇಟಿ ಮಾಡಿ ಅವರೊಂದಿಗೆ ಸಮಾಲೋಚನೆ ನಡೆಸಿ, ನಂತರ ಅವರ ಸಲಹೆ-ಸೂಚನೆ ಪಾಲಿಸಿ ಎಂದು ಮನವಿ ಮಾಡಿದರು.

ಸಾರ್ವಜನಿಕರು ತಾಲೂಕು ಆಡಳಿತ ನಿಗದಿ ಮಾಡಿರುವ ಸಮಯಕ್ಕೆ ಸರಿ ಯಾಗಿ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಮನೆಯಿಂದ ಹೊರಬನ್ನಿ, ಸುಖಾಸುಮ್ಮನೆ ಬರಬೇಡಿ. ತಾಲೂಕು ಆಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಯ ಆದೇಶ ವನ್ನು ಪಾಲಿಸಿ. ಇಲ್ಲದಿದ್ದಲ್ಲಿ ಕೋವಿಡ್ ಕಾಯ್ದೆಯಡಿ ಕೇಸು ದಾಖಲಿಸಲಾಗು ವುದು ಎಂದು ಎಚ್ಚರಿಸಿದರು.

ನಂತರ ಎರಡನೇ ಕೋವಿಡ್ ಕೇಂದ್ರ ವಾಗಿರುವ ಅರಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ, ಸಿಬ್ಬಂದಿ ಗಳೊಂದಿಗೆ ಚರ್ಚಿಸಿದರು.
ವೈದ್ಯಾಧಿಕಾರಿ ಡಾ.ಅಮಿತ್, ತಾಪಂ ವ್ಯವಸ್ಥಾಪಕಿ ಅನಿತಾ, ಮೇಲ್ವಿಚಾರಕ ಕರೀಗೌಡ, ಪಿಡಿಓ ಕೆ.ಎ.ಮಂಜುನಾಥ್, ಕಾರ್ಯದರ್ಶಿ ತುಕರಾಂ, ಆರೋಗ್ಯ ಇಲಾಖೆ ಪ್ರಯೋಗಾಲಯ ತಾಂತ್ರಿಕಾ ಧಿಕಾರಿ ಪ್ರಕಾಶ್, ಆರೋಗ್ಯ ಸಹಾಯಕ ಪರಮೇಶ್, ಹಿರಿಯ ಆರೋಗ್ಯ ಸಹಾ ಯಕಿ ಹೇಮಲತಾ, ಅನಿತಾ, ಮಂಜುಳಾ, ರಾಧಾ, ಪಂಚಾಯತಿ ಸಿಬ್ಬಂದಿ ಕುಮಾರ್, ಜಯಂತ್, ಮುಬುಶಿರಾ ತಪಸಮ್, ಜಬ್ಬರ್, ರಮೇಶ್, ಗೌತಮ್ ಮೊದಲಾದವರು ಇದ್ದರು.