ಕಾರ್ಮಿಕರ ಕೆಲಸದ ಅವಧಿ 8ರಿಂದ 10 ತಾಸಿಗೆ ವಿಸ್ತರಣೆ  ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಕೈಗಾರಿಕೆ ಹಾಗೂ ಇನ್ನಿತರ ಉದ್ಯಮ ಸಂಸ್ಥೆಗಳಲ್ಲಿ ದುಡಿ ಯುವ ಕಾರ್ಮಿಕರ ಕೆಲಸದ ಅವಧಿ ಯನ್ನು 8 ತಾಸಿನಿಂದ 10 ತಾಸಿಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಕಾರ್ಮಿಕ ಇಲಾಖೆ ಅಧಿ ಸೂಚನೆ ಹೊರಡಿಸಿದ್ದು, ತಕ್ಷಣದಿಂದಲೇ (ಮೇ 22) ಆ.21ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ದಿನದ ಕೆಲಸದ ಅವಧಿಯನ್ನು 10 ತಾಸಿಗೆ ನಿಗದಿಗೊಳಿಸ ಲಾಗಿದೆ. ವಾರಕ್ಕೆ 60 ತಾಸು ಮಾತ್ರ ಒಬ್ಬ ಕಾರ್ಮಿಕನಿಗೆ ಕೆಲಸ ಕೊಡಬೇಕು. ಒಂದು ವೇಳೆ ಹೆಚ್ಚುವರಿ ಕೆಲಸ ಮಾಡಿಸಿದರೆ ನಿಯಮಾನುಸಾರ ಅದಕ್ಕೆ ವೇತನ ಕೊಡು ವಂತೆಯೂ ಸೂಚಿಸಲಾಗಿದೆ. ಬಾಲ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳು ವಂತಿಲ್ಲವೆಂದು ನಿರ್ಬಂಧ ಹೇರಲಾಗಿದೆ. ಕಾರ್ಮಿಕ ಕಾಯ್ದೆಗೆ ಕೇಂದ್ರ ಸರಕಾರ ತಿದ್ದುಪಡಿ ತರಲು ಹೊರಟಿದೆ.