ಪುನೀತ್ ಹೆಸರಿನಲ್ಲಿ ಪ್ರತಿ ವರ್ಷ ರಾಜ್ಯಮಟ್ಟದ ಯುವ ನಾಯಕ ಕನ್ನಡ ರಾಜ್ಯ ಪ್ರಶಸ್ತಿ ನೀಡಬೇಕು: ವೈ.ಡಿ.ರಾಜಣ್ಣ ಒತ್ತಾಯ

ಮೈಸೂರು, ಅ. ೩೦- ಅಪೂರ್ವ ಸ್ನೇಹ ಬಳಗ ಹಾಗೂ ಕೃಷ್ಣರಾಜ ಯುವ ಬಳಗದ ಪದಾಧಿಕಾರಿಗಳು ಚಿತ್ರನಟ ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿದರು.
ಚಿತ್ರನಟ ಪುನೀತ್ ರಾಜ್‌ಕುಮಾರ್ ನಿಧನದಿಂದ ಕನ್ನಡ ನಾಡು ಹಾಗೂ ಕನ್ನಡ ಚಿತ್ರರಂಗಕ್ಕೆ ತುಂಬ ಲಾರದ ನಷ್ಟವುಂಟಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ವಿಷಾದ ವ್ಯಕ್ತ ಪಡಿಸಿದರು. ಚಾಮುಂಡಿಪುರA ಸರ್ಕಲ್‌ನಲ್ಲಿ ಶನಿ ವಾರ ಅಪೂರ್ವ ಸ್ನೇಹ ಬಳಗ ಹಾಗೂ ಕಸ ತೆಗೆ ಯುವ ಬಳಗದಿಂದ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಶ್ರದ್ಧಾಂಜಲಿ ಸಭೆ ನಡೆಸಿ, ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದಲ್ಲಿ ಒಬ್ಬ ಮಾದರಿ ಕಲಾವಿದರಾಗಿ ಇದ್ದಂಥವರು. ಚಿತ್ರ ರಂಗದ ಅಭಿನಯದ ಜೊತೆಗೆ ಸಾಮಾಜಿಕವಾಗಿ ಹಲವು ಸಂಘ ಸಂಸ್ಥೆಗಳಿಗೆ ಒತ್ತಾಸೆಯಾಗಿ ನಿಂತಿದ್ದು ಅಂಥವರು ತಮ್ಮ ವೃತ್ತಿ ಬದುಕಿನ ಜೊತೆಗೆ ಕನ್ನಡದ ನಾಡುನುಡಿಯ ಅಭಿವೃದ್ಧಿಗೂ ಕೂಡ ತಮ್ಮನ್ನು ಸಮರ್ಪಿಸಿಕೊಂಡವರು. ಅವರ ಚಿತ್ರರಂಗದ ಈ ಸಾಧನೆ ಮತ್ತೆ ಅವರ ಸಮಾಜಕ್ಕೆ ಕೊಟ್ಟಂತಹ ಕೊಡುಗೆ ಮಾದರಿಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಪ್ರತಿ ವರ್ಷ ಒಬ್ಬ ಯುವ ನಾಯಕ ನಟರಿಗೆ ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿ ರಾಜ್ಯಮಟ್ಟದ ಯುವ ನಾಯಕ ಕನ್ನಡ ರಾಜ್ಯ ಪ್ರಶಸ್ತಿಯನ್ನು ನೀಡಬೇಕೆಂದು ಒತ್ತಾಯಿಸಿದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ ಮಾತನಾಡಿ, ನಟ ಪುನೀತ್ ಅವರು ಚಿಕ್ಕ ವಯಸ್ಸಿನಲ್ಲೇ ದೊಡ್ಡಸಾಧನೆ ಮಾಡಿ ಕನ್ನಡ ಚಿತ್ರ ರಂಗದ ಜೊತೆಗೆ ಸಮಾಜ ಸೇವೆಯಲ್ಲಿ ಸಹ ತಮ್ಮನ್ನು ತೊಡಗಿಸಿಕೊಂಡಿದ್ದರು. ಎಲೆಮರೆಕಾಯಿಯಂತೆ ಅನಾಥಾಶ್ರಮ, ವೃದ್ಧಾಶ್ರಮ, ಶಾಲೆಗಳನ್ನು ನಡೆಸುತ್ತಾ ಬಂದಿದ್ದರು. ಜೊತೆಗೆ ನೇತ್ರದಾನದ ಬಗ್ಗೆ ರಾಜ್ಯದಲ್ಲಿ ಅರಿವು ಮೂಡಿಸುವ ಜೊತೆಗೆ ತಾವೂ ನೇತ್ರದಾನ ಮಾಡಿ ಹಲವರಿಗೆ ಪ್ರೇರೇಪಣೆಯಾಗಿದ್ದರು. ಅವರ ಅಕಾಲಿಕ ನಿಧನ ತುಂಬಲಾಗದ ನಷ್ಟ ಎಂದರು. ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿದರು.

ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಾಜ್ಯ ನಿರ್ದೇಶಕ ಎಂ.ಆರ್.ಬಾಲಕೃಷ್ಣ, ಮುಡಾ ಸದಸ್ಯೆ ಲಕ್ಷಿ÷್ಮÃದೇವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ರಾಜ್ಯ ನಿರ್ದೇಶಕಿ ರೇಣುಕ ರಾಜ್, ಮೃಗಾ ಲಯ ಪ್ರಾಧಿಕಾರದ ಸದಸ್ಯರಾದ ಜ್ಯೋತಿ ರೇಚಣ್ಣ, ನಗರ ಪಾಲಿಕೆ ಸದಸ್ಯರಾದ ಜಗದೀಶ್, ಕೃಷ್ಣರಾಜ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಬಿಜೆಪಿ ಮುಖಂಡರಾದ ಕೇಬಲ್ ಮಹೇಶ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ವಿಕ್ರಂ ಅಯ್ಯಂಗಾರ್, ರವಿತೇಜ, ಸುಚೇಂದ್ರ, ವಿನಯ್ ಕಣಗಾಲ್, ನವೀನ್ ಕೆಂಪಿ, ರಂಗನಾಥ್ ಹಾಗೂ ಇತರರು ಸಂತಾಪ ಸಭೆಯಲ್ಲಿ ಹಾಜರಿದ್ದರು.