ಮಾದಕ ವಸ್ತು ಮಾರುವವರು ಗೂಂಡಾ ಕಾಯ್ದೆಯಡಿ ಬಂಧನ

ಬೆಂಗಳೂರು:  ಮಾದಕ ವಸ್ತುಗಳ ಮಾರಾಟ ಮಾಡುವ ಮತ್ತು ಪ್ರಚೋದಿಸುವವರನ್ನು ಗೂಂಡಾ ಕಾಯಿದೆ ಅಡಿ ಬಂಧಿಸಿ ಜೈಲಿಗೆ ಕಳುಹಿಸುವುದಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿಂದು ಘೋಷಿಸಿದ್ದಾರೆ.

ಮಾದಕ ವಸ್ತುಗಳು ಜನರು ಅದರಲ್ಲೂ ಯುವಜನರನ್ನು ಬಲಿ ತೆಗೆದುಕೊಳ್ಳುತ್ತಿರು ವವರ ವಿರುದ್ಧ ಮರಣದಂಡನೆ ವಿಧಿಸುವ ಕಾನೂನು ತರುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ನಿಯಮ 69 ರಡಿ ಬಿಜೆಪಿಯ ಆರ್. ಅಶೋಕ್ ಪ್ರಸ್ತಾಪಿಸಿದ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿ ಯುವಕರ ದಾರಿ ತಪ್ಪಿಸುತ್ತಿರುವ ವ್ಯಕ್ತಿಗಳನ್ನು ಬಲಿ ಹಾಕುವಂತೆ ಪಕ್ಷಾತೀತವಾಗಿ ಸದಸ್ಯರು ಸರ್ಕಾರವನ್ನು ಆಗ್ರಹಿಸಿದರು.

ಇದಕ್ಕೆ ಪೂರಕವಾಗಿ ಸ್ಪಂದಿಸಿದ ಗೃಹ ಇಲಾಖೆ ಹೊಣೆ ಹೊತ್ತ ಉಪಮುಖ್ಯಮಂತ್ರಿ ಅವರು, ಗಾಂಜಾ, ಅಫೀಮು ಸೇರಿದಂತೆ ಮಾದಕ ವಸ್ತುಗಳನ್ನು ಮಾರಾಟ ಮಾಡು ವವರನ್ನು ಬಂಧಿಸಿ, ಗೂಂಡಾ ಕಾಯಿದೆ ಯಡಿ ಜೈಲಿಗೆ ಕಳುಹಿಸುವಂತೆ ಇಂದೇ ಅಧಿಕಾರಿಗಳಿಗೆ ಆದೇಶ ಮಾಡುತ್ತೇನೆ.

ಇಂತಹವರನ್ನು ಮಟ್ಟ ಹಾಕಲು ಗೂಂಡಾ ಕಾಯಿದೆ ಸಾಲದು, ಪಂಜಾಬ್ ರಾಜ್ಯ ಸರ್ಕಾರ ಮಾಡಿರುವ ಶಿಫಾರಸ್ಸನ್ನು ಕೇಂದ್ರ ಮಾನ್ಯ ಮಾಡಿ, ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು. ಕರ್ನಾಟಕವನ್ನು ಯಾವುದೇ ಕಾರಣಕ್ಕೂ ಪಂಜಾಬ್ ಆಗಲು ಬಿಡುವುದಿಲ್ಲ. ಆ ಮಟ್ಟಕ್ಕೆ ಬೆಳೆಯುವ ಮುನ್ನವೇ ಈ ಮಾಫಿಯಾ ವನ್ನು ಹತ್ತಿಕ್ಕಲು ಸರ್ಕಾರ ಕಟಿಬದ್ಧವಾಗಿದೆ. ಕೆಲವು ದೇಶಗಳಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಲಾಗುತ್ತದೆ. ಇದನ್ನು ಭಾರತ ದಲ್ಲಿ ತಂದರೂ ತಪ್ಪಾಗಲಾರದು. ರಾಷ್ಟ್ರ ದ್ರೋಹಿಗಳ ವಿರುದ್ಧ ಕಠಿಣ ಕ್ರಮ ಜರುಗಿ ಸುವಂತೆ ಈಗಾಗಲೇ ಹಿರಿಯ ಅಧಿಕಾರಿ ಗಳ ಸಭೆ ನಡೆಸಿ ಸಲಹೆ-ಸೂಚನೆ ನೀಡಿ ದ್ದೇನೆ. ಮಾದಕ ವಸ್ತು ಮಾರಾಟ ಇಂದು-ನಿನ್ನೆಯದಲ್ಲ. ನಾನು 30 ವರ್ಷಗಳ ಹಿಂದೆ ಕೃಷಿ ವಿಶ್ವ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ಸಂದರ್ಭದಲ್ಲಿ ನನ್ನ ಸಹ ಪಾಠಿಗಳು ಮಾದಕ ವಸ್ತು ಸೇವಿಸುತ್ತಿದ್ದರು.

ಇತ್ತೀಚೆಗೆ ಬೆಂಗಳೂರು ನಗರವಷ್ಟೇ ಅಲ್ಲ, ಮೈಸೂರು, ಮಂಗಳೂರು, ಬೆಳಗಾವಿ ಸೇರಿದಂತೆ ರಾಜ್ಯದ ಎಲ್ಲಾ ಪ್ರಮುಖ ನಗರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ವ್ಯಾಪಕ ವಾಗಿ ಹರಡಿದೆ. ಅದರಲ್ಲೂ ಪ್ರತಿಷ್ಠಿತ ಮತ್ತು ವೃತ್ತಿಶಿಕ್ಷಣ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಮೊದಲು ವಿದೇಶಗಳಿಂದ ಮಾದಕ ವಸ್ತುಗಳು ರಾಜ್ಯಕ್ಕೆ ಕಳ್ಳ ಸಾಗಣೆಯಾಗುತ್ತಿತ್ತು, ಆದರೆ ಇದೀಗ ಬೆಂಗಳೂರಿನಿಂದಲೇ ವಿದೇಶಗಳಿಗೆ ರಫ್ತಾಗುತ್ತಿದೆ. ನಗರದ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಆಸುಪಾಸಿನ ಮನೆಗಳಲ್ಲೇ ಔಷಧ ಕಂಪನಿಗಳ ಹೆಸರಿನಲ್ಲಿ ಮತ್ತು ಬರಿಸುವ ಗುಳಿಗೆಗಳನ್ನು ತಯಾರಿಸಿ, ರಫ್ತು ಮಾಡುತ್ತಿದ್ದಾರೆ.

ಈಶಾನ್ಯ ಹಾಗೂ ಆಫ್ರಿಕಾ ಖಂಡದ ದೇಶಗಳು ಮೂರು ತಿಂಗಳ ವಿದ್ಯಾಭ್ಯಾಸಕ್ಕೆ ಬಂದು ಇಲ್ಲಿ ವೀಸಾ ಅವಧಿ ಪೂರ್ಣಗೊಂಡರೂ ಇಲ್ಲಿಯೇ ವಾಣಿಜ್ಯ ವಹಿವಾಟು ನಡೆಸುತ್ತಿರುವುದು ಕಂಡುಬರುತ್ತಿದೆ. ಈ ಬಹಳಷ್ಟು ಮಂದಿ ವೀಸಾ ಅವಧಿ ಮುಗಿದರೂ ಈ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ, ಇಂತಹವರನ್ನು ಪತ್ತೆ ಹಚ್ಚಿ ಅವರ ದೇಶಕ್ಕೆ ವಾಪಸ್ ಕಳುಹಿಸಲು ಆದೇಶ ಮಾಡಿದ್ದೇನೆ. ಅಷ್ಟೇ ಅಲ್ಲ, ನಗರದ ಎಲ್ಲಾ ಕಾಲೇಜುಗಳಲ್ಲಿ ಸ್ಥಳೀಯ ಡಿಸಿಪಿ ಮಟ್ಟದ ಅಧಿಕಾರಿಗಳು ತೆರಳಿ ಆ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಇಂತಹ ವಿದ್ಯಾರ್ಥಿಗಳ ಪರಿಶೀಲಿಸಿ, ಪಾಸ್‍ಪೋರ್ಟ್ ಮತ್ತು ವೀಸಾ ಬಗ್ಗೆ ವಿವರ ಪಡೆಯು ವಂತೆ ಸೂಚಿಸಿದ್ದೇನೆ.

ಇದೇ ಸಂದರ್ಭದಲ್ಲಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಈ ಬಗ್ಗೆ ಕಳವಳ ವ್ಯಕ್ತಪಡಿಸಿದಾಗ ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಗೃಹ, ಅಬಕಾರಿ, ಶಿಕ್ಷಣ ಮತ್ತು ಆರೊಗ್ಯ ಇಲಾಖೆಗಳು ಜಂಟಿ ಯಾಗಿ ಇಂತಹ ವ್ಯಕ್ತಿಗಳ ವಿರುದ್ಧ ಹೋರಾಟ ನಡೆಸುವುದಾಗಿ ತಿಳಿಸಿದರು.