ಮನರಂಜಿಸಿದ ಸಂಗೀತ ಕಾರ್ಯಕ್ರಮ: ವಿವಿಧ ಕ್ಷೇತ್ರದ ಕಾಯಕರಿಗೆ ಸನ್ಮಾನ

ಮೈಸೂರು:  ಮೈಸೂರು ಅರಮನೆ ಆವರಣದಲ್ಲಿ ವಿಶ್ವ ಪ್ರವಾಸೋ ದ್ಯಮ ದಿನಾಚರಣೆ ಅಂಗವಾಗಿ ಜಿಲ್ಲಾ ಡಳಿತ, ಪ್ರವಾಸೋದ್ಯಮ ಇಲಾಖೆ, ಮೈಸೂರು ಅರಮನೆ ಮಂಡಳಿ, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್, ಮೈಸೂರು ಹೊಟೇಲ್ ಮಾಲೀಕರ ಸಂಘದ ಸಂಯುಕ್ತಾಶ್ರಯ ದಲ್ಲಿ ಗುರುವಾರ ಸಂಜೆ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕಲಾವಿದರು ಪ್ರಸ್ತುತ ಪಡಿಸಿದ ನೃತ್ಯ, ಗಾಯನಗಳು ಕಲಾ ರಸಿ ಕರ ಮನತಣಿಸಿದವು. ವಿದ್ವಾನ್ ತಾಂಡವ ಮೂರ್ತಿ ನೇತೃತ್ವದಲ್ಲಿ ಪೊಲೀಸ್ ಬ್ಯಾಂಡ್ ತಂಡದವರು ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತ ನಾಟ್ಯ ಕಲಾವಿದ ವಿದ್ವಾನ್ ಭದ್ರ್ರಿ ಭೂಷಣ್ ತಂಡ ಭರತನಾಟ್ಯ ಮತ್ತು ಕಥಕ್ ಶಾಸ್ತ್ರೀಯ ನೃತ್ಯ ಪ್ರದರ್ಶಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರ ದಲ್ಲಿ ಸೇವೆ ಸಲ್ಲಿಸಿದ ವಿ.ವಿ.ಪುರಂ ಸಂಚಾರ ಪೊಲೀಸ್ ಪೇದೆ ಲೊಕೇಶ್, ಚಾಲಕ ರಾದ ರೇವಣ್ಣ, ಮರಿಸ್ವಾಮಿ, ಅರಮನೆ ಮಾರ್ಗದರ್ಶಕ ರಮೇಶ್ ಎಸ್. ಸಿದ್ದಯ್ಯ ಮತ್ತು ಮಹಾಲಕ್ಷ್ಮಿ ಸ್ವಿಟ್ಸ್‍ನ ತಿಂಡಿ ತಯಾ ರಕ ಕುಮಾರ್ ಅವರನ್ನು ಸನ್ಮಾನಿಸಲಾ ಯಿತು. ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜೆ.ಜನಾರ್ಧನ್, ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಜಯಕುಮಾರ್, ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.