ನಾಡನಹಳ್ಳಿ ಕೆರೆಯಲ್ಲಿ ಸಿಐಐನಿಂದ ಪರಿಸರ ದಿನ ಆಚರಣೆ

ಮೈಸೂರು,ಜೂ.8-ಸಿಐಐ ಮೈಸೂರು ವಿಭಾಗವು ಮೈಸೂರಿನ ನಾಡನಹಳ್ಳಿ ಕೆರೆ (ದೇವಿ ಕೆರೆ)ಯ ದಡದಲ್ಲಿ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನ ವನ್ನು ಆಚರಣೆ ಮಾಡಿತು.

ಸಿಐಐ ಮೈಸೂರಿನ ಅಧ್ಯಕ್ಷ ಅಮಿತ್ ಕುಮಾರ್ ಮತ್ತು ಉಪಾಧ್ಯಕ್ಷ ಪವನ್ ಜಿ.ರಂಗ ಅವರು ಸಸಿ ನೆಟ್ಟು ನೀರೆರೆದರು. ಸಿಐಐ ಸಿಎಸ್‍ಆರ್ ಮಂಡಳಿಯ ಸಂಯೋಜಕರಾದ ಸ್ಯಾಮ್‍ಚೆರಿಯನ್ ಮತ್ತು ಸಹ ಸಂಯೋಜಕಿ ಸವಿತಾ ಮಲ್ಲಪ್ಪ, ಸಿಐಐನ-ವೈಐ (ಯಂಗ್ ಇಂಡಿಯನ್ಸ್) ನ ಅಧ್ಯಕ್ಷ ಡಾ.ಪ್ರದೀಪ್ ಮಂಜುನಾಥ್ ಮತ್ತು ಉಪಾಧ್ಯಕ್ಷ ನಿಖಿಲ್‍ಕೌಂಡಿನ್ಯ, ಜೆಕೆ ಟೈರ್‍ನ ಜಿಎಂ-ಎಚ್‍ಆರ್ ವಿಕ್ರಮ್ ಹೆಬ್ಬಾರ್ ಮತ್ತು ರಿಶಿ ಎಫ್‍ಐಬಿಸಿಯ ಜಿಎಂ-ಎಚ್‍ಆರ್ ಬೇಸಿಲ್ ಜೋಶಿ ಮತ್ತು ಸಿಎಸ್‍ಆರ್ ಮಂಡಳಿಯ ಇತರೆ ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.