ಮೈಸೂರಲ್ಲಿ ನೀರು ಪೋಲಾಗುವುದನ್ನು ತಪ್ಪಿಸಲು ಪ್ರತೀ ಮನೆಗೂ `ಮೀಟರ್’ ಅಳವಡಿಸುವ ಅಭಿಯಾನ

ಮೈಸೂರು, ಜು.16(ಆರ್‍ಕೆಬಿ)- ಕುಡಿಯುವ ನೀರನ್ನು ಯಥೇಚ್ಛವಾಗಿ ಪೋಲು ಮಾಡಲಾಗುತ್ತಿರುವುದನ್ನು ತಪ್ಪಿಸುವ ಸಲುವಾಗಿ ಮೈಸೂರಿನಲ್ಲಿ ಪ್ರತೀ ಮನೆಗೂ ಕುಡಿಯುವ ನೀರಿನ ಮೀಟರ್ ಅಳವಡಿಸುವುದರ ಬಗ್ಗೆ ವಿಶೇಷ ಕಾಳಜಿ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ತಿಳಿಸಿದರು.

ಮೈಸೂರು ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಸಮU್ರÀ ಯೋಜನೆ ರೂಪಿಸುವ ಸಂಬಂಧ ಹಾಗೂ ಪ್ರಸ್ತುತ ಪ್ರಗತಿಯಲ್ಲಿರುವ ಯೋಜನೆ ಗಳ ಕುರಿತಂತೆ ಪಾಲಿಕೆ ಸಭಾಂಗಣದಲ್ಲಿ ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು. ಮೀಟರ್ ಅಳವಡಿಸುವ ಅಭಿಯಾನ ಆರಂಭಿ ಸಲು ಕಾಲಾವಕಾಶ ನೀಡಲಾಗಿದ್ದು, ಮೇಯರ್ ಮತ್ತು ನಗರಪಾಲಿಕೆಯ ವಿರೋಧಪಕ್ಷದ ನಾಯಕರು ಆಯಾ ಪಾಲಿಕೆಯ ಸದಸ್ಯರನ್ನು ಒಳಗೊಂಡಂತೆ ಪ್ರತಿ ವಾರ್ಡ್ ನಲ್ಲಿ ಎಲ್ಲಾ ಮನೆಗಳಿಗೂ ನೀರಿನ ಮೀಟರ್ ಅಳವಡಿ ಸುವ ಕೆಲಸ ಆಗಬೇಕು. ಈ ಮೂಲಕ ನೀರಿನ ಸದ್ಬಳಕೆ ಆಗಬೇಕು ಎಂದು ಹೇಳಿದರು. ಎಲ್ಲಾ ಮಹಾನಗರ ಪಾಲಿಕೆ ಗಳಲ್ಲಿಯೂ ನಾವು ಎಷ್ಟು ನೀರನ್ನು ಬಳಸಿದ್ದೇವೋ, ಅಷ್ಟು ನೀರಿನ ಬಿಲ್ ಮಾತ್ರ ಪಾವತಿ ಮಾಡುವ ವ್ಯವಸ್ಥೆ ಯನ್ನು ಮಾಡಲಾಗುತ್ತಿದೆ. ಎಲ್ಲೆಲ್ಲಿ ಮಹಾನಗರಪಾಲಿಕೆ ಇದೆಯೋ ಅಲ್ಲೆಲ್ಲಾ ಇಂತಹ ವ್ಯವಸ್ಥೆ ತರಲು ಸರ್ಕಾರ ತೀರ್ಮಾನಿಸಿದೆ ಎಂದರು. ಮೈಸೂರು ನಗರದಲ್ಲಿ ಶೇ.60 ರಷ್ಟು ಮೀಟರ್ ಅಳವಡಿಸಿದ್ದು, ಇನ್ನೂ ಶೇ.40ರಷ್ಟು ಅಳವಡಿಸಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿ ದ್ದಾರೆ. ಹಾಗಾಗಿ ಅದನ್ನು ಪೂರ್ಣವಾಗಿ ಅಳವಡಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದಕ್ಕೆ ಮೇಯರ್ ಟೆಂಡರ್ ಕರೆದಿದ್ದಾರೆ. ಮೀಟರ್ ಅಳವಡಿಸು ಅಭಿಯಾನ ಕೈಗೊಂಡು, ಆ ಮೂಲಕ ಎಲ್ಲಾ ಕಡೆ ಮೀಟರ್ ಅಳವಡಿಸಿದರೆ ನೀರಿನ ಸದ್ಬಳಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಸಭೆಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್‍ಸೇಠ್, ಎಲ್.ನಾಗೇಂದ್ರ, ಪ್ರಭಾರ ಮೇಯರ್ ಅನ್ವರ್‍ಬೇಗ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಪಾಲಿಕೆ ವಿಪಕ್ಷ ನಾಯಕರಾದ ಶಿವಕುಮಾರ್, ಅಯೂಬ್‍ಖಾನ್, ಅಶ್ವಿನಿ, ಪೌರಾಡಳಿತ ಇಲಾಖೆ ನಿರ್ದೇಶಕರಾದ ಬಿ.ಬಿ.ಕಾವೇರಿ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮಿಕಾಂತ್‍ರೆಡ್ಡಿ, ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್ ಇನ್ನಿತರರು ಉಪಸ್ಥಿತರಿದ್ದರು.

ಮೈಸೂರಲ್ಲಿ ಹೊಸ `ಪಾರಂಪರಿಕ ಸಮಿತಿ’ ರಚನೆಗೆ ಒತ್ತು: ಮೈಸೂರಿನಲ್ಲಿ ಈಗಾಗಲೇ ಇರುವ ಪಾರಂಪರಿಕ ಸಮಿತಿಯಲ್ಲಿ 25-30 ಜನರಿದ್ದು, ಅದನ್ನು ಪುನಾರಚಿಸಿ ಹೊಸ ಸಮಿತಿಯನ್ನು ರಚಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ತಿಳಿಸಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಪಾಲಿಕೆ ಪ್ರಗತಿ ಪರಿಶೀಲನಾ ಸಭೆಯ ವೇಳೆ ಶಾಸಕರು ಪಾರಂಪರಿಕ ಕಟ್ಟಡಗಳ ಬಗ್ಗೆ ಪ್ರಸ್ತಾಪಿಸಿದ್ದರು. ಅದರ ಬಗ್ಗೆಯೂ ಕೆಲ ತೀರ್ಮಾನಗಳನ್ನು ಮಾಡಲಿದ್ದೇವೆ. ಹಾಗಾಗಿ ಹಾಲಿ ಇದ್ದ ಪಾರಂಪರಿಕ ಸಮಿತಿಯನ್ನು ರದ್ದುಪಡಿಸಿ, ಹೊಸ ಸಮಿತಿಯನ್ನು ರಚಿಸಲು ಸರ್ಕಾರ ಮುಂದಾಗಲಿದೆ ಎಂದು ಹೇಳಿದರು.

90 ಎಂಎಲ್‍ಡಿ ಹೆಚ್ಚುವರಿ ನೀರು ಪಡೆಯುವ 90 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಿ: ಮೈಸೂರು, ಜು.16(ಆರ್‍ಕೆಬಿ)- ಮೈಸೂರು ನಗರಕ್ಕೆ ಈಗಾಗಲೇ ನದಿಯಿಂದ ಪಡೆಯುತ್ತಿರುವ ನೀರಿನ ಪ್ರಮಾಣದ ಜೊತೆಗೆ ಕಬಿನಿಯಿಂದ ಇನ್ನೂ 90 ಎಂಎಲ್‍ಡಿ ನೀರನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಲು 90 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಇಂದಿಲ್ಲಿ ತಿಳಿಸಿದರು. ಮೈಸೂರು ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಮ್ಮುಖದಲ್ಲಿ ನಗರಪಾಲಿಕೆಯ ಅಭಿವೃದ್ಧಿ ಕಾರ್ಯಗಳ ಕುರಿತ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಸಭೆಯಲ್ಲಿನ ಮಾಹಿತಿ ನೀಡಿದರು. ಹೆಚ್ಚುವರಿ ನೀರು ಪಡೆದುಕೊಂಡರೆ ಉಳಿದ ಬಡಾವಣೆಗಳಿಗೂ ಕೂಡ ಸಮರ್ಪಕವಾಗಿ ಕುಡಿಯುವ ನೀರು ನೀಡುವಂತಾ ಗಲಿದೆ. ಈ ಕುರಿತಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಆಯುಕ್ತರಿಗೆ ಈ ಸಂಬಂಧ ನಿರ್ದೆಶನ ನೀಡಲಾಗಿದೆ ಎಂದರು. ಈಗ ನದಿಗಳಿಂದ ಪಡೆಯಲಾ ಗುತ್ತಿರುವ 305 ಎಂಎಲ್‍ಡಿ ನೀರು ಎಲ್ಲೆಲ್ಲಿ ವಿಭಜನೆಯಾಗಿ ಹೋಗುತ್ತಿದೆ ಎಂಬ ಮಾಹಿತಿ ನೀಡುವಂತೆಯೂ ಕೇಳಿದ್ದೇನೆ ಎಂದರು.